ಚಂಡೀಗಢ: ಆಮೀರ್ ಖಾನ್ ನಟನೆಯ ಬ್ಲಾಕ್‌ಬಸ್ಟರ್ ʻದಂಗಲ್ʼಸಿನಿಮಾ (Dangal Cinema) ಇಡೀ ವಿಶ್ವದಾದ್ಯಂತ ಗಳಿಸಿದ್ದು 2,000 ಕೋಟಿ ರೂ. ಆದ್ರೆ ನಮ್ಮ ಕುಟುಂಬಕ್ಕೆ ಸಿಕ್ಕಿದ್ದು ಕೇವಲ 1 ಕೋಟಿ ರೂ. ಎಂದು ಭಾರತದ ಮಾಜಿ ಕುಸ್ತಿಪಟು ಬಬಿತಾ ಫೋಗಟ್ (Babita Phogat) ಬಹಿರಂಗಪಡಿಸಿದ್ದಾರೆ.
2016ರಲ್ಲಿ ತೆರೆ ಕಂಡ ಬಬಿತಾ ಫೋಗಟ್ ಅವರ ಜೀವನಾಧಾರಿತ ಬಾಲಿವುಡ್ ಸಿನಿಮಾ (Bollywood Movie) ʻದಂಗಲ್ʼ ದೇಶಾದ್ಯಂತ ಭರ್ಜರಿ ಕಮಾಲ್ ಮಾಡಿತ್ತು. ಸದ್ಯ ಕುಸ್ತಿ ಬಿಟ್ಟು ರಾಜಕೀಯ ಹಾದಿಯಲ್ಲಿ ಸಾಗುತ್ತಿರುವ ಬಬಿತಾ ಅವರು ದಂಗಲ್ ಚಿತ್ರದ ಹಣಕಾಸಿನ ವಿವರವನ್ನ ಬಹಿರಂಗಪಡಿಸಿದ್ದಾರೆ. ದಂಗಲ್ ಚಿತ್ರವು ವಿಶ್ವದಾದ್ಯಂತ 2,000 ಕೋಟಿ ರೂ. ಗಳಿಸಿತು. ಆದ್ರೆ ಚಿತ್ರ ತಯಾಕರಿಂದ ನಮಗೆ ಸಿಕ್ಕಿದ್ದು ಕೇವಲ 1 ಕೋಟಿ ರೂ. ಮಾತ್ರ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಯುದ್ಧಕ್ಕೆ ನಮ್ಮ ಬೆಂಬಲ ಇಲ್ಲ: BRICS ಶೃಂಗಸಭೆಯಲ್ಲಿ ಮೋದಿ ಸ್ಪಷ್ಟನೆ
Advertisement
Advertisement
ಇದರಿಂದ ನಿಮಗೆ ಭ್ರಮನಿರಸನವಾಗಿದೆಯೇ ಎಂದು ನಿರೂಪಕರು ಮರು ಪ್ರಶ್ನೆ ಮಾಡಿದಾಗ ಪ್ರತಿಕ್ರಿಯಿಸಿದ ಬಬಿತಾ, ಇದು ತಮ್ಮ ತಂದೆ ಮಹಾವೀರ್ ಸಿಂಗ್ ಫೋಗಟ್ (Mahavir Singh) Phogat) ಅವರಲ್ಲಿ ಅಡಗಿರುವ ಮೌಲ್ಯವನ್ನು ಪ್ರತಿಬಿಂಬಿಸುತ್ತದೆ. ಏಕೆಂದರೆ ನಮಗೆ ಜನರ ಪ್ರೀತಿ ಹಾಗೂ ಗೌರವ ಬೇಕು ಹಣ ಮುಖ್ಯವಲ್ಲ ಎಂದು ನಮ್ಮ ತಂದೆ ನಮಗೆ ಹೇಳಿದ್ದರು ಎಂದು ಸ್ಮರಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನವ್ರು ಗನ್ ತಗೊಂಡು ಹೋದ್ರು, ಬುಲೆಟ್‌ಗಳು ಬಿಜೆಪಿ-ಜೆಡಿಎಸ್‌ನಲ್ಲಿವೆ: ಸುರೇಶ್ ಬಾಬು
Advertisement
Advertisement
2016ರ ಡಿಸೆಂಬರ್ 23ರಂದು ಬಿಡುಗಡೆಯಾದ ದಂಗಲ್ ಚಿತ್ರವನ್ನು ನಿತೀಶ್ ತಿವಾರಿ ನಿರ್ದೇಶಿಸಿದ್ದು, ಆಮೀರ್ ಖಾನ್, ಮಹಾವೀರ್ ಫೋಗಟ್ ಅವರ ಪ್ರಮುಖ ಪಾತ್ರ ನಿರ್ವಹಿಸಿರುವುದು ಮಾತ್ರವಲ್ಲದೇ ಈ ಚಿತ್ರದ ಸಹ ನಿರ್ಮಾಪಕರೂ ಹೌದು. ಇದು ಮಾಜಿ ಕುಸ್ತಿಪಟು ಮಹಾವೀರ್ ಫೋಗಟ್ ಅವರು ತಮ್ಮ ಮಕ್ಕಳಾದ ಗೀತಾ ಹಾಗೂ ಬಬಿತಾ ಅವರನ್ನು ವಿಶ್ವದರ್ಜೆಯ ಕುಸ್ತಿಪಟುಗಳಾಗಿ ಬೆಳೆಸಿದ ಕಥಾನಕವನ್ನು ಬಿಂಬಿಸುತ್ತದೆ. ಇದನ್ನೂ ಓದಿ: `ಮಹಾ’ ಚುನಾವಣೆ: ಎನ್‌ಸಿಪಿ ಮೊದಲ ಪಟ್ಟಿ ಬಿಡುಗಡೆ – ಬಾರಾಮತಿಯಿಂದ ಅಜಿತ್ ಪವಾರ್ ಸ್ಪರ್ಧೆ