ಇಸ್ಲಾಮಾಬಾದ್: ವಿಶ್ವಕಪ್ 2023 ಟೂರ್ನಿಯಲ್ಲಿ ಪಾಕಿಸ್ತಾನ ಕಳಪೆ ಪ್ರದರ್ಶನ ತೋರಿದೆ. ಭಾರತದಿಂದ ವಾಪಸಾದ ನಂತರ ಪಾಕಿಸ್ತಾನದ (Pakistan) ನಾಯಕ ಬಾಬರ್ ಅಜಂ (Babar Azam) ವೈಟ್ ಬಾಲ್ ಕ್ರಿಕೆಟ್ ನಾಯಕತ್ವದಿಂದ ಕೆಳಗಿಳಿಯುವ ಸಾಧ್ಯತೆಯಿದೆ.
ವಿಶ್ವಕಪ್ 2023ರ (World Cup 2023) ಟೂರ್ನಿಯಲ್ಲಿ ಶ್ರೀಲಂಕಾ (Sri Lanka) ವಿರುದ್ಧ ಆಡಿದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ (New Zealand) 5 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಪಾಕಿಸ್ತಾನ ತಂಡ ಎದುರಿಸಲು ಸಾಧ್ಯವಾಗದ ಸವಾಲನ್ನೇ ಮುಂದಿಟ್ಟಿದೆ. ಒಂದು ವೇಳೆ ಕಿವೀಸ್ ಹಿಂದಿಕ್ಕೆ ಪಾಕ್ ಸೆಮಿಸ್ ಪ್ರವೇಶಿಸಲೇಬೇಕಾದರೆ ಪಾಕ್ ತಂಡ ಊಹಿಸಲು ಸಾಧ್ಯವಾಗಷ್ಟು ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸಬೇಕಿದೆ. ಇದನ್ನೂ ಓದಿ: ಆ ಒಬ್ಬ ಆಟಗಾರ 20-30 ಓವರ್ ಆಡಿದ್ರೆ, ಸೆಮಿಸ್ ಪ್ರವೇಶ ಮಾಡ್ತೀವಿ – ಬಾಬರ್ ಆಜಂ
Advertisement
Advertisement
ತಮ್ಮ ನಾಯಕತ್ವದ ಪಾಕಿಸ್ತಾನ ತಂಡ ವಿಶ್ವಕಪ್ ಸೆಮಿಸ್‌ನಿಂದ ಹೊರಬೀಳುವ ಭೀತಿಯಲ್ಲಿರುವ ಬಾಬರ್ ತನ್ನ ಭವಿಷ್ಯದ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ರಮಿಜ್ ರಾಜಾ ಹಾಗೂ ಅವರಿಗೆ ಹತ್ತಿರವಿರುವವರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ.
Advertisement
ನಾಯಕತ್ವದಲ್ಲಿ ಮುಂದುವರಿಯುವ ನಿರ್ಧಾರವು ಬಾಬರ್‌ಗೆ ಬಂದ ಸಲಹೆಯನ್ನು ಅವಲಂಬಿಸಿರುತ್ತದೆ. ಅವರ ಕೆಲವು ಆಪ್ತರು ಎಲ್ಲಾ ಮೂರು ಸ್ವರೂಪಗಳಲ್ಲಿ ನಾಯಕತ್ವದಿಂದ ಕೆಳಗಿಳಿಯುವಂತೆ ಬಾಬರ್‌ಗೆ ಸಲಹೆ ನೀಡಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಪಾಕ್ ಮುಂದಿರುವ ಘೋರ ಸವಾಲು ಯಾವುದು? – ಎಷ್ಟು ರನ್ ಅಂತರದಲ್ಲಿ ಗೆದ್ದರೆ ಸೆಮಿಸ್ ತಲುಪಬಹುದು?
Advertisement
ಇಂದು (ಶನಿವಾರ) ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಬಹುತೇಕ ಅಂತಿಮ ಪಂದ್ಯವನ್ನೇ ಆಡುತ್ತಿದೆ. ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಬಾಬರ್ ಅವರ ನಾಯಕತ್ವದ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ, “ನಾವು ಪಾಕಿಸ್ತಾನಕ್ಕೆ ಹಿಂತಿರುಗಿದ ನಂತರ ಅಥವಾ ಈ ಪಂದ್ಯ ಮುಗಿದ ಬಳಿ ನಾಯಕತ್ವದ ವಿಚಾರ ಏನಾಗುತ್ತದೆ ಎಂಬುದು ಗೊತ್ತಾಗಲಿದೆ. ಆದರೆ ಈಗ ನಾನು ಈ ಬಗ್ಗೆ ಗಮನಹರಿಸುತ್ತಿಲ್ಲ. ನನ್ನ ಗಮನ ಮುಂದಿನ ಪಂದ್ಯದ ಮೇಲೆ” ಎಂದು ಬಾಬರ್ ಉತ್ತರಿಸಿದ್ದರು.
ವಿಶ್ವಕಪ್‌ನಲ್ಲಿ ನಾಯಕತ್ವವು ಅವರ ಫಾರ್ಮ್ ಮೇಲೆ ಪರಿಣಾಮ ಬೀರಿದೆ ಎಂಬ ವಿಚಾರವನ್ನು ಅವರು ನಿರಾಕರಿಸಿದ್ದಾರೆ. “ಕಳೆದ ಮೂರು ವರ್ಷಗಳಿಂದ ನಾನು ನನ್ನ ತಂಡದ ನಾಯಕನಾಗಿದ್ದೇನೆ. ನಾನು ಎಂದಿಗೂ ಈ ರೀತಿ ಭಾವಿಸಿಲ್ಲ. ಏಕೆಂದರೆ ವಿಶ್ವಕಪ್‌ನಲ್ಲಿ ನಾನು ಮಾಡಬೇಕಾದ ರೀತಿಯಲ್ಲಿ ಪ್ರದರ್ಶನ ನೀಡಲಿಲ್ಲ. ಅದಕ್ಕಾಗಿಯೇ ನಾನು ಒತ್ತಡದಲ್ಲಿದ್ದೇನೆ ಎಂದು ಜನರು ಹೇಳುತ್ತಿದ್ದಾರೆ. ನಾನು ಯಾವುದೇ ಒತ್ತಡಕ್ಕೆ ಒಳಗಾಗಿಲ್ಲ. ನಾನು ಕಳೆದ 3 ವರ್ಷಗಳಿಂದ ಇದನ್ನು ಮಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಐಕಾನಿಕ್ ಈಡನ್ ಗಾರ್ಡನ್ಸ್‌ನಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಆರಂಭವಾಗಿದೆ. ಇದನ್ನೂ ಓದಿ: World Cup 2023: ಲಂಕಾ ವಿರುದ್ಧ ಕಿವೀಸ್‌ಗೆ 5 ವಿಕೆಟ್‌ಗಳ ಜಯ – ಪಾಕ್ ಮುಂದಿದೆ ಅಸಾಧ್ಯ ಸವಾಲು