ವೆಸ್ಟರ್ನ್ ಸ್ಟೈಲ್ ನಲ್ಲಿ ಪ್ರಣೀತಾಗೆ ಸೀಮಂತ

Public TV
1 Min Read
Praneetha 1

ಹುಭಾಷಾ ಕನ್ನಡ ನಟಿ ಪ್ರಣೀತಾ (Praneetha) ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗಷ್ಟೇ ಈ ವಿಚಾರವನ್ನ ಪ್ರಣೀತಾ ವಿಭಿನ್ನವಾಗಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಇದೀಗ ಪ್ರಣೀತಾ ಈ ಖುಷಿಯನ್ನ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಭರ್ಜರಿ ಪಾರ್ಟಿ ಕೊಡೋದ್ರ ಮೂಲಕ ಹೆಚ್ಚಿಸಿಕೊಂಡಿದ್ದಾರೆ. ಬೆಂಗಳೂರಲ್ಲಿ ಪ್ರಣೀತಾಳ ಅದ್ದೂರಿ ಬೇಬಿ ಶಾವರ್ (Baby Shower) ನಡೆದಿದೆ.

Praneetha 3

ತುಂಬು ಗರ್ಭಿಣಿ ಪ್ರಣೀತಾ ನಗರದ ಪ್ರತಿಷ್ಟಿತ ರೆಸಾರ್ಟ್ನಲ್ಲಿ ಬೇಬಿ ಶಾವರ್ ಪಾರ್ಟಿ ಆಯೋಜಿಸಿದ್ದು ಅದರ ಫೋಟೋಗಳನ್ನ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ಪಕ್ಕಾ ವೆಸ್ಟರ್ನ್ ಸ್ಟೈಲ್ ಬೇಬಿಶಾವರ್ ಪಾರ್ಟಿಯಾಗಿದ್ದು ಪ್ರಣಿತಾ ಕುಟುಂಬ ವೈಟ್ ಅಂಡ್ ವೈಟ್ ಥೀಮ್ ಉಡುಗೆಯಲ್ಲಿ ಮಿಂಚಿದೆ. ಪತಿ, ನಾಲ್ಕು ವರ್ಷದ ಮಗಳು ಆರ್ನಾ ಡ್ರೆಸ್‌ಕೋಡ್‌ನಲ್ಲಿ ಕಂಗೊಳಿಸಿದ್ದಾರೆ. ಕೇಕ್ ಕಟ್ ಮಾಡಿ ಖುಷಿಪಟ್ಟಿದ್ದಾರೆ.

Praneetha 2

ಸಾಮಾನ್ಯವಾಗಿ ಪ್ರಣಿತಾ ಹಿಂದೂ ಸಂಪ್ರದಾಯದಲ್ಲಿ ಬರುವ ಎಲ್ಲಾ ಪೂಜೆ ಪುನಸ್ಕಾರ ಆಚರಣೆಯನ್ನ ಪಾಲಿಸುತ್ತಾ ಬಂದವರು, ಹಿಂದೆ ಚೊಚ್ಚಲ ಗರ್ಭಿಣಿ ಇದ್ದಾಗ ಸಾಂಪ್ರದಾಯಿಕ ಶೈಲಿಯಲ್ಲೇ ಸೀಮಂತ ಮಾಡಿಕೊಂಡಿದ್ದರು. ಇದೀಗ ಎರಡನೇ ಮಗು ಆಗಮನದ ಖುಷಿಯಲ್ಲಿ ಬದಲಾವಣೆಗೆಂದು ವೆಸ್ಟರ್ನ್ ಸ್ಟೈಲ್ ಪಾಲಿಸಿದಂತೆ ಕಾಣುತ್ತೆ, ಬಹುಶಃ ಪ್ರಣೀತಾಗೆ ಮುಂದೆ ಸಾಂಪ್ರದಾಯಿಕ ಸೀಮಂತ ಮಾಡಿಕೊಳ್ಳುವ ಸೂಚನೆಯೂ ಇದೆ. ಇನ್ನು ವಿದೇಶದಲ್ಲಿ ಹಲವೆಡೆ ಬೇಬಿಶಾವರ್ ದಿನದಲ್ಲಿ ಜೆಂಡರ್ ರಿವೀಲ್ ಕೂಡ ನಡೆಯುತ್ತೆ, ಆದರೆ ಭಾರತದಲ್ಲಿ ಇದು ಅಪರಾಧ. ಇನ್ನು ವಿದೇಶಗಳಲ್ಲಿ ಹುಟ್ಟೋ ಮಗು ಹೆಣ್ಣೋ ಗಂಡೋ ಎಂಬ ಥೀಮ್‌ನಲ್ಲಿ ಬೇಬಿ ಶಾವರ್ ಪಾರ್ಟಿ ಅಲಂಕಾರ ಮಾಡಲಾಗುವುದು ವಿಶೇಷ.

 

ಪ್ರಣೀತಾ ಬೇಬಿ ಶಾವರ್ ಪಾರ್ಟಿಯಲ್ಲಿ ಬಿಳಿ-ನೀಲಿ-ಪಿಂಕ್ ಮಿಶ್ರಿತ ಬಣ್ಣದ ಬಲೂನ್‌ಗಳನ್ನ ಕಟ್ಟಿ ಸಿಂಗರಿಸಲಾಗಿದೆ. ಕಾರ್ಯಕ್ರಮದಲ ಸೆಂಟರ್ ಆಫ್ ಅಟ್ರಾಕ್ಷನ್ ಆಗಿರುವ ಪ್ರಣೀತಾ ಥೀಮ್‌ಗೆ ತಕ್ಕಂತೆ ವೆಸ್ಟರ್ನ್ ಸ್ಟೈಲ್ ಗೌನ್ ಧರಿಸಿ ಸರಳ ಲುಕ್‌ನಲ್ಲೇ ಆಕರ್ಷಕವಾಗಿ ಕಾಣುತ್ತಾರೆ. ಮುಂದಿನ ತಿಂಗಳೇ ಎರಡನೇ ಮಗುವಿಗೆ ತಾಯಿಯಾಗುವ ನಿರೀಕ್ಷೆಯಲ್ಲಿದ್ದಾರೆ ಪ್ರಣೀತಾ. ಮೊದಲ ಮಗು ಜನಿಸಿದ ಕೆಲವೇ ತಿಂಗಳಲ್ಲಿ ಮತ್ತೆ ಸಿನಿಮಾ/ಮಾಡೆಲಿಂಗ್/ಜಾಹೀರಾತುಗಳಲ್ಲಿ ಪ್ರಣೀತಾ ಸಕ್ರಿಯರಾಗಿದ್ದರು. ಇದೀಗ ಎರಡನೇ ಮಗು ಜನಿಸಿದ ಬಳಿಕವೂ ಅದೇ ಧ್ಯೇಯ ಹೊಂದಿದ್ದಾರೆ ಎನ್ನಲಾಗ್ತಿದೆ. ಒಟ್ನಲ್ಲಿ ಪ್ರಣೀತಾ ಸದಾ ಸುದ್ದಿಯಲ್ಲಿರ್ತಾರೆ.

Share This Article