ಯಾದಗಿರಿ: ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಗುರುಮಠಕಲ್ (Gurumatkal) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ (Congress) ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ (Baburao Chinchansur) ಶುಕ್ರವಾರ ಡಿಸ್ಚಾರ್ಜ್ ಆಗಿದ್ದಾರೆ.
ಎಪ್ರಿಲ್ 16ರಂದು ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಮುಗಿಸಿ, ವಾಪಾಸ್ ಆಗುತ್ತಿದ್ದ ವೇಳೆ ಕಲಬುರಗಿಯ (Kalaburagi) ಆಕಾಶವಾಣಿ ಕೇಂದ್ರದ (Radio Station) ಬಳಿ ಅವರ ಕಾರು ಅಪಘಾತಕ್ಕೊಳಗಾಗಿತ್ತು. ಅಪಘಾತದಲ್ಲಿ ಚಿಂಚನಸೂರ್ ಅವರ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದವು. ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಮೂರು ಸರ್ಜರಿ ನಡೆಸಲಾಗಿತ್ತು. ಕಳೆದ 12 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಅವರು ನಾಮಪತ್ರ ಸಲ್ಲಿಕೆಗೂ ಬರಲು ಸಾಧ್ಯವಾಗಿರಲಿಲ್ಲ. ಅವರ ಪರವಾಗಿ ನಾಮಪತ್ರವನ್ನು ಪತ್ನಿ ಅಮರೇಶ್ವರಿ ಚಿಂಚನಸೂರ್ ಸಲ್ಲಿಸಿದ್ದರು. ಇದನ್ನೂ ಓದಿ: ನಮ್ಮೂರಲ್ಲಿ ಬಿಜೆಪಿಯವರೇ ಗಲಾಟೆ ಮಾಡಿಸಿದ್ದಾರೆ: ಸಿದ್ದರಾಮಯ್ಯ
ಈಗಾಗಲೇ ಚಿಂಚನಸೂರ್ ಪರವಾಗಿ ಅವರ ಪತ್ನಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈಗಷ್ಟೇ ಡಿಸ್ಚಾರ್ಜ್ ಆಗಿರುವ ಚಿಂಚನಸೂರ್ ಅವರ ಕಾಲಿಗೆ ಬ್ಯಾಂಡೇಜ್ ಹಾಕಿರುವುದರಿಂದ ವ್ಹೀಲ್ ಚೇರ್‍ನಲ್ಲೇ ಶನಿವಾರ ಪ್ರಚಾರ ಕೈಗೊಳ್ಳುವ ಸಾಧ್ಯತೆಯಿದೆ. ಇದನ್ನೂ ಓದಿ: ಪ್ರೀತಂ ಗೌಡ ಹೇಳಿಕೆ ಖಂಡನೀಯ – ಸ್ವಪಕ್ಷದ ಶಾಸಕನ ವಿರುದ್ಧ ಅಶ್ವಥ್ ನಾರಾಯಣ್ ಗರಂ