ಚಿತ್ರದುರ್ಗ: ಮುರುಘಾ ಮಠದಲ್ಲಿ (Murugha Mutt) ನಾಲ್ಕೂವರೆ ವರ್ಷದ ಹಿಂದೆ ಪತ್ತೆಯಾಗಿದ್ದ ಮಗುವಿನ (Baby) ಬಗ್ಗೆ ಅಚ್ಚರಿಯ ಬೆಳವಣಿಗೆಗಳು ಇದೀಗ ಬೆಳಕಿಗೆ ಬಂದಿದೆ.
ಮಗುವನ್ನು ಮುರುಘಾ ಮಠಕ್ಕೆ ನೀಡಿದ ಫೈರೋಜಾ ಎಂಬ ಮಹಿಳೆ ನಾಲ್ಕುವರೆ ವರ್ಷದ ಹಿಂದಿನ ಸತ್ಯವನ್ನು ಪಬ್ಲಿಕ್ ಟಿವಿ ಜೊತೆ ಬಿಚ್ಚಿಟ್ಟಿದ್ದಾರೆ. ಆ ಮಗು ಹುಟ್ಟಿದ ನಾಲ್ಕೈದು ದಿನಗಳಲ್ಲಿ ಮಠದ ಮುಂದೆ ಕಾಂಪೌಂಡ್ ಪಕ್ಕದಲ್ಲಿ ಸಿಕ್ಕಿತ್ತು. ಅದು ತುಂಬಾ ಅಳುತ್ತಿತ್ತು. ಆ ವೇಳೆ ನಾನು ಹೋಗಿದ್ದೆ, ಮಠದ ಸಿಬ್ಬಂದಿಯೂ ಇದ್ದರು. ಈ ವೇಳೆ ಆ ಮಗುವಿನ ಬಳಿ ಪತ್ರವಿತ್ತು. ಅದರಲ್ಲಿ ದಯವಿಟ್ಟು ಮಗುವನ್ನು ಮಠಕ್ಕೆ ಸೇರಿಸಬೇಕು. ಮಗು ಮಠದಲ್ಲೇ ಇತ್ತು.
Advertisement
Advertisement
ಆ ಪತ್ರವನ್ನು ಮಠದ ಸಿಬ್ಬಂದಿ ತೆಗೆದುಕೊಂಡು ಮಠಕ್ಕೆ ಹೋದರು. ನಂತರ ಮಗುವನ್ನು ನಾನು ತೆಗೆದುಕೊಂಡು ಬಂದೆ. ಅಲ್ಲೇ ಸ್ಥಳೀಯರೆಲ್ಲರೂ ಮಗುವನ್ನು ತನಗೆ ನೀಡುವಂತೆ ಕೇಳಿಕೊಂಡರು. ಆದರೆ ನಾನು ಕೊಟ್ಟಿರಲಿಲ್ಲ. ನಾನೇ ನೋಡಿಕೊಳ್ಳುತ್ತೇನೆ ಎಂದು ಹೇಳಿದೆ. ಆದರೆ ಸ್ವಾಮೀಜಿ, ಮಠದ ಸಿಬ್ಬಂದಿಯನ್ನು ಇಲ್ಲಿ ಕಳುಹಿಸಿ, ಮಗುವನ್ನು ತೆಗೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ದಾಖಲೆ ಮಳೆ – 92 ವಾರ್ಡ್‍ಗಳಲ್ಲಿ ವರುಣಾರ್ಭಟ
Advertisement
ಈ ಹಿನ್ನೆಲೆಯಲ್ಲಿ ಸ್ಥಳೀಯರು ಮಗುವನ್ನು ಕೊಡುವಂತೆ ಮಠಕ್ಕೆ ಹೋಗಿ ಕೇಳಿದ್ದಾರೆ. ಆಗ ಸ್ವಾಮೀಜಿ ಸ್ಥಳೀಯರ ಹತ್ತಿರ ಆಸ್ತಿ ಏನಾದರೂ ಇದ್ದರೇ ಅದನ್ನು ಮಗುವಿನ ಹೆಸರಿಗೆ ಬರೆಸಿ, ಆಗ ಮಗುವನ್ನು ಕೊಡುತ್ತೇವೆ ಎಂದು ತಿಳಿಸಿದ್ದರು. ಅದಾದ ಬಳಿಕ ಮಠದಲ್ಲೇ ಮಗು ಸುಖವಾಗಿ ಇತ್ತು ಎಂದು ತಿಳಿಸಿದರು. ಇದೀಗ ಈ ಮಗುವಿನ ಪತ್ತೆ ಹಿಂದೆ ಅನೇಕ ಪ್ರಶ್ನೆಗಳು ಮೂಡಿವೆ.
Advertisement
ಇದರ ಬೆನ್ನಲ್ಲೇ ಪೀಠಾಧಿಪತಿ ವಜಾಕ್ಕೆ ಹೋರಾಟ ಶುರುವಾಗಿದೆ. ಮಗು ಪತ್ತೆ ಬಳಿಕ ಶ್ರೀಗಳಿಗೆ ಇನ್ನಷ್ಟು ಸಂಕಷ್ಟ ಎದುರಾಗಿದ್ದು, ಮುರುಘಾ ಮಠದಲ್ಲಿ ಇನ್ನಷ್ಟು ಮಕ್ಕಳಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಕ್ರಮವಾಗಿ ಮಕ್ಕಳಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಒಂದು ವೇಳೆ ದೃಢಪಟ್ಟರೆ ಶ್ರೀಗಳಿಗೆ ಇನ್ನಷ್ಟು ಸಂಕಷ್ಟ ಎದುರಾಗುತ್ತದೆ. ಇದನ್ನೂ ಓದಿ: ಬಾಲಿವುಡ್ ನಲ್ಲಿ ಕಾಂತಾರ: ಶುಭ ಕೋರಿದ ಕೇಂದ್ರ ಸಚಿವ ಅನುರಾಗ್ ಠಾಕೋರ್