ಬಳ್ಳಾರಿ: ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ಆರೋಪಿ ದರ್ಶನ್‌ಗೆ (Darshan) ಬಳ್ಳಾರಿ ಜಿಲ್ಲಾಸ್ಪತ್ರೆಯಿಂದ ಮೆಡಿಕಲ್ ಬೆಡ್ (Medical Bed) ಹಾಗೂ ದಿಂಬನ್ನು ಒದಗಿಸಲಾಗಿದೆ.
ಮಂಗಳವಾರ ಮೆಡಿಕಲ್ ವರದಿ ಬಂದ ಬಳಿಕ ಜೈಲಾಧಿಕಾರಿ ಈ ಕುರಿತು ವೈದ್ಯಾಧಿಕಾರಿಗಳಿಗೆ ತಿಳಿಸಿದ್ದರು. ಈ ಹಿನ್ನೆಲೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಇಂದು (ಬುಧವಾರ) ದರ್ಶನ್‌ಗೆ ಬೆಡ್ ಮತ್ತು ದಿಂಬನ್ನು ನೀಡಲಾಗಿದೆ. ವಿಮ್ಸ್ ನ್ಯೂರೋ ಸರ್ಜನ್ ಡಾ. ವಿಶ್ವನಾಥ್ ಬೆಡ್ ಮತ್ತು ದಿಂಬು ನೀಡುವಂತೆ ವರದಿಯಲ್ಲಿ ಉಲ್ಲೇಖಿಸಿದ್ದರು. ಹೀಗಾಗಿ ಇಂದು ಅಂಬುಲೆನ್ಸ್ ಮೂಲಕ ಬೆಡ್ ಮತ್ತು ದಿಂಬನ್ನು ರವಾನಿಸಲಾಗಿದೆ. ಇದನ್ನೂ ಓದಿ: ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಅರಣ್ಯ ಇಲಾಖೆಗೆ 500 ಕೋಟಿ ಪಾವತಿಸಿಲ್ಲ : ಈಶ್ವರ್ ಖಂಡ್ರೆ
ಇನ್ನು ಜೈಲು ಸಿಬ್ಬಂದಿ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ತಪಾಸಣೆ ಮಾಡಿ ಹೈ ಸೆಕ್ಯೂರಿಟಿ ಸೆಲ್ ಒಳಗೆ ಬಿಟ್ಟಿದ್ದಾರೆ. ವೈದ್ಯರ ಮೆಡಿಕಲ್ ರಿಪೋರ್ಟ್ ಆಧರಿಸಿ ಜೈಲು ಅಧಿಕಾರಿಗಳು ಆರೋಪಿ ದರ್ಶನ್‌ಗೆ ಮೆಡಿಕಲ್ ಬೆಡ್, ಚೇರ್ ಹಾಗೂ ದಿಂಬನ್ನು ಕೊಟ್ಟಿದ್ದಾರೆ. ಇದನ್ನೂ ಓದಿ: 2025-26ರ ಹಿಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳ – ಎಷ್ಟು ಏರಿಕೆಯಾಗಿದೆ?