CricketLatestLeading NewsMain PostSports

ಕೊಹ್ಲಿಯ ದಾಖಲೆಯ ರನ್ ಶಿಖರವನ್ನು ಪುಡಿಗಟ್ಟಿದ ಬಾಬರ್ ಅಜಾಮ್‌

ಇಸ್ಲಾಮಾಬಾದ್: ಪಾಕಿಸ್ತಾನದ ನಾಯಕ ಬಾಬರ್ ಅಜಾಮ್‌ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಯ ದಾಖಲೆಯೊಂದನ್ನು ಮುರಿದಿದ್ದಾರೆ.

ಕೊಹ್ಲಿ ನಾಯಕನಾಗಿ ಏಕದಿನ ಕ್ರಿಕೆಟ್‍ನಲ್ಲಿ 17 ಇನ್ನಿಂಗ್ಸ್‌ಗಳಿಂದ 1,000 ರನ್ ಪೂರೈಸಿದ್ದರು. ಇದೀಗ ಬಾಬರ್ ಅಜಾಮ್‌ ನಾಯಕನಾಗಿ ಕೇವಲ 13 ಇನ್ನಿಂಗ್ಸ್‌ನಲ್ಲಿ 1,000 ರನ್ ಸಿಡಿಸಿ ನೂತನ ದಾಖಲೆ ಬರೆದಿದ್ದಾರೆ. ಈ ಮೂಲಕ ಕೊಹ್ಲಿಯ ವಿಶೇಷ ವಿಶ್ವದಾಖಲೆಯೊಂದನ್ನು ಮುರಿಯುವ ಮೂಲಕ ಬಾಬರ್ ಅಜಾಮ್‌ ರನ್ ಶಿಖರವೇರಿದ್ದಾರೆ. ಇದನ್ನೂ ಓದಿ: ಲಂಕಾ T20, ಏಕದಿನ ಕ್ರಿಕೆಟ್‌ಗೆ ಹರ್ಮನ್ ಪ್ರೀತ್ ಕೌರ್ ನಾಯಕಿ

ಏಕದಿನ ಕ್ರಿಕೆಟ್‍ನಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕರಾಗಿದ್ದ ಎಬಿಡಿ ವಿಲಿಯರ್ಸ್ 18 ಇನ್ನಿಂಗ್ಸ್‌ಗಳಿಂದ ಸಾವಿರ ರನ್ ಪೂರೈಸಿದರೆ, ನ್ಯೂಜಿಲೆಂಡ್ ತಂಡದ ನಾಯಕ ವಿಲಿಯಮ್ಸನ್ 20 ಇನ್ನಿಂಗ್ಸ್‌ಗಳಿಂದ 1,000 ರನ್ ಪೂರೈಸಿ ಈ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: ಟಿ20 ಸರಣಿಯಿಂದ ಕೆ.ಎಲ್ ರಾಹುಲ್ ಔಟ್ – ಪಂತ್‍ಗೆ ಒಲಿದ ನಾಯಕತ್ವ

 

View this post on Instagram

 

A post shared by Pakistan Cricket (@therealpcb)

ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನ ತಂಡ ಏಕದಿನ ಸರಣಿ ಆಡುತ್ತಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಬಾಬರ್ ಅಜಾಮ್‌ 103 ರನ್ (107 ಎಸೆತ, 9 ಬೌಂಡರಿ) ಸಹಿತ ಶತಕ ಬಾರಿಸಿ ಪಾಕಿಸ್ತಾನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂದ್ಯದಲ್ಲಿ ವೆಸ್ಟ್ ವಿರುದ್ಧ ಪಾಕ್ 5 ವಿಕೆಟ್‍ಗಳ ಜಯದೊಂದಿಗೆ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.

Leave a Reply

Your email address will not be published.

Back to top button