ಹುಬ್ಬಳ್ಳಿ: ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಒಂದು ತಿಂಗಳ ಹಸುಗೂಸನ್ನು ನಗರದ ಸ್ಪರ್ಶ ಆಸ್ಪತ್ರೆಯಿಂದ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಅಂಬುಲೆನ್ಸ್ ಮೂಲಕ ಝೀರೋ ಟ್ರಾಫಿಕ್‍ನಲ್ಲಿ ಕೊಂಡೊಯ್ಯಲಾಗಿದೆ.
ಬುಧವಾರ ರಾತ್ರಿ 11.45ರ ವೇಳೆ ಹುಬ್ಬಳ್ಳಿಯಿಂದ ವಾಹನ ಹೊರಟಿದೆ. ಅದರ ಉಸ್ತುವಾರಿಯನ್ನು ಉತ್ತರ ಸಂಚಾರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ರತನಕುಮಾರ ಜೀರಗ್ಯಾಳ ಹಾಗೂ ಸಿಬ್ಬಂದಿ ವಹಿಸಿಕೊಂಡಿದ್ದಾರೆ.
ಮಗು ಹುಟ್ಟುವಾಗಲೇ ಹೃದಯದಲ್ಲಿ ಚಿಕ್ಕ ರಂಧ್ರವಿತ್ತು. ಸ್ಪರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ತುರ್ತು ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ ಕಾರಣ ಬೆಂಗಳೂರಿಗೆ ಕರೆದೊಯ್ಯಲಾಗಿದೆ.
ಸದ್ಯ ಪೊಲೀಸರ ಸಹಕಾರಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.