ವಾಷಿಂಗ್ಟನ್: ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಅಮೃತ ಮಹೋತ್ಸವವನ್ನು ವಿಜೃಂಭಣೆಯಿಂದ ರ‍್ಯಾಲಿ ನಡೆಸಿ ಆಚರಿಸಿದ್ದಾರೆ. ರ‍್ಯಾಲಿಯಲ್ಲಿ ಬಾಬಾ ಬುಲ್ಡೋಜರ್ ಎಲ್ಲರ ಗಮನ ಸೆಳೆದಿದೆ.
Advertisement
ನ್ಯೂಜೆರ್ಸಿಯ ಭಾರತೀಯರು ಬಾಬಾ ಬುಲ್ಡೋಜರ್‌ನೊಂದಿಗೆ ರ‍್ಯಾಲಿ ನಡೆಸಿದ್ದಾರೆ. ಈ ಬುಲ್ಡೋಜರ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಫ್ಲೆಕ್ಸ್ ಅಳವಡಿಸಲಾಗಿತ್ತು. ಈ ಮೂಲಕ ಬಾಬಾ ಬುಲ್ಡೋಜರ್ ಅಮೆರಿಕದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಇದನ್ನೂ ಓದಿ: ಬಿಜೆಪಿ ನಾಯಕ ಸಲ್ಲಿಸಿದ್ದ ಅರ್ಜಿ ವಜಾ – ಅತ್ಯಾಚಾರ ಪ್ರಕರಣ ದಾಖಲಿಸಲು ಹೈಕೋರ್ಟ್ ಸೂಚನೆ
Advertisement
Advertisement
ಬಾಬಾ ಬುಲ್ಡೋಜರ್‌ನೊಂದಿಗೆ ಸಾವಿರಾರು ಭಾರತೀಯರು ಸಿಎಂ ಯೋಗಿ ಜಿಂದಾಬಾದ್, ಬುಲ್ಡೋಜರ್ ಬಾಬಾ ಜಿಂದಾಬಾದ್ ಎಂದು ಘೋಷವಾಕ್ಯಗಳನ್ನು ಕೂಗುತ್ತ ಸಾಗಿರುವ ವೀಡಿಯೋ ಇದೀಗ ವೈರಲ್ ಆಗುತ್ತಿದೆ. ಇದನ್ನೂ ಓದಿ: ಎಕೆ 47 ಪತ್ತೆಯಾದ ದೋಣಿ ಆಸ್ಟ್ರೇಲಿಯಾ ಪ್ರಜೆಗೆ ಸೇರಿದೆ: ಫಡ್ನವೀಸ್
Advertisement
Bulldozer rally in Asian Township New Jersey USA which is baba with buldozer.#BulldozerBaba pic.twitter.com/uB5kMwcfkA
— TREND NEW (@trendnewnew2) August 17, 2022
ಅಮೆರಿಕದಲ್ಲಿರುವ ಭಾರತೀಯರಾದ ನಾವು ಈ ಹಿಂದೆಯು ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದೆವು. ಈ ಬಾರಿ ಅಮೃತ ಮಹೋತ್ಸವವನ್ನು ವಿಶೇಷವಾಗಿ ಆಚರಿಸಿದ್ದೇವೆ. ಈ ಮೂಲಕ ದೇಶಾಭಿಮಾನವನ್ನು ಯಾವತ್ತು ಸಾರುತ್ತೇವೆ ಎಂದು ರ‍್ಯಾಲಿಯಲ್ಲಿ ಭಾಗವಹಿಸಿದವರೊಬ್ಬರು ಹೇಳಿಕೊಂಡಿದ್ದಾರೆ.