ಹರಿದ್ವಾರ್: ಯೋಗ ಗುರು ಬಾಬಾ ರಾಮ್ ದೇವ್ ಮುಂಬೈ-ಪುಣೆ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದಾರೆ ಎಂಬ ಸುದ್ದಿಯೊಂದು ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅಲ್ಲದೆ ಅಪಘಾತ ಸಂಭವಿಸಿದೆ ಎಂದು ನಂಬಿಸಲು ಕೆಲವು ಚಿತ್ರಗಳನ್ನೂ ಕೂಡ ಹಾಕಲಾಗಿತ್ತು. ಆದ್ರೆ ಇದು ಸುಳ್ಳು ಸುದ್ದಿ. ನಾನು ಆರೋಗ್ಯವಾಗಿದ್ದೇನೆ. ಭಕ್ತರು ವದಂತಿಗಳಿಗೆ ಕಿವಿಗೊಡಬೇಡಿ ಅಂತಾ ಸ್ವತಃ ಬಾಬಾ ರಾಮ್‍ದೇವ್ ಸ್ಪಷ್ಟ ಪಡಿಸಿದ್ದಾರೆ.
Advertisement
ಟ್ವೀಟ್ ಮೂಲಕ ವದಂತಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಹರಿದ್ವಾರದಲ್ಲಿದ್ದು, ಸಾವಿರಾರು ಭಕ್ತರಿಗೆ ಯೋಗ ಶಿಬಿರ ನಡೆಸಿದೆ. ನಾನು ಸುರಕ್ಷಿತನಾಗಿದ್ದೇನೆ, ಆರೋಗ್ಯವಾಗಿದ್ದೇನೆ. ವದಂತಿಗಳನ್ನ ನಂಬಬೇಡಿ ಅಂತಾ ಭಕ್ತರಿಗೆ ಮನವಿ ಮಾಡಿದ್ದಾರೆ.
Advertisement
Advertisement
ಈ ಬಗ್ಗೆ ಹೆದ್ದಾರಿ ನಿಯಂತ್ರಣ ಅಧಿಕಾರಿಗಳು ಕೂಡ ಪ್ರತಿಕ್ರಿಯಿಸಿದ್ದು, ಮುಂಬೈ-ಪುಣೆ ಹೆದ್ದಾರಿಯಲ್ಲಿ ಇಂತಹ ಯಾವುದೇ ಅಪಘಾತ ಸಂಭವಿಸಿಲ್ಲ. ಇದೊಂದು ಸುಳ್ಳು ಸುದ್ದಿ ಅಂತಾ ತಿಳಿಸಿದ್ದಾರೆ.
Advertisement
ಬಾಬಾ ರಾಮ್‍ದೇವ್ ಅವರನ್ನ ಸ್ರೆಚ್ಚರ್‍ನಲ್ಲಿ ಕೊಂಡೊಯ್ಯಲಾಗುತ್ತಿರುವ ಫೋಟೋಗಳು 2011ನೇ ವರ್ಷದ್ದಾಗಿದೆ. ಈ ಹಿಂದೆ ಬಿಹಾರದಲ್ಲಿ ಬಾಬಾ ರಾಮ್ ದೇವ್ ಅಪಘಾತಕ್ಕೀಡಾಗಿದ್ದಾಗ ತಗೆಯಲಾದ ಈ ಫೋಟೋಗಳನ್ನು ಬಳಸಿಕೊಂಡು ಕಿಡಿಗೇಡಿಗಳು ಈ ವದಂತಿಯನ್ನ ಹರಡಿದ್ದಾರೆ.
Took yog shivir of thousands of yogis in Haridwar today. I am safe and healthy. Don't believe on any rumours pic.twitter.com/6P2KlUXw8l
— Swami Ramdev (@yogrishiramdev) April 25, 2017