ಬಾಲಿವುಡ್ ನಟ ವರುಣ್ ಧವನ್ (Varun Dhawan) ಅವರು ‘ಬೇಬಿ ಜಾನ್’ ಚಿತ್ರದ ಮೂಲಕ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ (Salman Khan) ಕೂಡ ಸ್ಪೆಷಲ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
View this post on Instagram
ಜವಾನ್ ಡೈರೆಕ್ಟರ್ ಅಟ್ಲಿ ಅವರು ಈ ಹಿಂದೆ ‘ತೇರಿ’ ಎಂಬ ಸಿನಿಮಾವನ್ನು ತಮಿಳಿನಲ್ಲಿ ನಿರ್ದೇಶನ ಮಾಡಿದ್ದರು. ಅದರಲ್ಲಿ ವಿಜಯ್ ದಳಪತಿ, ಸಮಂತಾ ಲೀಡ್ ರೋಲ್‌ನಲ್ಲಿ ನಟಿಸಿದ್ದರು. ಅದೇ ಚಿತ್ರವನ್ನು ಇದೀಗ ಹಿಂದಿ ಭಾಷೆಗೆ ರಿಮೇಕ್ ಮಾಡಲಾಗಿದ್ದು, ವರುಣ್ ಧವನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ:ನನಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ: ಡಿಸ್ಚಾರ್ಜ್ ಬಳಿಕ ಸೂಪರ್‌ಸ್ಟಾರ್ ಮೊದಲ ಪೋಸ್ಟ್
View this post on Instagram
ವರುಣ್ ಧವನ್‌ಗೆ ಕೀರ್ತಿ ಸುರೇಶ್ (Keerthy Suresh) ಹೀರೋಯಿನ್ ಆಗಿ ನಟಿಸಿದ್ದಾರೆ. ಇವರ ಜೊತೆ ಸಲ್ಮಾನ್ ಖಾನ್ ಕೂಡ ವಿಶೇಷ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ವರುಣ್‌ಗೆ ಸಾಥ್ ನೀಡುವಂತಹ ಪಾತ್ರವೇ ಇದಾಗಿದ್ದು, ಅತಿಥಿ ಪಾತ್ರ ಎನ್ನಲಾಗ್ತಿದೆ. ಇದರ ಬಗ್ಗೆ ನಟನಾಗಲಿ ಅಥವಾ ಚಿತ್ರತಂಡವಾಗಲಿ ಅಧಿಕೃತ ಘೋಷಣೆ ಮಾಡಿಲ್ಲ. ಅಫಿಷಿಯಲ್ ಆಗಿ ಗುಡ್ ನ್ಯೂಸ್ ಕೊಡ್ತಾರಾ? ಎಂದು ಕಾದುನೋಡಬೇಕಿದೆ.
ಅಂದಹಾಗೆ, ‘ಸ್ತ್ರೀ 2ʼ (Stree 2) ಸಿನಿಮಾದಲ್ಲೂ ‘ಬೇಡಿಯಾ’ ರೋಲ್‌ನಲ್ಲಿ ಮತ್ತೊಮ್ಮೆ ವರುಣ್ ನಟಿಸಿದರು. ಕ್ಲೈಮ್ಯಾಕ್ಸ್‌ನಲ್ಲಿ ಶ್ರದ್ಧಾಗೆ ಸಾಥ್ ನೀಡೋ ಪಾತ್ರ ಇದಾಗಿದ್ದು, ವರುಣ್ ನಟನೆಗೆ ಮೆಚ್ಚುಗೆ ಸಿಕ್ಕಿತ್ತು. ಹಾಗಾಗಿ ‘ಬೇಬಿ ಜಾನ್’ ಮೇಲೆ ಫ್ಯಾನ್ಸ್ ಭಾರೀ ನಿರೀಕ್ಷೆಯಿದೆ.