ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ ಬೆನ್ನು ನೋವಿನ (Back pain) ಸಮಸ್ಯೆಯಿಂದ ಬಳಲುತ್ತಿದ್ದಾರಂತೆ. ಪುಷ್ಪ 2 ಸಿನಿಮಾದ ಹಾಡಿನ ಚಿತ್ರೀಕರಣದಲ್ಲಿ ತೊಡಗಿದ್ದ ಅವರಿಗೆ ಏಕಾಏಕಿ ಬೆನ್ನು ನೋವು ಕಾಣಿಸಿಕೊಂಡಿದೆ. ಹಾಗಾಗಿ ಕೂಡಲೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಎರಡು ವಾರಗಳ ಕಾಲ ರೆಸ್ಟ್ ತಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಪುಷ್ಪ 2 ಸಿನಿಮಾದ ಶೂಟಿಂಗ್ ಸ್ಥಗಿತಗೊಂಡಿದೆ.
‘ಪುಷ್ಪ 2’ ಸಿನಿಮಾದ ಬಗ್ಗೆ ಅತೀವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಹಾಗಾಗಿ ಪದೇ ಪದೇ ಸಿನಿಮಾದ ಬಗ್ಗೆ ಅಭಿಮಾನಿಗಳು ಕೇಳುತ್ತಲೇ ಇರುತ್ತಾರೆ. ಹಾಗಾಗಿ ಮೊನ್ನೆಯಷ್ಟೇ ಅಲ್ಲು ಅರ್ಜುನ್ ಅವರೇ ಹೊಸದೊಂದು ಅಪ್ ಡೇಟ್ ನೀಡಿದ್ದು, ಹಾಡಿನ ಚಿತ್ರೀಕರಣವನ್ನು (Shooting) ರಾಮೋಜಿರಾವ್ ಸ್ಟುಡಿಯೋದಲ್ಲಿ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಮುಂದಿನ ವರ್ಷ ಆಗಸ್ಟ್ 15ರಂದು ಸಿನಿಮಾ ರಿಲೀಸ್ ಮಾಡುವ ಕುರಿತು ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ.
ಪುಷ್ಪ ಸಿನಿಮಾದ ‘ವೂಂ ಅಂಟಾವ ಮಾವ..’ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಈ ಹಾಡೇ ಪುಷ್ಪ ಸಿನಿಮಾಗೆ ಜನರನ್ನೂ ಕರೆತಂದಿದ್ದು. ಸೋಷಿಯಲ್ ಮೀಡಿಯಾದಲ್ಲಂತೂ ಕೋಟ್ಯಂತರ ಜನರು ರೀಲ್ಸ್ ಮಾಡಿದ್ದರು. ಈ ಹಾಡಿಗೆ ಸಮಂತಾ (Samantha) ಸಖತ್ತಾಗಿಯೇ ಸೊಂಟ ಬಳುಕಿಸಿದ್ದರು. ಈ ಯಶಸ್ಸನ್ನು ಮತ್ತೊಂದು ಬಾರಿ ಬಳಸಿಕೊಳ್ಳಲು ನಿರ್ದೇಶಕರು ಪ್ಲ್ಯಾನ್ ಮಾಡಿದ್ದಾರೆ. ಪುಷ್ಪ 2 ಸಿನಿಮಾದಲ್ಲೂ ಐಟಂ ಸಾಂಗ್ (Item Song) ವೊಂದಿದ್ದು, ಅದಕ್ಕೆ ಸಮಂತಾ ಅವರೇ ಡ್ಯಾನ್ಸ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಡಾನ್ಸ್ ಮಾಸ್ಟರ್ ಮತ್ತು ನಿರ್ದೇಶಕರು ಸಮಂತಾ ಜೊತೆ ಒಂದು ಸುತ್ತಿನ ಮಾತುಕತೆ ಕೂಡ ನಡೆಸಿದ್ದಾರೆ. ಸಮಂತಾ ಕೂಡ ಆ ಹಾಡಿನಲ್ಲಿ ಭಾಗಿಯಾಗಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯದಲ್ಲೇ ಶೂಟಿಂಗ್ ಕೂಡ ಶುರು ಮಾಡಲಿದ್ದಾರಂತೆ ಸಮಂತ.
ನಿರ್ದೇಶಕ ಸುಕುಮಾರ್- ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಮತ್ತೊಮ್ಮೆ ಬಾಕ್ಸಾಫೀಸ್ ಬ್ಯಾಂಗ್ ಮಾಡೋದಿಕ್ಕೆ ಭರ್ಜರಿಯಾಗಿ ಸಜ್ಜಾಗ್ತಿದ್ದಾರೆ. ಪುಷ್ಪ ಮೂಲಕ ದಕ್ಷಿಣ ಧ್ರುವದಿಂದ ಉತ್ತರ ಧ್ರುವದವರೆಗೂ ಧಮಾಕ ಎಬ್ಬಿಸಿದ್ದ ಈ ಜೋಡಿ ಸೀಕ್ವೆಲ್ ಮೂಲಕ ಬೆಳ್ಳಿತೆರೆಯಲ್ಲಿ ಕಮಾಲ್ ಮಾಡಲು ಹೊರಟಿದೆ. ಪುಷ್ಪ 2 (Pushpa 2) ಸಣ್ಣ ಟೀಸರ್ ಹಂಗಾಮ ಕ್ರಿಯೇಟ್ ಮಾಡಿದೆ. ಕಾಣೆಯಾಗಿದ್ದ ಪುಷ್ಪ ಹೊಸ ಅವತಾರದಲ್ಲಿ ಪ್ರತ್ಯಕ್ಷನಾಗುವ ಮೂಲಕ ಇನ್ಮುಂದೆ ನನ್ನದೇ ರೂಲ್ ಎಂಬ ಸಂದೇಶ ರವಾನಿಸಿದ್ದಾನೆ.