ಹೈದರಾಬಾದ್: ತೆಲಂಗಾಣದ ಮಂಚೇರಿಯಲ್ ನಗರದ ಸರ್ಕಾರಿ ಆಸ್ಪತ್ರೆಯ ಬಾತ್ ರೂಂನಲ್ಲಿ ಆಗ ತಾನೇ ಜನಿಸಿದ ಕಂದಮ್ಮನನ್ನು ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ಸುತ್ತಿ ಇಟ್ಟಿರುವುದು ಬೆಳಕಿಗೆ ಬಂದಿದೆ.
ಇಡೀ ರಾತ್ರಿ ಆ ಪ್ಲಾಸ್ಟಿಕ್ ಬ್ಯಾಗ್‍ನಲ್ಲೇ ಕಳೆದಿದ್ದ ಆ ಶಿಶುವನ್ನು ಬೆಳಗ್ಗೆ ಸಿಬ್ಬಂದಿ ಕಂಡ ತಕ್ಷಣವೇ ಪ್ಲಾಸ್ಟಿಕ್ ಬ್ಯಾಗ್‍ನಿಂದ ಹೊರತೆಗೆದು ಚಿಕಿತ್ಸೆ ಕೊಡಿಸಿದ್ರೂ ಮಗುವನ್ನು ಬದುಕುಳಿಸಲು ಸಾಧ್ಯವಾಗಲಿಲ್ಲ.
Advertisement
ಗಂಡುಶಿಶುವಿಗೆ ಜನ್ಮ ನೀಡಿದ ಮಹಿಳೆ ಭಾನುವಾರ ಸಂಜೆ ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ಕಂದಮ್ಮನನ್ನು ಸುತ್ತಿ ಆಸ್ಪತ್ರೆಯ ಬಾತ್‍ರೂಂನಲ್ಲಿ ಮಗುವನ್ನು ಇಟ್ಟು ಬಳಿ ಪರಾರಿಯಾಗಿದ್ದಾಳೆ ಎನ್ನಲಾಗುತ್ತಿದೆ. ಮುಂಜಾನೆ ವಾರ್ಡ್ ಸಿಬ್ಬಂದಿ ಕಸ ಗುಡಿಸಲು ಹೋದಾಗ ಶಿಶುವನ್ನು ಕಂಡು ಬೆಚ್ಚಿಬಿದ್ದರು. ತಕ್ಷಣವೇ ವೈದ್ಯರನ್ನು ಕರೆದು ಮಗುವನ್ನು ಪ್ಲಾಸ್ಟಿಕ್ ಬ್ಯಾಗ್‍ನಿಂದ ಹೊರತೆಗೆದು ನಂತರ ಐಸಿಯುಗೆ ಸೇರಿಸಿದರು. ಆದ್ರೆ ಇಡೀ ರಾತ್ರಿ ಉಸಿರು ಕಟ್ಟಿದಂತಾಗಿದ್ದ ಹಸುಗೂಸು ಬದುಕುಳಿಯಲಿಲ್ಲ.
Advertisement
Advertisement
ಸದ್ಯ ಆರೋಪಿ ತಾಯಿಗಾಗಿ ಆಸ್ಪತ್ರೆ ಹಾಗೂ ವಾರ್ಡ್‍ನ ಸುತ್ತಮುತ್ತ ಅಳವಡಿಸಿದ್ದ ಸಿಸಿ ಟಿವಿಗಳನ್ನು ಪರಿಶೀಲಿಸಲಾಗುತ್ತಿದೆ. ಈ ಹಿಂದೆ ತಮಿಳುನಾಡಿನಲ್ಲಿ ಕೃಷ್ಣಗಿರಿ ಜಿಲ್ಲೆಯಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಅಲ್ಲಿ ಪೊದೆಯೊಂದರ ಮಧ್ಯೆ ಗಂಡು ಶಿಶು ಪತ್ತೆಯಾಗಿದ್ದು, ಮೈತುಂಬ ಇರುವೆಗಳು ಕಡಿದ ಸ್ಥಿತಿಯಲ್ಲಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ ಮಾರನೇ ದಿನ ಮಗು ಸಾವನ್ನಪ್ಪಿತ್ತು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv