ಕನ್ನಡದ `ರಾಜ ರಾಜೇಂದ್ರ’ (Raja Rajendra) ಸಿನಿಮಾದಲ್ಲಿ ಶರಣ್‌ಗೆ ನಾಯಕಿಯಾಗಿದ್ದ ಇಶಿತಾ ದತ್ತಾ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಇದೀಗ ನಟಿ ಇಶಿತಾ (Ishita Dutta), ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಗುಡ್ ನ್ಯೂಸ್ ಬಗ್ಗೆ ಇಶಿತಾ- ವತ್ಸಲ್ ಶೇಠ್ (Vatsal Sheth) ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದಾರೆ.
View this post on Instagram
ಕಿರುತೆರೆಯ ಸಾಕಷ್ಟು ಹಿಂದಿ ಸೀರಿಯಲ್‌ಗಳಲ್ಲಿ ನಾಯಕಿಯಾಗಿ ಇಶಿತಾ ಮಿಂಚಿದ್ದಾರೆ. 2015ರಲ್ಲಿ ತೆರೆಕಂಡ ರಾಜ ರಾಜೇಂದ್ರ ಸಿನಿಮಾದಲ್ಲಿ ಶರಣ್‌ಗೆ (Sharan) ನಾಯಕಿಯಾಗಿ ಇಶಿತಾ ದತ್ತಾ ನಟಿಸಿದ್ದರು. ಬಾಲಿವುಡ್‌ನ (Bollywood) ದೃಶ್ಯಂ, ದೃಶ್ಯಂ 2 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ಹಿಂದಿ ಚಿತ್ರರಂಗದಲ್ಲಿ ಸೌತ್‌ನಷ್ಟು ಶಿಸ್ತಿಲ್ಲ: ಕಾಜಲ್ ಅಗರ್‌ವಾಲ್
View this post on Instagram
2017ರಲ್ಲಿ ನಟ ವತ್ಸಲ್ ಶೇಠ್ ಅವರನ್ನ ಪ್ರೀತಿಸಿ, ಇಶಿತಾ ಮದುವೆಯಾಗಿದ್ದಾರೆ. ಇದೀಗ ಮಗುವಿನ ಬರುವಿಕೆಯ ಸಂತಸದಲ್ಲಿದ್ದಾರೆ. ಬೇಬಿ ಆನ್ ಬೋರ್ಡ್ ಅಂತಾ ಅಡಿಬರಹ ನೀಡಿ, ಬೇಬಿ ಬಂಪ್ ಫೋಟೋವನ್ನ ನಟಿ ಹಂಚಿಕೊಂಡಿದ್ದಾರೆ. ಸಿಹಿಸುದ್ದಿ ನೀಡಿರುವ ಈ ಜೋಡಿಗೆ ಫ್ಯಾನ್ಸ್ ಶುಭಹಾರೈಸುತ್ತಿದ್ದಾರೆ.