ರಾಜಸ್ಥಾನ: ಹೆರಿಗೆ ಸಮಯದಲ್ಲಿ ಅದಲು ಬದಲಾಗಿದ್ದ ಶಿಶುಗಳು(Babies) ಡಿಎನ್‍ಎ ಪರೀಕ್ಷೆ ನಂತರ ತಮ್ಮ ಪೋಷಕರ ಕೈ ಸೇರಿದ ಘಟನೆ ಜೈಪುರದ(Jaipur) ಮಹಿಳಾ ಚಿಕಿತ್ಸಾಲಯದಲ್ಲಿ(Mahila Chikitsalaya) ನಡೆದಿದೆ.
Advertisement
ಸೆಪ್ಟೆಂಬರ್ 1 ರಂದು ಈ ಘಟನೆ ನಡೆಸಿದ್ದು, ಆಸ್ಪತ್ರೆಯ ಸಿಬ್ಬಂದಿ(Hospital Staff) ನಿರ್ಲಕ್ಷ್ಯದಿಂದ ಶಿಶುಗಳು ಬದಲಾಗಿದ್ದವು. ಹೀಗಾಗಿ ಇಬ್ಬರು ತಾಯಂದಿರು ತಮ್ಮ ಮಗುವನ್ನು ಭೇಟಿಯಾಗಲು 10 ದಿನಗಳ ಕಾಲ ಬೇಕಾಯಿತು ಎಂದು ಆರೋಪಿಸಲಾಗಿದೆ. ಆಸ್ಪತ್ರೆ ಆಡಳಿತವು ಪೊಲೀಸರ ಸಹಾಯದಿಂದ ಎರಡು ಮಗುವಿನ ಡಿಎನ್‍ಎ(DNA) ಪರೀಕ್ಷೆ ನಡೆಸಿ ಇದೀಗ ಪೋಷಕರಿಗೆ ಹಸ್ತಾಂತರಿಸಿದೆ. ಇದನ್ನೂ ಓದಿ: ಮದರಸಾದಲ್ಲಿ ಮರ್ಡರ್ – ಬಾಲಕನನ್ನು ಕೊಂದ ಮತ್ತೋರ್ವ ವಿದ್ಯಾರ್ಥಿ ಬಂಧನ
Advertisement
Advertisement
ಹೆರಿಗೆಯಾದ ಮೂರು ದಿನಗಳ ನಂತರ ಆಸ್ಪತ್ರೆ ಸಿಬ್ಬಂದಿಗೆ ತನ್ನ ತಪ್ಪಿನ ಅರಿವು ಆಗಿದೆ. ನಿಶಾ (Nisha) ಗಂಡು ಮಗುವಿಗೆ ಜನ್ಮ ನೀಡಿದ್ದರೆ, ರೇಷ್ಮಾ (Reshma) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆರಂಭದಲ್ಲಿ ಮಕ್ಕಳು ಪರಸ್ಪರ ಬದಲಾಗಿದ್ದಾರೆ ಎಂಬ ಸತ್ಯವನ್ನು ಒಪ್ಪಿಕೊಳ್ಳಲು ಪೋಷಕರು ನಿರಾಕರಿಸಿದರು. ಹೀಗಾಗಿ ಆಸ್ಪತ್ರೆಯ ಆಡಳಿತ ಮಂಡಳಿಯು ಮಕ್ಕಳಿಗೆ ಡಿಎನ್‍ಎ ಪರೀಕ್ಷೆ ನಡೆಸಿತು ಎಂದು ಆಸ್ಪತ್ರೆ ಆಡಳಿತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ಹಗರಣ: ನಾನು ಯಾವುದೇ ತಪ್ಪು ಮಾಡಿಲ್ಲ, ಆಡಿಯೋದಲ್ಲಿ ಮಾತನಾಡಿದ್ದು ನಾನಲ್ಲ: ಬಸವರಾಜ ದಡೇಸಗೂರು