ಬೆಂಗಳೂರು: ಪ್ರಾಣಿಗಳ ಸರಣಿ ಸಾವಿನಿಂದ ಕಂಗೆಟ್ಟಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಇದೀಗ ಹೊಸ ಅತಿಥಿಗಳ ಸೇರ್ಪಡೆಯಿಂದ ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತಿದೆ.
ಜೈವಿಕ ಉದ್ಯಾನವನಕ್ಕೆ ಗುರುವಾರ ಕೂಡ ಹೊಸ ಅತಿಥಿಯೊಬ್ಬರು ಸೇರ್ಪಡೆಯಾಗಿದ್ದಾರೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೇದಾ ಎಂಬ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ. ಈ ಮೂಲಕ ಉದ್ಯಾನವನದ ಆನೆಗಳ ಸಂಖ್ಯೆ 22 ಕ್ಕೆ ಏರಿಕೆಯಾಗಿದೆ.
Advertisement
Advertisement
ಇದೇ ತಿಂಗಳಿನಿಂದ ಬನ್ನೇರುಘಟ್ಟಕ್ಕೆ ಹೊಸ ಅತಿಥಿಗಳ ಆಗಮನವಾಗುತ್ತಿದ್ದು, ಮೊದಲಿಗೆ ಮೈಸೂರು ಜೂ ನಿಂದ ಗೌರಿ ಎಂಬ ಎರಡೂವರೆ ವರ್ಷದ ಜಿರಾಫೆಯನ್ನು ತರಲಾಗಿತ್ತು. ನಂತರ ಪಾರ್ಕ್ ನಲ್ಲಿರುವ ಝೀಬ್ರಾ ಮರಿಯೊಂದಕ್ಕೆ ಕಳೆದ ವಾರ ಜನ್ಮ ನೀಡಿತ್ತು. ಈಗ ವೇದಾ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ.
Advertisement
ಸದ್ಯಕ್ಕೆ ತಾಯಿ ಮತ್ತು ಮರಿಯಾನೆ ಆರೋಗ್ಯದಿಂದ ಇವೆ. ಈಗ ಬೇಸಿಗೆ ರಜೆ ಇರುವ ಕಾರಣ ಈ ಮೂರು ಹೊಸ ಅತಿಥಿಗಳ ಆಗಮನದಿಂದ ಬನ್ನೇರುಘಟ್ಟಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ.