ಯುಪಿ ಚುನಾವಣೆಯಲ್ಲಿ ಐತಿಹಾಸಿಕ ಸೋಲಿನ ಭಯದಿಂದ ‘ಬಾಬಾಜಿ’ ಒತ್ತಡದಲ್ಲಿದ್ದಾರೆ: ಅಖಿಲೇಶ್

Public TV
1 Min Read
Akhilesh Yadav Yogi Adityanath

ಲಕ್ನೋ: ಯುಪಿ ಚುನಾವಣೆಯಲ್ಲಿ ಐತಿಹಾಸಿಕ ಸೋಲಿನ ಭಯದಿಂದ ‘ಬಾಬಾಜಿ’ ಒತ್ತಡದಲ್ಲಿದ್ದಾರೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಸಮಾಜವಾದಿ ಪಕ್ಷದ(ಎಸ್‍ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ವ್ಯಂಗ್ಯವಾಡಿದರು.

ಯೋಗಿ ಅವರ ಬಗ್ಗೆ ಅಖಿಲೇಶ್ ಯಾದವ್ ತಮ್ಮ ಟ್ವಿಟ್ಟರ್‌ನಲ್ಲಿ, ‘ನಾವು ಅವರಿಗೆ ‘ಕಂಪ್ರೆಸರ್’ ಎಂದು ಹೇಳಿದಾಗ, ಅವರು ‘ಕಡಿಮೆ ಒತ್ತಡ’ ಎಂದು ಅರ್ಥಮಾಡಿಕೊಂಡರು. ಬಾಬಾಜೀ ಅವರು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ. ಆದರೆ ನಿಜವಾಗಿಯೂ ಅವರು ಚುನಾವಣೆ ಸೋಲಿನ ಭಯದಿಂದ ‘ಒತ್ತಡ’ಕ್ಕೆ ಒಳಗಾಗಿದ್ದಾರೆ. ಮುಂದೆ ಬರುವ ಚುನಾವಣೆಯಲ್ಲಿ ಐತಿಹಾಸಿಕ ಸೋಲನ್ನು ಬಿಜೆಪಿ ಅನುಭವಿಸುತ್ತೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪಕ್ಷದ ನಾಯಕರು ಬೇರೆ ಪಕ್ಷದ ಸದಸ್ಯರ ಆಂತರಿಕ ವಿಚಾರದಲ್ಲಿ ಹೇಳಿಕೆ ಕೊಡಬಾರದು: ಡಿಕೆಶಿ

akhilesh yadav

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಯಾದವ್ ಮತ್ತು ಯೋಗಿ ಆದಿತ್ಯನಾಥ್ ಮಾತಿನ ಸಮರ ನಡೆಯುತ್ತಿದ್ದಾರೆ. ಒಂದಲ್ಲ ಒಂದು ವಿಚಾರಕ್ಕೆ ಇಬ್ಬರು ಒಬ್ಬರನೊಬ್ಬರು ಕಾಲೆಳೆದುಕೊಳ್ಳುತ್ತಾ ಇರುತ್ತಾರೆ. ಇಬ್ಬರು ಪರಸ್ಪರ ಮಾತಿನ ದಾಳಿ ನಡೆಸುತ್ತಾ ಇರುತ್ತಾರೆ. ಅಲ್ಲದೆ ಬಿಜೆಪಿ ಪಕ್ಷವು ಚುನಾವಣೆಗಾಗಿ ನಡೆಸುತ್ತಿರುವ ರ್ಯಾಲಿಯಲ್ಲಿ ಯಾದವ್ ಅವರನ್ನು ‘ಬಾಬುವಾ’ ಎಂದು ಕರೆಯಲಾಗುತ್ತಿದ್ದು, ಈ ಹಿನ್ನೆಲೆ ಯಾದವ್ ಅವರು ಯೋಗಿ ಅವರನ್ನು ‘ಬಾಬಾಜಿ’ ಎಂದು ತಿರುಗೇಟು ಕೊಟ್ಟಿದ್ದಾರೆ.

ಚುನಾವಣೆಯ ದಿನಾಂಕಗಳು ಹತ್ತಿರ ಬರುತ್ತಿದ್ದಂತೆ, ಉತ್ತರ ಪ್ರದೇಶದಲ್ಲಿ ಚುನಾವಣೆಯ ಪ್ರಚಾರ ಬರದಿಂದ ಸಾಗುತ್ತಿದೆ. ಉತ್ತರ ಪ್ರದೇಶದ 403 ವಿಧಾನಸಭಾ ಸ್ಥಾನಗಳಿಗೆ ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮತಗಳ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ. ಇದನ್ನೂ ಓದಿ: ರಸ್ತೆಯಲ್ಲಿ ಬಲೂನ್ ಮಾರುತ್ತಿದ್ದವರ ಮೇಲೆ ಹರಿದ ಕಾರು – ತಾಯಿ ಸಾವು, ಮಗ ಬಚಾವ್

Share This Article
Leave a Comment

Leave a Reply

Your email address will not be published. Required fields are marked *