ಊಟಕ್ಕೆ ಯಾವಾಗಲೂ ಸೈಡ್ ಡಿಶ್ಗಳನ್ನು ಬಗೆಬಗೆಯಾಗಿ ತಯಾರಿಸಬೇಕು. ಪ್ರತಿ ಬಾರಿ ಹೊಸ ಅಡುಗೆ ಮಾಡುವುದರಿಂದ ಊಟದ ರುಚಿಯನ್ನು ಇನ್ನಷ್ಟು ಹೆಚ್ಚಿಸಬಹುದು. ನಾವಿಂದು ತುಂಬಾ ಸಿಂಪಲ್ ಆಗಿ ಬೇಬಿ ಕಾರ್ನ್ ರೋಸ್ಟ್ (Baby Corn Roast) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಇದನ್ನು ನೀವು ಊಟದೊಂದಿಗೆ ಸೈಡ್ ಡಿಶ್ ಆಗಿ ಬಡಿಸಬಹುದು ಇಲ್ಲವೇ ಸ್ನ್ಯಾಕ್ಸ್ ರೀತಿಯಲ್ಲೂ ಆನಂದಿಸಬಹುದು.
Advertisement
ಬೇಕಾಗುವ ಪದಾರ್ಥಗಳು:
ಬೇಬಿ ಕಾರ್ನ್ – 15
ಎಣ್ಣೆ – 2 ಟೀಸ್ಪೂನ್ (ಒಗ್ಗರಣೆಗೆ)
ಕರಿಬೇವಿನ ಎಲೆ – ಕೆಲವು
ಅರಿಶಿನ – ಅರ್ಧ ಟೀಸ್ಪೂನ್
ಕೆಂಪು ಮೆಣಸಿನಪುಡಿ – 1 ಟೀಸ್ಪೂನ್
ಆಮ್ಚೂರ್ ಪುಡಿ – ಅರ್ಧ ಟೀಸ್ಪೂನ್
ಗರಂ ಮಸಾಲೆ ಪುಡಿ – ಅರ್ಧ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಜೋಳದ ಹಿಟ್ಟು – 2 ಟೀಸ್ಪೂನ್
ಚಾಟ್ ಮಸಾಲಾ ಪುಡಿ – ಕಾಲು ಟೀಸ್ಪೂನ್
ಎಣ್ಣೆ – 4 ಟೀಸ್ಪೂನ್ (ಟೋಸ್ಟ್ ಮಾಡಲು) ಇದನ್ನೂ ಓದಿ: ಬಾಯಿಗೆ ಕಹಿ ಇದ್ದರೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು – ಹಾಗಲಕಾಯಿ ಡ್ರೈ ಪಲ್ಯ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಬೇಬಿ ಕಾರ್ನ್ ಅನ್ನು ತೊಳೆದು, ಕುಕ್ಕರ್ನಲ್ಲಿ ಹಾಕಿ, ಮುಳುಗುವಷ್ಟು ನೀರು ಸೇರಿಸಿ, ಮಧ್ಯಮ ಉರಿಯಲ್ಲಿ 2 ಸೀಟಿ ಬರುವವರೆಗೆ ಬೇಯಿಸಿಕೊಳ್ಳಿ.
* ಬಳಿಕ ಜಾಗ್ರತೆಯಿಂದ ಕುಕ್ಕರ್ನ ಮುಚ್ಚಳ ತೆಗೆದು, ನೀರನ್ನು ಹರಿಸಿ, ಕಾರ್ನ್ ಅನ್ನು ನಾಣ್ಯದಾಕಾರ ಅಥವಾ ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ.
* ಈಗ ಒಂದು ಪ್ಯಾನ್ ಅನ್ನು ತೆಗೆದುಕೊಂಡು, ಅದಕ್ಕೆ 2 ಟೀಸ್ಪೂನ್ ಎಣ್ಣೆ ಹಾಕಿ, ಕರಿಬೇವಿನ ಎಲೆ ಸೇರಿಸಿ ಸಿಡಿಸಿ.
* ಉರಿಯನ್ನು ಕಡಿಮೆ ಮಾಡಿ, ಅರಿಶಿನ, ಕೆಂಪು ಮೆಣಸಿನಪುಡಿ, ಆಮ್ಚೂರ್ ಪುಡಿ, ಉಪ್ಪು, ಗರಂ ಮಸಾಲೆ ಪುಡಿ ಸೇರಿಸಿ ಹುರಿಯಿರಿ.
* ಈಗ ಕತ್ತರಿಸಿಟ್ಟುಕೊಂಡಿದ್ದ ಬೇಬಿ ಕಾರ್ನ್ ಅನ್ನು ಸೇರಿಸಿ ಮಿಶ್ರಣ ಮಾಡಿ.
* ಬಳಿಕ ಜೋಳ ಹಿಟ್ಟನ್ನು ಸೇರಿಸಿ, 4 ಟೀಸ್ಪೂನ್ ಎಣ್ಣೆ ಹಾಕಿ, ಮಧ್ಯಮ ಉರಿಯಲ್ಲಿ 10 ನಿಮಿಷ ಚೆನ್ನಾಗಿ ಫ್ರೈ ಮಾಡಿ.
* ಕೊನೆಯಲ್ಲಿ ಚಾಟ್ ಮಸಾಲಾವನ್ನು ಸಿಂಪಡಿಸಿದರೆ, ರುಚಿಕರವಾದ ಬೇಬಿ ಕಾರ್ನ್ ರೋಸ್ಟ್ ತಯಾರಾಗುತ್ತದೆ. ಇದನ್ನೂ ಓದಿ: ಆಲೂ ಸೇರಿಸಿ ಬೆಂಡೆಕಾಯಿ ಪಲ್ಯ ಮಾಡಿದ್ರೆ ಸಖತ್ ಟೇಸ್ಟ್
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k