ಚಾಮರಾಜನಗರ: ತಾಯಿಯಿಂದ ತಪ್ಪಿಸಿಕೊಂಡ ಆನೆ ಮರಿಯೊಂದು ಶಾಲೆಗೆ ಬಂದು ಮಕ್ಕಳೊಂದಿಗೆ ಆಟ ಆಡಿರುವ ಅಪರೂಪದ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಪುರಾಣಿ ಪೋಡಿನ ವಸತಿ ಶಾಲೆಯಲ್ಲಿ ನಡೆದಿದೆ.
ಬಿಳಿಗಿರಿರಂಗನಬೆಟ್ಟ ಅರಣ್ಯ ಪ್ರದೇಶದಲ್ಲಿ ತಾಯಿಯಿಂದ ಬೇರ್ಪಟ್ಟ ಗಂಡು ಮರಿಯಾನೆ ಪುರಾಣಿ ಪೋಡಿನ ವಸತಿ ಶಾಲೆಗೆ ಬಂದಿದೆ. ಆನೆ ಕಂಡದ್ದೇ ತಡ, ಖುಷಿಗೊಂಡ ಮಕ್ಕಳು ಆನೆ ಮರಿಯೊಂದಿಗೆ ಆಡಿ ನಲಿದಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ನಿನ್ನೆ ದಾಖಲೆ ಮಳೆ- ಸೆಪ್ಟೆಂಬರ್‌ನಲ್ಲೇ ಭಾರೀ ಮಳೆ ಯಾಕೆ?
Advertisement
Advertisement
ಬಳಿಕ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರಿಂದ ಯಳಂದೂರು ವಲಯದ ಸಿಬ್ಬಂದಿ ಬಂದು ಗಸ್ತು ತಿರುಗಿದ್ದಾರೆ. ಈ ವೇಳೆ ತಾಯಿ ಆನೆ ಘೀಳಿಡುತ್ತಿದ್ದುದನ್ನು ಗಮನಿಸಿ, ಈರಣ್ಣ ಕಟ್ಟೆ ಪೋಡಿನ ಬಳಿ ಮರಿಯಾನೆ ತಾಯಿಯನ್ನು ಸೇರುವಂತೆ ಮಾಡಿದ್ದಾರೆ. ಇದನ್ನೂ ಓದಿ: ತೇಲುವ ಫ್ರೀಜರ್ ಸಹಾಯದಿಂದ 11 ದಿನ ಸಮುದ್ರದಲ್ಲೇ ಜೀವ ಉಳಿಸಿಕೊಂಡ