ಮೇಲ್ಛಾವಣಿ ಕುಸಿತ – ಮದುವೆಯಾದ 5ನೇ ವರ್ಷಕ್ಕೆ ಜನಿಸಿದ್ದ ಗಂಡು ಮಗು ಸಾವು

Public TV
1 Min Read
CHILD DEATH

– ತಾಯಿ ಸ್ಥಿತಿ ಗಂಭೀರ

ಹೈದರಾಬಾದ್: ಮದುವೆಯಾದ 5 ವರ್ಷಗಳ ಬಳಿಕ ಜನಿಸಿದ ಮಗುವನ್ನು ಕಂಡು ಇಡೀ ಕುಟುಂಬ ಸದಸ್ಯರು ಖುಷಿಯಿಂದ ಜೀವನ ನಡೆಸಿದ್ದರು. ಆದರೆ ಭಾನುವಾರ ನಡೆದ ಅವಘಡದಲ್ಲಿ 14 ವರ್ಷದ ಗಂಡು ಮಗು ಸಾವನ್ನಪ್ಪಿರುವ ಘಟನೆ ಹೈದರಾಬಾದ್ ನಗರದಲ್ಲಿ ನಡೆದಿದೆ.

ಹೈದರಾಬಾದ್ ನಗರದ ಸೀತಾಫಲ್‍ಮಂಡಿ ಪ್ರದೇಶದಲ್ಲಿ ಘಟನೆ ನಡೆದಿದ್ದು, 14 ತಿಂಗಳ ಗೀತಾಂಶು ಮೃತ ಬಾಲಕನಾಗಿದ್ದು, ಸ್ವಾತಿ ಗಾಯಗೊಂಡ ಮಹಿಳೆಯಾಗಿದ್ದಾರೆ.

CHILD DEATH a

ಪೊಲೀಸರ ಮಾಹಿತಿಯ ಅನ್ವಯ ಭಾನುವಾರ ಬೆಳಗ್ಗೆ 6 ಗಂಟೆ ಸಮಯದಲ್ಲಿ ಅವಘಡ ಸಂಭವಿಸಿದ್ದು, ಏಕಾಏಕಿ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಪರಿಣಾಮ ಮನೆಯ ಕೊಠಡಿಯಲ್ಲಿ ಮಲಗಿದ್ದ ಮಗು ಸಾವನ್ನಪ್ಪಿದ್ದಾರೆ, ತಾಯಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

30 ವರ್ಷಗಳ ಮನೆಯನ್ನು ಗಣಪತಿರಾವು ಎಂಬವರು ಖರೀದಿ ಮಾಡಿ 6 ಕುಟುಂಬಗಳಿಗೆ ಬಾಡಿಗೆಗೆ ನೀಡಿದ್ದರು. ಘಟನೆ ನಡೆದ ಸಂದರ್ಭದಲ್ಲಿ ಮಗುವಿನ ತಂದೆ ಹಸುವಿನಲ್ಲಿ ಹಾಲು ಕರೆಯಲು ಮನೆಯಿಂದ ತೆರಳಿದ್ದರು.

CHILD DEATH b

ಘಟನೆಗೆ ಕಾರಣವೇನು: ಮನೆಯನ್ನು ಖರೀದಿ ಮಾಡಿದ್ದ ಗಣಪತಿರಾವ್ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಆತನ ಪತ್ನಿ ಮನೆಯನ್ನು ನಿರ್ವಹಣೆ ಮಾಡುತ್ತಿದ್ದರು. ಕೆಲ ಸಮಯದ ಹಿಂದೆಯಷ್ಟೇ ಹಳೆ ಮನೆಯನ್ನು ನವೀಕರಣ ಮಾಡಿದ್ದರು. ಆದರೆ ಮನೆಯ ಎರಡು ಭಾಗಗಳಲ್ಲಿ ಅಪಾರ್ಟ್ ಮೆಂಟ್ ನಿರ್ಮಾಣ ಮಾಡಲಾಗುತ್ತಿದ್ದು, ಈ ಸಂದರ್ಭದಲ್ಲಿ ಹಳೆಯ ಮನೆಗೆ ಅಪಾರ್ಟ್ ಮೆಂಟ್ ಬಳಸುತ್ತಿದ್ದ ನೀರು ಹರಿದ ಪರಿಣಾಮ ಮನೆಗೆ ಹಾನಿಯಾಗಿತ್ತು ಎನ್ನಲಾಗಿದೆ. ಭಾನುವಾರ ತಾಯಿ, ಮಗು ನಿದ್ರೆ ಮಾಡುತ್ತಿದ್ದ ವೇಳೆಯೇ ಏಕಾಏಕಿ ಮನೆಯ ಮೇಲ್ಛಾವಣಿ ಕುಸಿತಗೊಂಡಿದೆ.

2013 ರಲ್ಲಿ ಸ್ವಾತಿ ಹಾಗೂ ರಾಜು ಅವರ ವಿವಾಹ ನಡೆದಿತ್ತು. ಆದರೆ 4 ವರ್ಷವಾದರೂ ಅವರಿಗೆ ದಂಪತಿಗೆ ಮಕ್ಕಳಾಗಿರಲಿಲ್ಲ. ಪರಿಣಾಮ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದರು. ಇದಕ್ಕಾಗಿ ಸುಮಾರು 2.5 ಲಕ್ಷವನ್ನು ಖರ್ಚು ಮಾಡಿದ್ರು. ಒಂದೂವರೆ ತಿಂಗಳ ಹಿಂದೆಯಷ್ಟೇ ಮಗುವಿನ 1 ವರ್ಷ ಹುಟ್ಟುಹಬ್ಬವನ್ನು ಕುಟುಂಬ ಸದಸ್ಯರು ಅದ್ಧೂರಿಯಾಗಿ ಆಚರಣೆ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *