ಬರೋಬ್ಬರಿ ಹನ್ನೊಂದು ವರ್ಷಗಳ ನಂತರ ತಂದೆಯಾಗಿದ್ದಾರೆ ತೆಲುಗು ನಟ ರಾಮ್ ಚರಣ್ (Ram Charan). ಉದ್ದೇಶ ಪೂರ್ವಕವಾಗಿಯೇ ಮಗು ಹೊಂದದಿರಲು ರಾಮ್ ಚರಣ್ ಮತ್ತು ಉಪಾಸನಾ ಸಂಕಲ್ಪ ಮಾಡಿದ್ದರು. ಕುಟುಂಬದವರ ಒತ್ತಡವಿದ್ದರೂ, ತಾವು ಹೊಂದಿದ್ದ ಸಂಕಲ್ಪವನ್ನು ಅವರು ಮುರಿದಿರಲಿಲ್ಲ. ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ಕುಟುಂಬದಲ್ಲಿ ಸಂಭ್ರಮ ಹೆಚ್ಚಿಸಿದ್ದಾರೆ ಉಪಾಸನಾ.
ಇಂದು ಮಗುವನ್ನು ಕರೆದುಕೊಂಡು ಮನೆಗೆ ಹೋಗಿದ್ದಾರೆ ರಾಮ್ ಚರಣ್. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಮ್ ಚರಣ್, ‘ಮಗುವನ್ನು ಮೊದಲ ಬಾರಿಗೆ ನೋಡಿದಾಗ ಆದ ಆನಂದವನ್ನು ಹೇಳಲು ಕಷ್ಟ. ಹೇಳಿದರೆ, ಅದು ಕೃತಕ ಅನಿಸಬಹುದು. ಅಷ್ಟೊಂದು ಸಂಭ್ರಮವನ್ನು ಮಗು ಕೊಟ್ಟಿದೆ’ ಎಂದು ಹೇಳಿದರು. ಇದನ್ನೂ ಓದಿ:‘ಭರ್ಜರಿ ಬ್ಯಾಚುಲರ್ಸ್’ ಜೊತೆ ಬರುತ್ತಿದ್ದಾರೆ ರವಿಚಂದ್ರನ್, ರಚಿತಾ ರಾಮ್
ಮಗು ತಾಯಿಯನ್ನು ಹೋಲುತ್ತಾ? ಅಥವಾ ನಿಮ್ಮನ್ನು ಹೋಲುತ್ತಾ ಎನ್ನುವ ಮಾಧ್ಯಮದವರ ಪ್ರಶ್ನೆಗೆ ‘ ಅದು ನನ್ನನ್ನೇ ಹೋಲುತ್ತದೆ’ ಎಂದು ಹೇಳಿ ಸಂಭ್ರಮಿಸಿದರು. ಮಗುವಿಗೆ ಹಾರೈಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದರು. ಉಪಾಸನಾ ಮತ್ತು ರಾಮ್ ಚರಣ್ ತಮ್ಮ ಮಗುವಿಗೆ ಯಾವ ಹೆಸರನ್ನು (Name) ಇಡಬೇಕು ಎನ್ನುವ ಕುರಿತು ಚರ್ಚೆ ಮಾಡಿದ್ದಾರಂತೆ. ಅದನ್ನು ನಂತರ ಹೇಳುವೆ ಎನ್ನುವುದು ರಾಮ್ ಚರಣ್ ಮಾತು.
ಜೂನ್ 20ರಂದು ಹೈದರಾಬಾದ್ ನ ಜುಬ್ಲಿ ಹಿಲ್ಸ್ ಅಪೋಲೊ ಆಸ್ಪತ್ರೆಯಲ್ಲಿ ಉಪಾಸನಾ (Upasana) ಹೆಣ್ಣು ಮಗುವಿಗೆ (Baby Girl) ಜನ್ಮ ನೀಡಿದ್ದರು. ಈ ದಂಪತಿಯ ಪುಟಾಣಿ ಮಗುವಿನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Photo, Viral) ಆಗಿತ್ತು. ಮಗುವಿಗೆ ಹಾರೈಕೆಯ ಮಹಾಪುರವೇ ಹರಿದು ಬಂದಿತ್ತು.
ಎರಡು ವಾರಗಳ ಹಿಂದೆಯಷ್ಟೇ ತಮ್ಮ ಕುಟುಂಬದ ಕುಡಿಗಾಗಿ ಶಾಪಿಂಗ್ ಮಾಡುತ್ತಿರುವ ವಿಷಯವನ್ನು ಹಾಗೂ ಪ್ರಜ್ವಲ್ ಫೌಂಡೇಶನ್ ತಮ್ಮ ಮಗುವಿಗಾಗಿ ಸ್ಪೆಷಲ್ ತೊಟ್ಟಿಲನ್ನು ಗಿಫ್ಟ್ ನೀಡಿರುವುದಾಗಿ ಉಪಾಸನಾ ತಿಳಿಸಿದ್ದರು. ಪ್ರಜ್ವಲ್ ಫೌಂಡೇಶನ್ ನಲ್ಲಿ ಕೆಲಸ ಮಾಡುವ ಮಹಿಳೆಯರೇ ಈ ಸ್ಪೆಷಲ್ ತೊಟ್ಟಿಲನ್ನು ರೆಡಿ ಮಾಡಿದ್ದು, ಅದು ಮರದ ತೊಟ್ಟಿಲಾಗಿದೆ. ಉಪಾಸನಾ ಮಗುವಿಗಾಗಿಯೇ ಅದನ್ನು ಸಿದ್ಧ ಮಾಡಲಾಗಿದೆ ಎಂದು ತಿಳಿಸಲಾಗಿತ್ತು. ಅದೊಂದು ತೂಗು ತೊಟ್ಟಿಲಾಗಿದ್ದು ಕುಸುರಿ ಕೆಲಸವನ್ನೂ ಹೊಂದಿದೆ.