ಟಾಲಿವುಡ್‌ನ ನಿರ್ದೇಶಕ ಎಸ್.ಎಸ್ ರಾಜಮೌಳಿ (SS Rajamouli) ನಿರ್ದೇಶನದ ಬಾಹುಬಲಿ ಪಾರ್ಟ್-1 ಹಾಗೂ ಪಾರ್ಟ್-2 ಎರಡೂ ಸಿನಿಮಾವನ್ನ ಒಟ್ಟಾಗಿ ಎಕ್ಸ್‌ಪೀರಿಯನ್ಸ್ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಎರಡೂ ಸಿನಿಮಾವನ್ನ ಒಟ್ಟಾಗಿ `ಬಾಹುಬಲಿ ದಿ ಎಪಿಕ್’ (Baahubali The Epic) ಎನ್ನುವ ಟೈಟಲ್‌ನಲ್ಲಿ ಹೊಸ ಅನುಭವ ನೀಡಲಿದೆ. ಈ ನಿಟ್ಟಿನಲ್ಲಿ ಭಾರತದಾದ್ಯಂತ ಅಕ್ಟೋಬರ್ 31ರಂದು `ಬಾಹುಬಲಿ ದಿ ಎಪಿಕ್’ ಸಿನಿಮಾ ರಿಲೀಸ್ ಆಗಿದೆ. ಇದೇ ಡಿಸೆಂಬರ್ 12ರಂದು ಈ ಸಿನಿಮಾ ಜಪಾನ್‌ನಲ್ಲೂ ರಿಲೀಸ್ ಆಗ್ತಿದೆ.

ಎಸ್.ಎಸ್ ರಾಜಮೌಳಿ ನಿರ್ದೇಶನದಲ್ಲಿ ಪ್ರಭಾಸ್ (Prabhas), ರಾಣಾ ದಗ್ಗುಬಾಟಿ, ರಮ್ಯಾಕೃಷ್ಣ, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ, ಸತ್ಯರಾಜ್ ಸೇರಿದಂತೆ ಅತಿದೊಡ್ಡ ತಾರಾಗಣವಿರುವ `ಬಾಹುಬಲಿ ದಿ ಎಪಿಕ್’ ಸಿನಿಮಾ ಡಿಸೆಂಬರ್ 12ರಂದು ಜಪಾನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಹಾಗೂ ಈ ಸಿನಿಮಾ ಪ್ರೀಮಿಯರ್‌ನಲ್ಲಿ ನಟ ಪ್ರಭಾಸ್ ಕೂಡ ಭಾಗಿಯಾಗಲಿದ್ದಾರಂತೆ. ಇದನ್ನೂ ಓದಿ: ʻದಾಸʼನಿಗೆ 82 ಲಕ್ಷ ಹಣದ ತಲೆಬಿಸಿ – ಕೃಷಿ, ಪ್ರಾಣಿ ಮಾರಾಟದಿಂದಲೇ ಹಣ ಸಿಕ್ಕಿದ್ದು ಎಂದ ದರ್ಶನ್

ಸದ್ಯ ನಿರ್ದೇಶಕ ಎಸ್‌ಎಸ್ ರಾಜಮೌಳಿ ಮಹೇಶ್ ಬಾಬು ಜೊತೆಗೆ ವಾರಾಣಸಿ ಸಿನಿಮಾದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚೆಗೆ ಸಿನಿಮಾದ ಟೈಟಲ್ ಹಾಗೂ ಸಣ್ಣ ಗ್ಲಿಂಪ್ಸ್ ಮೂಲಕ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದಾರೆ. ಬಾಹುಬಲಿ ಸಿನಿಮಾ ತೆರೆಕಂಡು 10 ವರ್ಷ ಆದ ಹಿನ್ನೆಲೆ `ಬಾಹುಬಲಿ ದಿ ಎಪಿಕ್’ ರಿಲೀಸ್ ಮಾಡುತ್ತಿದೆ ಚಿತ್ರತಂಡ. ಭಾರತದಾದ್ಯಂತ ತೆರೆಕಂಡಿದೆ. ಇದೀಗ ಜಪಾನ್‌ನಲ್ಲೂ ಈ ಸಿನಿಮಾ ತೆರೆಗೆ ಬರುತ್ತಿದೆ. ಈ ನಿಟ್ಟಿನಲ್ಲಿ ಚಿತ್ರತಂಡ ಸಕಲ ತಯಾರಿಯನ್ನ ಮಾಡಿಕೊಂಡಿದೆ. ಇದನ್ನೂ ಓದಿ: ನಿರ್ದೇಶಕ ನಂದಕಿಶೋರ್‌ಗೆ ಸಾಲ ನೀಡಿದ ಕೇಸ್‌ಗೆ ಟ್ವಿಸ್ಟ್ – ಉದ್ಯಮಿ ಕಿಡ್ನ್ಯಾಪ್ ಹಿಂದೆ ರಘು ಕೈವಾಡ ಸಾಬೀತು

