ಭೋಪಾಲ್: ಮಹಿಳೆಯೊಬ್ಬರು ಎರಡು ತಲೆ ಮತ್ತು ಮೂರು ಕೈಗಳನ್ನು ಹೊಂದಿರುವ ಅಪರೂಪದ ಮಗುವಿಗೆ ಜನ್ಮ ನೀಡಿರುವ ಘಟನೆ ಮಧ್ಯಪ್ರದೇಶದ ರತ್ಲಾಮ್‍ನಲ್ಲಿ ನಡೆದಿದೆ. ಮಗು ಡೈಸೆಫಾಲಿಕ್ ಪ್ಯಾರಾಪಾಗಸ್‌ನಿಂದ ಬಳಲುತ್ತಿದೆ ಎಂದು ತಿಳಿಸಲಾಗಿದೆ.
ಪ್ರಸ್ತುತ ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಇಂದೋರ್‌ನ ಎಂವೈ ಆಸ್ಪತ್ರೆಯ ಡಾ. ಬ್ರಜೇಶ್ ಲಹೋಟಿ ಅವರು ಹೇಳಿದ್ದಾರೆ. ಸೋಜಿಗದ ಸಯಾಮಿನಲ್ಲಿ ಒಂದು ರೀತಿ ಎರಡು ತಲೆಗಳನ್ನು ಅಕ್ಕಪಕ್ಕದಲ್ಲಿ ಹೊಂದಿರುವ ಅಪರೂಪದ ಅವಳಿ ರೂಪವಾಗಿರುತ್ತಾರೆ. ಇದನ್ನು ಡೈಸೆಫಾಲಿಕ್ ಪ್ಯಾರಾಪಾಗಸ್ ಎಂದು ಕರೆಯುತ್ತಾರೆ. ಇದನ್ನೂ ಓದಿ: ಕೇಜ್ರಿವಾಲ್ ತಪ್ಪಿಸಿಕೊಳ್ಳಲು ಇರುವ ಒಂದೇ ಮಾರ್ಗ ಬಲಿಪಶು: ಗಂಭೀರ್
ಈ ರೀತಿ ಜನಿಸಿದ ಅನೇಕ ಮಕ್ಕಳ ಫೋಟೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿಲೇ ಇರುತ್ತದೆ. ಡೈಸೆಫಾಲಿಕ್ ಪ್ಯಾರಾಪಾಗಸ್ ಸಮಸ್ಯೆಯಿಂದ ಹುಟ್ಟಿದ ಅನೇಕ ಮಕ್ಕಳು ಹುಟ್ಟುತ್ತಲೆ ಸಾಯುತ್ತಾರೆ. ಆದರೆ ಬದುಕಿ ಉಳಿಯುವುದು ಕೆಲವು ಮಕ್ಕಳು ಮಾತ್ರ. ಇದನ್ನೂ ಓದಿ: ನಿರಾಶ್ರಿತನನ್ನು ಅಪ್ಪಿಕೊಂಡು ಮಡಿಲಲ್ಲಿ ಮಲಗಿದ ಶ್ವಾನ- ನೆಟ್ಟಿಗರ ಮನಗೆದ್ದ ವೀಡಿಯೋ