ರಾಮ್‍ದೇವ್ ಸ್ವದೇಶಿ ಚಾಟ್ ಆ್ಯಪ್ ಗೂಗಲ್ ಪ್ಲೇ ಸ್ಟೋರಿನಲ್ಲಿ ಲಭ್ಯವಿಲ್ಲ!

Public TV
1 Min Read
Baba Ramdev kimbho 750

ನವದೆಹಲಿ: ನಿನ್ನೆ ಒಂದು ದಿನಕ್ಕೆ ಪರೀಕ್ಷಾರ್ಥವಾಗಿ ಬಿಡುಗಡೆ ಮಾಡಿದ್ದ ಬಾಬಾ ರಾಮ್‍ದೇವ್ ಅವರ ಪತಂಜಲಿ ಸ್ವದೇಶಿ ಚಾಟ್ ಅ್ಯಪ್ ಕಿಂಬೊಹೋ ತಾಂತ್ರಿಕ ದೋಷದಿಂದ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿಲ್ಲ ಎಂದು ಪತಂಜಲಿ ವಕ್ತಾರ ಎಸ್ ಕೆ ಟಿಜಾರಾವಾಲಾ ಟ್ವೀಟ್ ಮಾಡಿದ್ದಾರೆ.

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲ್ಯಾಂಡ್ ಆದ ಮೂರು ಗಂಟೆಯಲ್ಲಿ 1.5 ಲಕ್ಷ ಮಂದಿ ಜನರು ಡೌನ್ ಲೋಡ್ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ ಹಾಗಾಗಿ ತಾಂತ್ರಿಕ ದೋಷ ಎದುರಾಗಿದೆ. ಎಲ್ಲಾ ಗ್ರಾಹಕರಿಗೂ ಅಭಾರಿಯಾಗಿದ್ದೇವೆ. ಆದಷ್ಟು ಬೇಗ ಕಿಂಬೊಹೋ ಅ್ಯಪ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

ಬಹಳಷ್ಟು ಜನ ಹೊಸ ಅ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳುವ ಪ್ರಯತ್ನ ಮಾಡಿ ನಿರಾಶರಾಗಿದ್ದಾರೆ.

ಸಿಮ್ ಕಾರ್ಡ್ ಗಳನ್ನು ಬಿಡುಗಡೆಗೊಳಿಸಿದ ನಂತರ ಬಾಬಾ ರಾಮ್‍ದೇವ್ ಅವರು ಸ್ವದೇಶಿ ಚಾಟ್ ಆ್ಯಪ್ ಕಿಂಬೊಹೋ ವನ್ನು ವಾಟ್ಸ್ ಆ್ಯಪ್ ಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆಗೊಳಿಸಿದ್ದಾರೆ. ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. ಕಿಂಬೊಹೋ ಸಂಸ್ಕøತ ಪದ. ಇದರ ಅರ್ಥ ಹೇಗಿದಿಯಾ? ಅಥವಾ ಏನು ಸಮಾಚಾರ? ಎಂದು ಪತಂಜಲಿ ವಕ್ತಾರ ಎಸ್ ಕೆ ಟಿಜಾರಾವಾಲಾ ಟ್ವೀಟ್ ಮಾಡಿದ್ದಾರೆ.

ಈ ಆ್ಯಪ್ ನಲ್ಲಿ ಟೆಕ್ಸ್ಟ್, ಆಡಿಯೊ, ಫೋಟೋ, ವಿಡಿಯೊ, ಸ್ಟಿಕರ್ಸ್ ಹಾಗೂ ಇತರೆ ಫೈಲ್ ಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಅನಗತ್ಯ ಸಂವಾದ ಇಲ್ಲ ಯೂಸರ್ಸ್ ನ ಬ್ಲಾಕ್ ಮಾಡಬಹುದು. ಗ್ರಾಹಕರು ಇಚ್ಛೆ ಬಂದ ಫೋಟೊವನ್ನು ವಾಲ್ ಪೇಪರ್ ಆಗಿ ಮಾಡಿಕೊಳ್ಳಬಹುದಾಗಿದೆ.

 

 

Share This Article
Leave a Comment

Leave a Reply

Your email address will not be published. Required fields are marked *