ನವದೆಹಲಿ: ಕಳೆದ ಎರಡು ದಿನಗಳ ಹಿಂದೆಯಷ್ಟೇ ಬಿಎಸ್‍ಎನ್‍ಎಲ್ ಪಾಲುದಾರಿಕೆಯಲ್ಲಿ ಸ್ವದೇಶಿ ಸಿಮ್ ಕಾರ್ಡ್ ಬಿಡುಗಡೆಗೊಳಿಸಿದ್ದ ಯೋಗಗುರು ಬಾಬಾ ರಾಮ್‍ದೇವ್ ಸದ್ಯ ವಾಟ್ಸಪ್ ಸಡ್ಡು ಹೊಡೆಯಲು ‘ಕಿಂಬೋ’ ಹೆಸರಿನ ಸ್ವದೇಶಿ ಆ್ಯಪ್ ಬಿಡುಗಡೆಗೊಳಿಸಿದ್ದಾರೆ.
ಈ ಕುರಿತು ಬಾಬಾ ರಾಮ್ ದೇವ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ಆಂಡ್ರಾಯ್ಡ್ ಮತ್ತು ಐಓಎಸ್ ನಲ್ಲಿ ಕಿಂಬೋ ಅಪ್ಲಿಕೇಶನ್ ಲಭ್ಯವಿದೆ.
Advertisement
Yoga guru Ramdev launched a new messaging application called Kimbho under his flagship company Patanjali today. Patanjali's spokesperson, SK Tijarawala claimed that the app will give WhatsApp a tough competetion
Read @ANI Story | https://t.co/KyxhQC21dG pic.twitter.com/N8YzJgb7bZ
— ANI Digital (@ani_digital) May 30, 2018
Advertisement
ಆ್ಯಪ್ ವಿಶೇಷತೆ ಏನು?
ಸದ್ಯ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಎಲ್ಲಾ ಚಾಟಿಂಗ್ ಆ್ಯಪ್ ಗಳ ತದೃಪಿ ಸ್ವರೂಪ ಎಂದೇ ಕಿಂಬೋ ಆ್ಯಪ್ ಅನ್ನು ಕರೆಯಬಹುದು. ಚಾಟಿಂಗ್, ಇಂಟರ್ ನೆಟ್ ಕಾಲ್, ವಿಡಿಯೋ ಕಾಲ್, ಫೋಟೊ -ವಿಡಿಯೋ ಶೇರಿಂಗ್ ಹಾಗೂ ಹಲವು ಸೌಲಭ್ಯಗಳನ್ನು ಹೊಂದಿದೆ.
Advertisement
https://twitter.com/KimbhoApp/status/1001710165060661248
Advertisement
ವಿಶೇಷವಾಗಿ ಕಿಂಬೋ ಆ್ಯಪ್ ಸಂಪೂರ್ಣ ಉಚಿತವಾಗಿದ್ದು, ಜಾಹೀರಾತು ರಹಿತವಾಗಿದೆ ಎಂಬ ಮಾಹಿತಿಯನ್ನು ನೀಡಲಾಗಿದೆ. ಈ ಹಿಂದೆ ಹಲವು ಆ್ಯಪ್ ಗಳ ಮೂಲಕ ಮಾಹಿತಿ ಸೋರಿಕೆಯಾಗಿದೆ ಎಂಬ ಆರೋಪ ಹಿನ್ನೆಲೆ ಕಿಂಬೋ ಆ್ಯಪ್ ಖಾಸಗೀತನ ರಕ್ಷಣೆಯ ಎಲ್ಲಾ ಸುರಕ್ಷತಾ ಕ್ರಮಗಳನ್ನು ಒಳಗೊಂಡಿದೆ. ಈ ಆ್ಯಪ್‍ನಲ್ಲಿ ಗ್ರಾಹಕರ ಯಾವುದೇ ಮಾಹಿತಿಗಳನ್ನು ತನ್ನ ಸರ್ವರ್ ಗಳಲ್ಲಿ ಸೇವ್ ಮಾಡದೆ, ಆಗಬಹುದಾದ ದುರ್ಬಳಕೆಯನ್ನು ತಡೆಯಲು ಸಹಾಯಕವಾಗಿದೆ ಎಂದು ತಿಳಿಸಿದೆ. ಸದ್ಯ ಪ್ಲೇ ಸ್ಟೋರ್ ನಲ್ಲಿ ಕೆಲವರು ಆ್ಯಪ್ ಗೆ 5 ಸ್ಟಾರ್ ರೆಟಿಂಗ್ ನೀಡಿದರೆ, ಕೆಲವರು ಒಂದು ಸ್ಟಾರ್ ಮಾತ್ರ ನೀಡಿದ್ದಾರೆ. ಒಟ್ಟಾರೆ ಆ್ಯಪ್ ಸದ್ಯ 4 ಸ್ಟಾರ್ ಪಡೆದು ಉತ್ತಮ ಪ್ರತಿಕ್ರಿಯೆ ಪಡೆದಿದೆ.
#BSNL launches Patanjali Samriddhi Sim cards in partnership with @yogrishiramdev https://t.co/CRDnVrrZun
— BSNL India (@BSNLCorporate) May 30, 2018
ಸದ್ಯ ಭಾರತದಲ್ಲಿ 20 ಕೋಟಿ ವಾಟ್ಸಪ್ ಬಳಕೆದಾರರಿದ್ದು, ಫೇಸ್‍ಬುಕ್ ಮಾಲೀಕತ್ವದ ವಾಟ್ಸಪ್ ಬಳಕೆದಾರರ ಮಾಹಿತಿಯನ್ನು ದುರ್ಬಳಕ್ಕೆ ಮಾಡಿಕೊಳ್ಳುತ್ತಿದೆ ಎನ್ನುವ ಆರೋಪ ಈ ಹಿಂದೆ ಕೇಳಿ ಬಂದಿತ್ತು. ಈ ವೇಳೆ ಸ್ವದೇಶಿ ಆ್ಯಪ್ ಬಿಡುಗಡೆ ಮಾಡಿರುವ ರಾಮ್‍ದೇವ್ ಸ್ವದೇಶಿ ಕಿಂಬೋ ಅಪ್ಲಿಕೇಶನ್ ಬಳಕೆ ಮಾಡುವಂತೆ ಕೇಳಿಕೊಂಡಿದ್ದಾರೆ.
ಸದ್ಯ ಕಿಂಬೋ ಆ್ಯಪ್‍ನಲ್ಲಿ ಕೆಲವು ತಾಂತ್ರಿಕ ದೋಷಗಳು ಕಂಡು ಬಂದಿದ್ದು ಗ್ರಾಹಕರು ದೂರು ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸ್ಥೆ ನಿರೀಕ್ಷೆಗೂ ಮೀರಿ ಬಳಕೆದಾರರು ಡೌನ್‍ಲೋಡ್ ಮಾಡುತ್ತಿರುವ ಕಾರಣ ಸರ್ವರ್ ಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಶೀಘ್ರವೇ ಈ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದೆ.