ಇಸ್ಲಾಮಾಬಾದ್: ವಿಶ್ವಕಪ್-2023ರ ಟೂರ್ನಿಯಲ್ಲಿ (World Cup 2023) ಪಾಕಿಸ್ತಾನ ಕಳಪೆ ಪ್ರದರ್ಶನ ತೋರಿದ್ದು, ಲೀಗ್ ಸುತ್ತಿನಲ್ಲೇ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಸೋಲಿನ ಹೊಣೆ ಹೊತ್ತಿರುವ ಪಾಕ್ ತಂಡದ ನಾಯಕ ಬಾಬರ್ ಆಜಂ (Babar Azam) ತನ್ನ ಎಲ್ಲಾ ಸ್ವರೂಪದ (ಟೆಸ್ಟ್, ಏಕದಿನ, ಟಿ20) ನಾಯಕತ್ವಕ್ಕೂ ರಾಜೀನಾಮೆ ನೀಡಿದ್ದಾರೆ.
— Babar Azam (@babarazam258) November 15, 2023
Advertisement
ಬಾಬಾರ್ ಆಜಂ ಈ ಮಾಹಿತಿಯನ್ನು ತಮ್ಮ ಸೋಶಿಯಲ್ ಮೀಡಿಯಾ (Social Media) X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅಂದು ನಕ್ಕಿದ್ದೆ, ನೀವಿಂದು ನನ್ನ ಹೃದಯ ಮುಟ್ಟಿದ್ದೀರಿ – ತನ್ನ ದಾಖಲೆ ಮುರಿದ ಕೊಹ್ಲಿ ಅಭಿನಂದಿಸಿದ ಕ್ರಿಕೆಟ್ ದೇವರು
Advertisement
2019ರಲ್ಲಿ ಪಾಕಿಸ್ತಾನ ತಂಡವನ್ನು (Pakistan Team) ಮುನ್ನಡೆಸಲು ನಾನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನಿಂದ ಕರೆ ಸ್ವೀಕರಿಸಿದ ಕ್ಷಣವನ್ನು ನಾನು ಈಗಲೂ ನೆನಪಿಸಿಕೊಳ್ಳುತ್ತೇನೆ. ಕಳೆದ 4 ವರ್ಷಗಳಲ್ಲಿ ನಾನು ಮೈದಾನದಲ್ಲಿ ಮತ್ತು ಮೈದಾನದ ಹೊರೆಗೆ ಅನೇಕ ಏಳು-ಬೀಳುಗಳನ್ನು ಅನುಭವಿಸಿದ್ದೇನೆ. ಆದಾಗ್ಯೂ ಕ್ರಿಕೆಟ್ ಜಗತ್ತಿನಲ್ಲಿ ತುಂಬು ಹೃದಯದಿಂದ ಅದೇ ಉತ್ಸಾಹ ಮತ್ತು ಪಾಕಿಸ್ತಾನದ ಘನತೆ ಉಳಿಸಿಕೊಳ್ಳುವ ಸದುದ್ದೇಶ ಹೊಂದಿದ್ದೇನೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.
Advertisement
Advertisement
ಸಹ ಆಟಗಾರರು, ಕೋಚ್‌ಗಳು ಮತ್ತು ನಿರ್ವಹಣಾ ಮಂಡಳಿಯ ಸಾಮೂಹಿಕ ಪ್ರಯತ್ನದ ಫಲವಾಗಿ ವೈಟ್‌ಬಾಲ್ ಮಾದರಿಯ ಕ್ರಿಕೆಟ್‌ನಲ್ಲಿ ವಿಶ್ವದ ನಂ.1 ಸ್ಥಾನವನ್ನೂ ತಲುಪಿದ್ದೆ. ಈ ಜರ್ನಿ ಸಮಯದಲ್ಲಿ ನನಗೆ ಬೆಂಬಲ ನೀಡಿದ್ದನ್ನು ನಾನು ಎಂದಿಗೂ ಮರೆಯುವುದಿಲ್ಲ. ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಿಗೆ (Pakistan Cricket Fans) ನನ್ನ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ ಎಂದು ಭಾವುಕವಾಗಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: World Cup 2023: ಗೆದ್ದು ಆಟ ಮುಗಿಸಿದ ಇಂಗ್ಲೆಂಡ್ – ಹೀನಾಯ ಸೋಲಿನೊಂದಿಗೆ ಪಾಕ್ ಮನೆಗೆ
ನಾನಿಂದು ಪಾಕಿಸ್ತಾನ ಕ್ರಿಕೆಟ್ ತಂಡದ ಎಲ್ಲಾ ಮಾದರಿಯ ನಾಯಕತ್ವದಿಂದ ಕೆಳಗಿಳಿಯುತ್ತಿದ್ದೇನೆ. ಇದು ಕಠಿಣ ನಿರ್ಧಾರ ಆದರೆ ಈ ಕರೆಗೆ ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ನಾನು ಮೂರು ಮಾದರಿಗಳಲ್ಲಿ ಆಟಗಾರನಾಗಿ ಪಾಕಿಸ್ತಾನ ತಂಡ ಪ್ರತಿನಿಧಿಸುವುದನ್ನು ಮುಂದುವರಿಸುತ್ತೇನೆ. ನನ್ನ ಅನುಭವ ಮತ್ತು ಸಮರ್ಪಣೆಯೊಂದಿಗೆ ಹೊಸ ನಾಯಕ ಮತ್ತು ತಂಡವನ್ನು ಬೆಂಬಲಿಸುತ್ತೇನೆ. ಇಷ್ಟು ದಿನ ಈ ಮಹತ್ವದ ಜವಾಬ್ದಾರಿ ನನಗೆ ವಹಿಸಿದ್ದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ನನ್ನ ಪ್ರಾಮಾಣಿಕ ಧನ್ಯವಾದ ತಿಳಿಸುತ್ತೇನೆ ಎಂಬುದಾಗಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
2023ರ ವಿಶ್ವಕಪ್ ಟೂರ್ನಿಯಲ್ಲಿ 9ರ ಪೈಕಿ ಕೇವಲ 4 ಲೀಗ್ ಪಂದ್ಯಗಳಲ್ಲಿ ಮಾತ್ರವೇ ಗೆಲುವು ಸಾಧಿಸಿತು. ಇದರಿಂದ ಲೀಗ್ ಸುತ್ತಿನಲ್ಲೇ ಹೊರಬಿದ್ದಿತು. ಬಾಬರ್ ಆಜಂ 9 ಪಂದ್ಯಗಳಲ್ಲಿ 40 ಸರಾಸರಿಯೊಂದಿಗೆ 82.90 ಸ್ಟ್ರೈಕ್‌ರೇಟ್‌ನಲ್ಲಿ 320 ರನ್ ಗಳಿಸಿದ್ದರು.