ಆರಾಮ್ ಅರವಿಂದ ಸ್ವಾಮಿ (Aram Aravinda Swamy) ಸೆಟ್ಟೇರಿದ ದಿನದಿಂದಲೂ ಬಹಳಷ್ಟು ಸದ್ದು ಮಾಡುತ್ತಿರುವ ಸಿನಿಮಾ. ಸಖತ್ ಕ್ರಿಯೇಟಿವ್ ಆಗಿರುವ ಪ್ರಮೋಷನಲ್ ವಿಡಿಯೋ ಮೂಲಕ ಗಮನ ಸೆಳೆಯುತ್ತಿರುವ ಈ ಸಿನಿ ಬಳಗಕ್ಕೀಗ ಖ್ಯಾತ ನೃತ್ಯ ಸಂಯೋಜಕ ಬಾಬಾ ಭಾಸ್ಕರ್ (Baba Bhaskar) ಎಂಟ್ರಿ ಕೊಟ್ಟಿದ್ದಾರೆ.
ನಟ ಅನೀಶ್ ತೇಜೇಶ್ವರ್ (Anish Tejeshwar) ಹಾಗೂ ನಿರ್ದೇಶಕ ಅಭಿಷೇಕ್ ಶೆಟ್ಟಿ (Abhishek Shetty) ಕಾಂಬಿನೇಶನ್ ನಲ್ಲಿ ಮೂಡಿ ಬರ್ತಿರುವ ‘ಆರಾಮ್ ಅರವಿಂದ್ ಸ್ವಾಮಿ’ ಚಿತ್ರದ ಕ್ಯಾರೆಕ್ಟರ್ ಇಂಟ್ರೂಡಕ್ಷನ್ ಸಾಂಗ್ ಕೆಲಸ ಭರದಿಂದ ಸಾಗುತ್ತಿದೆ. ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದು, ಅರ್ಜುನ್ ಜನ್ಯ ಟ್ಯೂನ್ ಹಾಕಿರುವ ಈ ಹಾಡಿನಲ್ಲಿ ಅನೀಶ್ ಕುಣಿಸೋದಿಕ್ಕೆ ತಮಿಳಿನ ಖ್ಯಾತ ಕೊರಿಯೋಗ್ರಾಫರ್ ಬಾಬಾ ಭಾಸ್ಕರ್ ಎಂಟ್ರಿ ಕೊಟ್ಟಿದ್ದಾರೆ.
ಸಖತ್ ಸ್ಟೈಲೀಶ್ ಆಗಿ ತಯಾರಾಗುತ್ತಿರುವ ಕ್ಯಾರೆಕ್ಟರ್ ಇಂಟ್ರೂಡಕ್ಷನ್ ಸಿಂಗಿಂಗ್ ಮಸ್ತಿಗೆ ಬಾಬಾ ಭಾಸ್ಕರ್ ಕೊರಿಯೋಗ್ರಫಿ ಮಾಡ್ತಿದ್ದಾರೆ. ಈ ಹಿಂದೆ ಅನೀಶ್ ನಟನೆಯ ‘ವಾಸು ನನ್ ಪಕ್ಕ ಕಮರ್ಷಿಯಲ್’ ಸಿನಿಮಾದ ಹೀರೋ ಇಂಟ್ರೂಡಕ್ಷನ್ ಸಾಂಗ್ ಗೆ ನೃತ್ಯ ಸಂಯೋಜನೆ ಮಾಡಿದ್ದ ಭಾಸ್ಕರ್ ಮತ್ತೊಮ್ಮೆ ಅನೀಶ್ ಸಿನಿಮಾಗೆ ಕೊರಿಯೋಗ್ರಫಿ ಮಾಡುತ್ತಿದ್ದಾರೆ. ಇದನ್ನೂ ಓದಿ:ಛತ್ರಪತಿ ಶಿವಾಜಿಯ ಸೊಸೆ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಫೈನಲ್?
ರೋಮ್ಯಾಂಟಿಕ್ ಕಾಮಿಡಿ ಸಬ್ಜೆಕ್ಟ್ ಒಳಗೊಂಡ ‘ಆರಾಮ್ ಅರವಿಂದ್ ಸ್ವಾಮಿ’ ಸಿನಿಮಾದ ಟಾಕಿ ಭಾಗದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಎರಡು ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಇದೆ. ನಮ್ ಗಣಿ ಬಿಕಾಂ ಪಾಸ್, ಗಜಾನನ ಅಂಡ್ ಗ್ಯಾಂಗ್ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಅಭಿಷೇಕ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮೂರನೇ ಸಿನಿಮಾವಿದು.
ಅನೀಶ್ ತೇಜೇಶ್ವರ್ ಗೆ ಜೋಡಿಯಾಗಿ ಮಿಲನ ನಾಗರಾಜ್ ಹಾಗೂ ಹೃತಿಕ ಶ್ರೀನಿವಾಸ್ ನಟಿಸುತ್ತಿದ್ದಾರೆ. ಅಕಿರ ಸಿನಿಮಾ ಖ್ಯಾತಿಯ ಶ್ರೀಕಾಂತ್ ಪ್ರಸನ್ನ, ‘ಗುಳ್ಟು’ ಸಿನಿಮಾ ಖ್ಯಾತಿಯ ಪ್ರಶಾಂತ್ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಸಾಗರ್ ಛಾಯಾಗ್ರಹಣ, ಉಮೇಶ್ ಸಂಕಲನ ಚಿತ್ರಕ್ಕಿದೆ.