– ಪೊಲೀಸರಿಗೆ ಸುಳಿವು ತಪ್ಪಿಸಲು ಸ್ನ್ಯಾಪ್‌ಚಾಟ್ ಬಳಕೆ
ಮುಂಬೈ: ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ (Baba Siddique) ಹತ್ಯೆಯ ಶಂಕಿತ ಆರೋಪಿಯ ಮೊಬೈಲ್‌ನಲ್ಲಿ ಸಿದ್ದಿಕಿಯವರ ಪುತ್ರ ಜೀಶನ್ ಸಿದ್ದಿಕಿಯವರ ಫೋಟೋ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಈ ಪ್ರಕರಣದ ಮಾಸ್ಟರ್ ಮೈಂಡ್, ಜೀಶನ್ ಸಿದ್ದಿಕಿ ಚಿತ್ರವನ್ನು ಶೂಟರ್‌ಗಳೊಂದಿಗೆ ಹಂಚಿಕೊಂಡಿದ್ದ. ಆರೋಪಿಗಳು ಫೋಟೋ ಹಂಚಿಕೊಳ್ಳಲು ಸ್ನ್ಯಾಪ್‌ಚಾಟ್ (Snapchat) ಬಳಸಿದ್ದಾರೆ. ಶೂಟರ್‌ಗಳು ಮತ್ತು ಸಂಚುಕೋರರು ಸಂವಹನ ನಡೆಸಲು ಈ ಅಪ್ಲಿಕೇಶನ್ ಬಳಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಪೊಲೀಸರಿಗೆ ಸಂವಹನದ ಮಾಹಿತಿ ಸಿಗದಂತೆ ತಪ್ಪಿಸಲು Instagram ಮತ್ತು Snapchat ಮೂಲಕ ಸಂವಹನ ನಡೆಸುತ್ತಿದ್ದರು. ಈ ಎರಡೂ ಅಪ್ಲಿಕೇಶನ್‌ಗಳಲ್ಲಿ ಸಂದೇಶಗಳನ್ನು ವೀಕ್ಷಿಸಿದ ಬಳಿಕ ಅಥವಾ ಅವಧಿ ಮುಗಿದ ನಂತರ ಸ್ವಯಂಚಾಲಿತವಾಗಿ ಡಿಲೀಟ್ ಆಗುವಂತೆ ಸೆಟ್ಟಿಂಗ್ಸ್ ಮಾಡಿಕೊಂಡಿದ್ದರು.
Advertisement
ಬಾಬಾ ಸಿದ್ದಿಕಿಯವರನ್ನು ಅವರ ಮಗನ ಕಚೇರಿಯ ಹೊರಗೆ ಗುಂಡು ಹಾರಿಸಿ ಹತ್ಯೆಗೈಯ್ಯಲಾಗಿತ್ತು. ಮೂವರು ಶೂಟರ್‌ಗಳ ಪೈಕಿ ಗುರ್ಮೈಲ್ ಸಿಂಗ್ ಮತ್ತು ಧರ್ಮರಾಜ್ ಕಶ್ಯಪ್ ಬಂಧಿಸಲಾಗಿದ್ದು, ಶಿವಕುಮಾರ್ ಗೌತಮ್ ಸದ್ಯ ಪರಾರಿಯಾಗಿದ್ದಾನೆ. ನಾಲ್ಕನೇ ಶಂಕಿತ ಹರೀಶ್ ಕುಮಾರ್ ಬಾಲಕ್ರಮ್ ನಿಸಾದ್‌ನನ್ನು ಸೋಮವಾರ ಉತ್ತರ ಪ್ರದೇಶದಲ್ಲಿ ಬಂಧಿಸಿ ಮುಂಬೈಗೆ ಕರೆತರಲಾಗಿತ್ತು.
Advertisement
ಬಾಬಾ ಸಿದ್ದಿಕಿಯವರ ಹತ್ಯೆಯ ಆರೋಪಿಗಳಾದ ಮೂವರು ಶೂಟರ್‌ಗಳು ಮುಂಬೈನ ಕುರ್ಲಾ ಪ್ರದೇಶದಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರು. ಈ ವೇಳೆ ಯೂಟ್ಯೂಬ್‌ನಲ್ಲಿ ಟ್ಯುಟೋರಿಯಲ್ ವೀಡಿಯೊಗಳನ್ನು ನೋಡಿ ಬಂದೂಕುಗಳನ್ನು ಹೇಗೆ ಬಳಸಬೇಕೆಂದು ಕಲಿತಿದ್ದರು ಎಂದು ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಆರೋಪಿಗಳು ಸುಮಾರು ನಾಲ್ಕು ವಾರಗಳ ಕಾಲ ಅಂತಹ ವೀಡಿಯೊಗಳನ್ನು ವೀಕ್ಷಿಸಿದ್ದರು.
ಸಿದ್ದಿಕಿ ಪುತ್ರ ಜೀಶನ್ ಸಿದ್ದಿಕಿ ಪೂರ್ವ ವಂಡ್ರೆ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ. ಅವರ ಕಚೇರಿಯ ಹೊರಗೆ ಬಾಬಾ ಸಿದ್ದಿಕಿಯವರನ್ನು ಹತ್ಯೆಗೈಯ್ಯಲಾಗಿತ್ತು.