ಬೆಂಗಳೂರು: ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಹೊಸೂರು ಸಮೀಪದ ಉಪ್ಪುಪಳಂ ಗ್ರಾಮದಲ್ಲಿ ಕಾಡನೆ ಹಿಂಡಿನಿಂದ ತಪ್ಪಿಸಿಕೊಂಡು ಬಾವಿಗೆ ಬಿದ್ದಿದ್ದ ಆನೆ ಮರಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
ಹೌದು. ಸುಮಾರು 8 ವರ್ಷದ ಆನೆಮರಿಯೊಂದು ಶುಕ್ರವಾರ ರಾತ್ರಿ ತನ್ನ ಗುಂಪಿನಿಂದ ತಪ್ಪಿಸಿಕೊಂಡು, ಉಪ್ಪುಪಳಂ ಗ್ರಾಮದ ಬಳಿಯಿರುವ 30 ಅಡಿ ಆಳದ ಪಾಳು ಬಾವಿಯಲ್ಲಿ ಬಿದ್ದಿತ್ತು. ಬಾವಿಯಿಂದ ಮೇಲೆದ್ದು ಬರಲಾಗದೇ, ರಕ್ಷಣೆಗಾಗಿ ಘೀಳಿಡುತ್ತಿತ್ತು. ಇಂದು ಮುಂಜಾನೆ ಆನೆ ಘೀಳಿಡುತ್ತಿದ್ದನ್ನು ಕೇಳಿದ ಗ್ರಾಮಸ್ಥರು ಬಾವಿಯ ಬಳಿ ಬಂದು ನೋಡಿದಾಗ, ಆನೆಮರಿ ಬಾವಿಗೆ ಬಿದ್ದಿರುವ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಗ್ರಾಮಸ್ಥರು ತಮಿಳುನಾಡಿನ ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ.
Advertisement
Advertisement
ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದರು. ಅಲ್ಲದೇ ಆನೆಮರಿಯನ್ನು ಬಾವಿಯಿಂದ ಮೇಲೆತ್ತಲು ಹಿಟಾಚಿಯಿಂದ ಬಾವಿಯ ಬಳಿ ಅಗೆದು, ಬಾವಿಯಲ್ಲಿ ಮಣ್ಣು ತುಂಬಿದ್ದರು. ಈ ವೇಳೆ ಮಣ್ಣನ್ನು ಏರುತ್ತಾ ಆನೆಮರಿ ಬಾವಿಯಿಂದ ಹೊರಬರುವಲ್ಲಿ ಯಶಸ್ವಿಯಾಗಿದೆ. ಬಾವಿಯಿಂದ ಮೇಲೆದ್ದ ಆನೆಮರಿ, ಬದುಕಿದೆಯ ಬಡ ಜೀವ ಎಂಬಂತೆ ಕೂಡಲೇ ಅರಣ್ಯದೊಳಗೆ ಓಡಿ ಹೋಯಿತು.
Advertisement
ಬಾವಿಯಿಂದ ಆನೆಮರಿ ರಕ್ಷಿಸುವ ಕಾರ್ಯಾಚರಣೆಯನ್ನು ನೋಡಲು ಸುತ್ತ-ಮುತ್ತಲಿನ ಗ್ರಾಮಸ್ಥರು ಮುಗಿಬಿದ್ದದ್ದರು. ಹೀಗಾಗಿ ಸ್ಥಳದಲ್ಲಿ ನೂಕು-ನುಗ್ಗಲು ಸಹ ಉಂಟಾಗಿತ್ತು. ಮುಂಜಾಗ್ರತ ಕ್ರಮವಾಗಿ ಪೊಲೀಸರು ಸಹ ಸ್ಥಳದಲ್ಲಿ ಬೀಡುಬಿಟ್ಟಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews