ಕಳೆದ ಹಲವು ವರ್ಷಗಳಿಂದ ಫಿಲ್ಮ್ ಸಿಟಿ ಬಗ್ಗೆ ಮಾತುಗಳು ಕೇಳುತ್ತಲೇ ಬರುತ್ತಿವೆ. ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಈ ಫಿಲ್ಮ್ ಸಿಟಿಯನ್ನು ರಾಮನಗರದಲ್ಲಿ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ, ಅದು ಅಲ್ಲಿ ಆಗಲಿಲ್ಲ. ಹಲವು ಸರಕಾರಗಳು ಬಂದಾಗ ಬೆಂಗಳೂರಿನಲ್ಲೇ ಫಿಲ್ಮ್ ಸಿಟಿ ಮಾಡುವಂತೆ ಒತ್ತಡ ಹೇರಲಾಗಿತ್ತು. ಅದು ಆಗಲಿಲ್ಲ. ಇದೀಗ ಮೈಸೂರಿನಲ್ಲಿ ಫಿಲ್ಮ್ ಸಿಟಿ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಹಿಂದೆಯೇ ಫಿಲ್ಮ್ ಸಿಟಿಯನ್ನು ಮೈಸೂರಿನಲ್ಲಿ ಮಾಡುವುದಾಗಿ ಹೇಳಿಕೆ ನೀಡಲಾಗಿದ್ದರೂ, ಅದರ ಕಾರ್ಯಚಟುವಟಿಕೆಗಳು ಆಗುವತನಕ ಯಾವುದನ್ನೂ ನಂಬಲು ಸಾಧ್ಯವಿಲ್ಲ ಎನ್ನವಂತಹ ಅನುಭವಗಳು ಈ ಹಿಂದೆ ಆಗಿವೆ. ಹೀಗಾಗಿ ಬಸವರಾಜ ಬೊಮ್ಮಾಯಿ ಅವರು ಮಾತು ಮಹತ್ವ ಪಡೆದುಕೊಂಡಿದೆ. ಅವರು ಕೇವಲ ಮೈಸೂರಿನಲ್ಲಿ ಫಿಲ್ಮ್ ಸಿಟಿ ಮಾಡಲಾಗುವುದು ಎನ್ನುವ ಹೇಳಿಕೆ ಮಾತ್ರ ಕೊಟ್ಟಿಲ್ಲ. ಜಾಗ ಗುರುತಿಸಿದ್ದಾಗಿಯೂ ಅವರು ಹೇಳಿದ್ದಾರೆ. ಇದನ್ನೂ ಓದಿ : ಶಿವರಾಜ್ ಕುಮಾರ್ ಗಾಗಿ ಚಿತ್ರ ಮಾಡಲಿದೆ ಹೊಂಬಾಳೆ ಫಿಲ್ಮ್ಸ್: ನಿರ್ದೇಶಕರು ಯಾರು?
ನಿನ್ನೆ ಚಾರ್ಲಿ ಸಿನಿಮಾವನ್ನು ನೋಡಿಕೊಂಡು ಬಂದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಸಿಎಂ, “ಈಗಾಗಲೇ ಮೈಸೂರಿನಲ್ಲಿ ಫಿಲ್ಮ್ ಸಿಟಿ ಮಾಡಲು ಜಾಗ ಗುರುತಿಸಲಾಗಿದೆ. ಖಾಸಗಿ ಅವರ ಸಹಭಾಗಿತ್ವದಲ್ಲಿ ಫಿಲ್ಮ್ ಸಿಟಿ ಆದಷ್ಟು ಬೇಗ ಮಾಡಲಾಗುವುದು. ಆಧುನಿಕ ತಂತ್ರಜ್ಞಾನವನ್ನು ಅಲ್ಲಿ ಬಳಸಿಕೊಳ್ಳಲಾಗುವುದು’ ಎಂದಿದ್ದಾರೆ.