ಶಿಮ್ಲಾ: ಕರಡಿ ಮರಿಯೊಂದು ಹಿಮಾಚಲ ಪ್ರದೇಶದ ಅಧಿಕಾರಿಗಳೊಂದಿಗೆ ಆಟವಾಡಿ, ಅವರನ್ನು ರಂಜಿಸಿ, ಮಗುವಿನಂತೆ ಆರೈಕೆ ಪಡೆದುಗೊಂಡ ವಿಡಿಯೋ ಇದೀಗ ವೈರಲ್ ಆಗಿದೆ.
ಶಿಮ್ಲಾ ಸಮೀಪದ ಥಿಯೋಗ್‍ನ ಉಪವಿಭಾಗೀಯ ಮ್ಯಾಜೆಸ್ಟ್ರೇಟ್ ಅಧಿಕಾರಿಗಳ ಕಚೇರಿಯಲ್ಲಿ ಈ ಕರಡಿ ಕಾಣಿಸಿಕೊಂಡಿದ್ದು, ತನ್ನ ತಮಾಷೆ ವರ್ತನೆ ಮೂಲಕ ಅವರನ್ನು ರಂಜಿಸಿ, ಅವರಿಂದ ಆರೈಕೆ ಪಡೆದು ಮತ್ತೇ ಅರಣ್ಯ ಇಲಾಖೆ ಸಿಬ್ಬಂದಿ ಕೈ ಸೇರಿದೆ.
Advertisement
baby bear in SDM court…. pic.twitter.com/KkwHXZxWnT
— Sanjay Sharma (@Sanjays98977803) May 30, 2018
Advertisement
ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ಕೊಟ್ ಖೈ ಪ್ರದೇಶದದಲ್ಲಿ ಇತ್ತೀಚೆಗೆ ಕಾಡಿಗೆ ಬೆಂಕಿ ತಗುಲಿತ್ತು. ಈ ವೇಳೆ ಅಧಿಕಾರಿಗಳು ಕರಡಿ ಮರಿಯೊಂದನ್ನು ರಕ್ಷಣೆ ಮಾಡಿದ್ದು, ಅದನ್ನು ತಮ್ಮ ಮಗುವಿನಂತೆ ಕಾಳಜಿವಹಿಸಿ ಆರೈಕೆ ಮಾಡಿದ್ದಾರೆ. ಅದರೊಂದಿಗೆ ಆಟವಾಡುತ್ತಿರುವ ದೃಶ್ಯಗಳನ್ನು ವಿಡಿಯೋ ಮಾಡಿ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ.
Advertisement
— Sanjay Sharma (@Sanjays98977803) May 30, 2018
Advertisement
ಕರಡಿ ಮರಿಯು ಪುಟ್ಟ ಮಗುವಿನಂತೆ ಒಂದು ಚೇರ್ ನಿಂದ ಮತ್ತೊಂದು ಚೇರ್ ಗೆ ದಾಟುವುದು, ರ್ಯಾಕ್‍ಗೆ ಕಾಲುಕೊಟ್ಟು ಏನನ್ನೊ ಹುಡುಕುವುದು, ಬಿದ್ದು ಹೊರಳಾಡಿ ನಟಿಸುತ್ತಿರುವ ದೃಶ್ಯಗಳು ನೋಡುಗರಿಗೆ ಖುಷಿ ನೀಡುತ್ತಿದೆ.
— Sanjay Sharma (@Sanjays98977803) May 30, 2018