ಬೆಂಗಳೂರು: ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ವೀಕ್ಷಣೆ ವಿಚಾರ ಬಹಿರಂಗವಾಗಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಗರಂ ಆಗಿ ಕಾಂಗ್ರೆಸ್ ಮುಖಂಡರೊಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾವೇರಿ ನಿವಾಸದಲ್ಲಿ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಸುಧೀಂದ್ರ ವಿರುದ್ಧ ಗರಂ ಆದ ಸಿಎಂ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಸಿಕ್ಕಿದೆ. ಮಾಧ್ಯಮಗಳಿಗೆ ಸುಧೀಂದ್ರನೇ ಮಾಹಿತಿ ನೀಡಿದ್ದಾನೆ ಎಂದು ಸಿಟ್ಟಾದ ಆದ ಸಿಎಂ, ‘ಗೆಟ್ ಔಟ್, ನಿಲ್ಲಬೇಡ ಹೋಗು’ ಎಂದು ಹೇಳಿ ಹೊರ ಕಳಿಸಿದ್ದಾರೆ.
Advertisement
ಅಪ್ಪು ಅಭಿನಯನದ ರಾಜಕುಮಾರ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದ ಸಿಎಂ ಸಿದ್ದರಾಮಯ್ಯ ಬಾಹುಬಲಿ -2 ಚಿತ್ರವನ್ನು ಸೋಮವಾರ ನೋಡಿ ಮೆಚ್ಚುಕೊಂಡಿದ್ದಾರೆ. ಬೆಂಗಳೂರಿನ ಯಶವಂತಪುರದಲ್ಲಿರುವ ಒರಾಯನ್ ಮಾಲ್‍ನ ಗೋಲ್ಡ್ ಕ್ಲಾಸ್‍ನಲ್ಲಿ ತಮ್ಮ ಮಗ ಯತೀಂದ್ರ ಜೊತೆ ಇಂದು ಚಿತ್ರವನ್ನು ವೀಕ್ಷಿಸಿದ್ದರು. ದುಬೈ ಪ್ರವಾಸದಿಂದ ವಾಪಸಾದ ಸಿಎಂ ಆಪ್ತ ಸಿಬ್ಬಂದಿ, ರಕ್ಷಣಾ ಸಿಬ್ಬಂದಿಗೂ ಮಾಹಿತಿ ನೀಡದೇ ಬಾಹುಬಲಿ ನೋಡಿದ್ದರು. ಬಾಹುಬಲಿ ನೋಡಿ ಸಿಎಂ ಮಾಲ್‍ನಿಂದ ಹೊರಬರುವಾಗ ಅಲ್ಲಿ ಸುಧೀಂದ್ರ ಹಾಜರಿದ್ದರು.
Advertisement
ಬಜೆಟ್ ನಲ್ಲಿ 200 ರೂ. ಟೆಕೆಟ್ ದರ ಘೋಷಣೆ ಮಾಡಿದ್ದರೂ ಸಿಎಂ 1050 ರೂ. ನೀಡಿ ಮಲ್ಟಿಪ್ಲೆಕ್ಸ್ ನಲ್ಲಿ ಬಾಹುಬಲಿ ನೋಡಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ಕೇಳಿ ಬಂದಿದೆ.
Advertisement
ಮಧ್ಯಾಹ್ನ ಬಾಹುಬಲಿ ಸಿನಿಮಾ ನೋಡಿದ ಸಿಎಂ ಸಿದ್ದರಾಮಯ್ಯ ಸಂಜೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಿರುತ್ತರ ಚಿತ್ರವನ್ನು ವೀಕ್ಷಿಸುತ್ತಿದ್ದಾರೆ. ನಿರುತ್ತರ ಚಿತ್ರವನ್ನು ಭಾವನಾ ನಿರ್ಮಿಸಿ, ಅಪೂರ್ವ ಕಾಸರವಳ್ಳಿ ನಿರ್ದೇಶಿಸಿದ್ದಾರೆ. ಈ ಚಿತ್ರ ವೀಕ್ಷಣೆಗೆ ಸಚಿವರಾದ ಜಿ ಪರಮೇಶ್ವರ್, ರೋಷನ್ ಬೇಗ್ ಸಿಎಂಗೆ ಸಾಥ್ ನೀಡಿದ್ದಾರೆ.
Advertisement
ಈ ವೇಳೆ ಪ್ರತಿಕ್ರಿಯೆ ನೀಡಿದ ಸಿಎಂ, ನನ್ನ ಮೊಮ್ಮಗ ನನ್ನ ಜೊತೆ ಸಿನಿಮಾ ನೋಡಬೇಕು ಅಂದಿದ್ದ. ಅದಕ್ಕೆ ಬಾಹುಬಲಿ ನೋಡಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತೀಯ ಚಿತ್ರರಂಗದ ಎಲ್ಲ ದಾಖಲೆ ಉಡೀಸ್: ಮೂರು ದಿನದ ಕಲೆಕ್ಷನ್ ಎಷ್ಟು? ಯಾವ ದೇಶದಲ್ಲಿ ಎಷ್ಟು ಕಲೆಕ್ಷನ್ ಆಗಿದೆ?