ಚಾಮರಾಜನಗರ: ಕಾಡಿನಿಂದ ನಾಡಿಗೆ ಬಂದ ಕರಡಿ ಮರಿಯೊಂದು ಮನೆಯೊಂದರ ಗೇಟ್ ಗೆ ಸಿಕ್ಕಿ ಹಾಕಿಕೊಂಡು ರೋಧನೆ ಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆ ಹಾಗೂ ತಮಿಳುನಾಡಿನ ಗಡಿ ಪ್ರದೇಶ ಗ್ರಾಮದಲ್ಲಿ ಜರುಗಿದೆ.
ಕೊಥಗೆರೆ ಎಂಬ ಊರಿಗೆ ಒಂದು ತಾಯಿ ಕರಡಿ ಹಾಗೂ ಎರಡು ಮರಿ ಕರಡಿಗಳು ಬಂದಿವೆ. ಈ ವೇಳೆ ಒಂದು ಮರಿ ಕರಡಿ ಮನೆಯಿಂದ ಗೇಟ್ ಕಂಬಿಗೆ ಸಿಲುಕಿಕೊಂಡಿದೆ. ಆ ಗೇಟ್ ನಿಂದ ಬಿಡಿಸಿಕೊಳ್ಳಲು ಮರಿ ಕರಡಿ ಸತತವಾಗಿ ಪ್ರಯತ್ನ ಪಟ್ಟಿದೆ. ಈ ವೇಳೆ ಮರಿ ಕರಡಿ ಬಿಡಿಸಿಕೊಳ್ಳಲಾಗದೆ ರೋಧನೆ ಅನುಭವಿಸಿದೆ.
ಇದನ್ನು ನೋಡುತ್ತಿದ್ದ ತಾಯಿ ಕರಡಿ ತನ್ನ ಮರಿಯನ್ನು ನೋಡಿ ದುಃಖಿಸತೊಡಗಿದೆ. ಈ ದೃಶ್ಯವನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿ ವಿಷಯ ಮುಟ್ಟಿಸಿದ್ದಾರೆ. ನಂತರ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಗಳು ಗೇಟ್ ನ ಕಂಬಿಯನ್ನು ಕತ್ತರಿಸಿ ಮರಿ ಕರಡಿಯನ್ನು ಹೊರತಂದಿದ್ದಾರೆ. ಇದಾದ ಬಳಿ ತಾಯಿ ಮತ್ತು ಮರಿ ಕರಡಿಯನ್ನು ಕಾಡಿಗೆ ಬಿಟ್ಟಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv