ಬ್ಯಾಂಕಾಕ್: ಕೆಲವು ಜನರಿಗೆ ಬೆಳಗ್ಗೆ ಹೊತ್ತು ಕಾಫಿ ಕುಡಿಯದಿದ್ದರೆ ಅವರ ದಿನ ಶುರು ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಕೋತಿ ಮರಿಯೊಂದು ಕಾಫಿ ಕುಡಿದು 10 ಗಂಟೆಗಳ ಕಾಲ ಪ್ರಜ್ಷೆ ತಪ್ಪಿದ ಘಟನೆ ಥೈಲ್ಯಾಂಡ್ ನಲ್ಲಿ ನಡೆದಿದೆ.
ಲಾಂಗ್ ಟೇಲ್ ಮಕಾವ್ ಕೋತಿ ಮರಿಯೊಂದು ಪ್ರವಾಸಿಗರೊಬ್ಬರ ಗಾಡಿ ಮೇಲೆ ಎಗರಿ, ಗಾಡಿಯ ಹ್ಯಾಂಡಲ್ ಗೆ ನೇತುಹಾಕಿದ್ದ ಬ್ಯಾಗ್ ಕಸಿದುಕೊಂಡಿತ್ತು. ಅದರಲ್ಲಿದ್ದ ಐಸ್ ಕಾಫಿಯನ್ನು ಕುಡಿದಿತ್ತು. ದೇಹದಲ್ಲಿ ಕಾಫೀನ್ ಅಂಶ ಹೆಚ್ಚಾಗಿ ಕೆಲವೇ ನಿಮಿಷಗಳಲ್ಲಿ ಕೋತಿ ಕುಸಿದು ಬಿದ್ದಿದೆ.
Advertisement
6 ತಿಂಗಳ ಕೋತಿ ಮರಿ ಸ್ವಲ್ಪ ಸಮಯದ ಹಿಂದೆ ಪ್ರವಾಸಿಗರು ಕಾಫಿ ಕುಡಿಯೋದನ್ನ ನೋಡಿ ಅವರಂತಯೇ ಕಾಫಿ ಕುಡಿಯಲು ಪ್ರಯತ್ನಿಸಿತ್ತು ಎಂದು ಇಲ್ಲಿನ ಫೇಸ್‍ಬುಕ್ ಗುಂಪೊಂದು ಪೋಸ್ಟ್ ಮಾಡಿದೆ.
Advertisement
Advertisement
ಕೋತಿ ಮರಿಯನ್ನು ನೋಡುತ್ತಿದ್ದ ಜನರು ಅದು ಪ್ರಜ್ಞೆ ತಪ್ಪುತ್ತಿದ್ದಂತೆ ಪಶುವೈದ್ಯರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪಶುವೈದ್ಯರು ಕೋತಿಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದರು. ಇದಾದ 10 ಗಂಟೆಗಳ ನಂತರ ಕೋತಿಗೆ ಪ್ರಜ್ಞೆ ಬಂದಿದೆ.
Advertisement
ಕೋತಿ ಮರಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದ ಮೇಲೆ ಅದನ್ನು ಅದರ ಗುಂಪಿನ ಜೊತೆ ಬಿಡಲಾಗಿದೆ. ಮಕಾವ್ ಕೋತಿಮರಿಯ ಚೇತರಿಕೆ ಮತ್ತು ಅದರ ಕುಟುಂಬದೊಂದಿಗೆ ಮರಳಿ ಸೇರಿಸಿದ ಫೋಟೋಗಳನ್ನು ಫೇಸ್ ಬುಕ್ ಗುಂಪು ಹಂಚಿಕೊಂಡಿದೆ.