ಕಲಬುರಗಿ: ಅಯೋಧ್ಯೆಯ ರಾಮಮಂದಿರದಲ್ಲಿ (Ram Mandir) ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಎಲ್ಲಾ ಸಿದ್ಧತೆ ನಡೆಯುತ್ತಿರುವ ಹೊತ್ತಿನಲ್ಲಿ ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಮಂದಿರದ ಜಾಗದಲ್ಲಿ 500 ವರ್ಷಗಳ ಕಾಲ ಮುಸ್ಲಿಮರು ನಮಾಜ್ ಮಾಡಿದ್ದಾರೆ ಎನ್ನುವ ಮೂಲಕ ಅವರು ವಿವಾದದ ಕಿಡಿ ಹೊತ್ತಿಸಿದ್ದಾರೆ.
ಕಲಬುರಗಿಯಲ್ಲಿ (Kalaburagi) ಮಾತನಾಡಿದ ಅವರು, ಕಾಂಗ್ರೆಸ್‍ನ ಜಿ.ಬಿ ಪಂತ್ ಮುಖ್ಯಮಂತ್ರಿ ಆಗಿದ್ದಾಗ ರಾಜ್ ಕೆ ಅಂಧೇರಿಯಲ್ಲಿ ರಾಮನ ಮೂರ್ತಿ ಇಡಲಾಗಿತ್ತು. ಅವರು ಅಲ್ಲಿಂದ ಮೂರ್ತಿಯನ್ನು ತೆಗೆಯಲಿಲ್ಲ. ಆಗ ಅಲ್ಲಿನ ಕಲೆಕ್ಟರ್ ನಾಯರ್ ಸಾಬ್ ಮಸೀದಿ ಬಂದ್ ಮಾಡಿ ಪೂಜಾ ಶುರು ಮಾಡಿದ್ದರು. ಅಲ್ಲದೇ ಅಲ್ಲಿ ನಮ್ಮ ಮಸೀದಿ ಇತ್ತು, ಇರಲಿದೆ ಕೂಡ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶ್ರೀರಾಮನ ಪ್ರಾಣಪ್ರತಿಷ್ಠೆಗೆ ಮೋದಿ ಕಠಿಣ ವ್ರತ – ಪ್ರತಿದಿನ 1 ಗಂಟೆ ವಿಶೇಷ ಮಂತ್ರ ಪಠಣ
Advertisement
1992 ರಲ್ಲಿ ಬಿಜೆಪಿ ಸಂಘ ಪರಿವಾರ ಸುಪ್ರೀಂಕೋರ್ಟ್ ಮುಂದೆ ಪ್ರಮಾಣ ಮಾಡಿ ಬಾಬ್ರಿ ಮಸೀದಿ ಕೆಡವಿದರು. 1989 ರಲ್ಲಿ ಪಾಲನ್‍ಪುರದಲ್ಲಿ ಬಿಜೆಪಿ ರೆಸ್ಯೂಲೇಷನ್ ಪಾಸ್ ಮಾಡಿತ್ತು. ವಿಶ್ವ ಹಿಂದೂ ಪರಿಷತ್ ಹುಟ್ಟಿಕೊಂಡಾಗ ರಾಮಮಂದಿರ ಇರಲಿಲ್ಲ. ಮಹಾತ್ಮಾ ಗಾಂಧಿಯವರು ಈ ವಿಚಾರದಲ್ಲಿ ಏನಾದರೂ ಹೇಳಿದ್ದಾರಾ ಎಂದು ಅವರು ಪ್ರಶ್ನಿಸಿದ್ದಾರೆ.
Advertisement
Advertisement
ಗೋಡ್ಸೆ ಗೋಲಿ ಹೊಡೆದಾಗ ಗಾಂಧಿ ‘ಹೇ ರಾಮ’ ಎಂದಿದ್ದರು. ಭಾರತದ ಮುಸ್ಲಿಮರಿಂದ ವ್ಯವಸ್ಥಿತವಾಗಿ ಬಾಬರಿ ಮಸೀದಿಯನ್ನು ಕಸಿದುಕೊಂಡಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ಬಂದಾಗ ನಾನು ಹೇಳಿದ್ದೆ. ಇಂತಹ ಸಾಕಷ್ಟು ವಿಚಾರಗಳು ಮುಂದೆ ಹೊರಬರಲಿದೆ ಎಂದಿದ್ದೆ. ಈಗ ಸಂಘ ಪರಿವಾರ ಎಲ್ಲಾ ಕಡೆ ಹೋಗಿ ಇಲ್ಲಿ ಮಸೀದಿ ಇರಲಿಲ್ಲ ಎಂದು ಹೇಳುತ್ತಿದ್ದಾರೆ. ಒಂದು ವೇಳೆ ಆವತ್ತು ಜಿ.ಬಿ ಪಂತ್ ರಾಮನ ಮೂರ್ತಿ ತೆಗೆದಿಟ್ಟಿದ್ದರೆ, 1986 ಕೀಲಿ ತೆಗೆಯದೇ ಇದ್ದಿದ್ದರೆ ಹಾಗೂ ಬಾಬ್ರಿ ಮಸೀದಿ ಕೆಡವದೇ ಇದ್ದಿದ್ದರೆ ಇವತ್ತು ನಮಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದಿದ್ದಾರೆ.
Advertisement
ಇಷ್ಟೆಲ್ಲಾ ನಡೆದರೂ ನಮ್ಮ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ. ದೆಹಲಿಯ ಮುಖ್ಯಮಂತ್ರಿ ಒಕ್ಕೂಟದಲ್ಲಿದ್ದೇವೆ ಎಂದು ಹೇಳಿ ಪ್ರತಿ ಗುರುವಾರ ಶಾಲೆಗಳಲ್ಲಿ ಸೂರಜ್ ಪಾಠ ಹಾಗೂ ಹನುಮಾನ್ ಚಾಲೀಸಾ ಪಠಣೆ ಮಾಡಲು ಹೇಳಿದ್ದಾರೆ. ಎಲ್ಲರಿಗೂ ಬಹುಸಂಖ್ಯಾತ ಮತಗಳ ಮೇಲೆ ಕಣ್ಣಿದೆ ಎಂದಿದ್ದಾರೆ.
ನರೇಂದ್ರ ಮೋದಿ (Narendra Modi) ಕೂಡ ಬಹುಸಂಖ್ಯಾತ ಮತಗಳ ಕ್ರೂಢಿಕರಣ ಮಾಡುತ್ತಿದ್ದಾರೆ. ಭಾರತದ ರಾಜಕೀಯದಲ್ಲಿ ಮುಸ್ಲಿಮರ ಸ್ಥಾನ ಎಲ್ಲಿದೆ ಎಂದು ಅವರು ತೋರಿಸಿದ್ದಾರೆ. ಈ ಮೂಲಕ ಭಾರತದ ಮುಸ್ಲಿಮರಿಗೆ ಮೋದಿ ಸಂದೇಶ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ತಲೆಗೂದಲಿಗೆ ಹಗ್ಗ ಕಟ್ಟಿಕೊಂಡೇ ರಾಮರಥ ಎಳೆದ ಸ್ವಾಮೀಜಿ; ಅಯೋಧ್ಯೆ ಕಡೆಗೆ 566 ಕಿಮೀ ಯಾತ್ರೆ