ಹೈದರಾಬಾದ್ : ಆಂಧ್ರ ಪ್ರದೇಶ ಪ್ರತ್ಯೇಕ ರಾಜ್ಯ ರಚನೆ ನಡೆದು ಹೊಸದಾಗಿ ನಿರ್ಮಿಸಲಾಗುತ್ತಿರುವ ರಾಜಧಾನಿ ಅಮರಾವತಿಯಲ್ಲಿ ಸರ್ಕಾರದ ಕಟ್ಟಡಗಳು ನಿರ್ಮಾಣಕ್ಕೆ ಸಂಬಂಧಿಸಿದಂತೆ ಚಲನಚಿತ್ರ ನಿರ್ದೇಶಕ ರಾಜಮೌಳಿ ಅವರ ವಿನ್ಯಾಸವನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿರಸ್ಕರಿಸಿದ್ದಾರೆ.
ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಬಾಹುಬಲಿ ಸಿನಿಮಾದಲ್ಲಿನ ಮಾಹಿಷ್ಮತಿ ಸಾಮ್ರಾಜ್ಯ ಕಲ್ಪನೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿತ್ತು. ಇದನ್ನು ಸ್ವತಃ ಇಷ್ಟ ಪಟ್ಟು ಮೆಚ್ಚುಗೆ ಸೂಚಿಸಿದ್ದ ಸಿಎಂ ಚಂದ್ರಬಾಬು ನಾಯ್ಡು, ಅಮರಾವತಿ ರಾಜಧಾನಿ ನಿರ್ಮಾಣಕ್ಕೆ ವಿನ್ಯಾಸ ರೂಪಿಸಲು ರಾಜಮೌಳಿ ಅವರನ್ನು ಕೇಳಿಕೊಂಡಿದ್ದರು.
Advertisement
Advertisement
ಇದರಂತೆ ರಾಜಮೌಳಿ ಅವರು ತೆಲುಗು ಸಂಸ್ಕøತಿಗೆ ಅನುಗುಣವಾಗಿ ನೂತನ ರಾಜಧಾನಿ ನಿರ್ಮಾಣದ ವಿನ್ಯಾಸವನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದರು. ಆದರೆ ನಿರ್ದೇಶಕರ ವಿನ್ಯಾಸಗಳು ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಇಷ್ಟವಾಗಿಲ್ಲ ಎನ್ನಲಾಗಿದೆ. ಈ ಕುರಿತು ಸ್ವತಃ ರಾಜಮೌಳಿ ಅವರು ಟ್ವೀಟ್ ಮಾಡಿ ತಮ್ಮ ವಿನ್ಯಾಸದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ರಾಜಧಾನಿಯ ಕಟ್ಟಡ ವಿನ್ಯಾಸ ರೂಪಿಸಲು ಅವಕಾಶ ನೀಡಿದ ಆಂಧ್ರ ಪ್ರದೇಶ ಸರ್ಕಾರಕ್ಕೆ ತಮ್ಮ ಧನ್ಯವಾದ ಸೂಚಿಸಿದ್ದು, ಬ್ರಿಟನ್ ವಿನ್ಯಾಸಕಾರರು ನೀಡಿದ್ದ ವಿನ್ಯಾಸಕ್ಕೆ ಸರ್ಕಾರ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ.
Advertisement
ರಾಜಮೌಳಿ ಅವರು ಸಿದ್ಧಪಡಿಸಿರುವ ವಿನ್ಯಾಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ರಾಜಮೌಳಿ ಟ್ವೀಟ್ ಮಾಡಿರುವ ವಿಡಿಯೋದಲ್ಲಿನ ಕಟ್ಟಡ ವಿನ್ಯಾಸ ಪ್ರಾಚೀನ ಭಾರತದ ಖಗೋಳಶಾಸ್ತ್ರ ಮತ್ತು ವಾಸ್ತು ಶಾಸ್ತ್ರ ತಂತ್ರಜ್ಞಾನವನ್ನು ಆಧಾರಿಸಿ ಆಧುನಿಕತೆಯೊಂದಿಗೆ ಸಿದ್ಧಪಡಿಸಲಾಗಿದೆ. ಪ್ರತಿವರ್ಷ ನಿರ್ದಿಷ್ಟ ಸಮಯದಲ್ಲಿ ಸೂರ್ಯನ ಕಿರಣಗಳು ದೇವಾಲಯದ ವಿಗ್ರಹವನ್ನು ಪ್ರವೇಶಿಸುವಂತೆ ಈ ಕಟ್ಟಡ ವಿನ್ಯಾಸವನ್ನು ಸಿದ್ಧಪಡಿಸಲಾಗಿದೆ. ರಾಜ್ಯ ಸಭೆಯ ಕಟ್ಟಡದ ಮಧ್ಯಭಾಗದಲ್ಲಿ ಸ್ಥಾಪನೆ ಮಾಡಲಾಗುವ ತೆಲುಗು ಮಾತೆಯ ವಿಗ್ರಹದ ಮೇಲೆ ಸೂರ್ಯನ ಬೆಳಕು ಬಿಳುವಂತೆ ವಿನ್ಯಾಸ ಮಾಡಲಾಗಿದೆ.
Advertisement
ರಾಜಮೌಳಿ ಅವರ ವಿನ್ಯಾಸವನ್ನು ಸರ್ಕಾರ ತಿರಸ್ಕರಿಸಿಲ್ಲ. ರಾಜಧಾನಿಯಲ್ಲಿ ಮಾಧ್ಯಮ ನಗರವೊಂದು ನಿರ್ಮಾಣವಾಗಲಿದೆ. ಈ ಮಾಧ್ಯಮ ನಗರ ನಿರ್ಮಾಣಕ್ಕೆ ರಾಜಮೌಳಿ ಅವರ ವಿನ್ಯಾಸವನ್ನು ಬಳಸಲಾಗುವುದು ಎಂದು ಚಂದ್ರಬಾಬು ನಾಯ್ಡು ಭರವಸೆ ನೀಡಿದ್ದಾರೆ.
ಸರ್ಕಾರ ತನ್ನ APCRDA ವೆಬ್‍ಸೈಟ್ ನಲ್ಲಿ ಎರಡು ವಿನ್ಯಾಸದ ಮಾದರಿ ವಿಡಿಯೋವನ್ನು ಅಪ್ಲೋಡ್ ಮಾಡಿ ಅಭಿಪ್ರಾಯವನ್ನು ಸಂಗ್ರಹಿಸಲು ಆರಂಭಿಸಿದೆ. ಅಂತಿಮವಾಗಿ ಅತಿ ಹೆಚ್ಚು ಜನರ ಮೆಚ್ಚುಗೆಗೆ ಪಾತ್ರವಾದ ವಿನ್ಯಾಸವನ್ನು ಆಯ್ಕೆ ಮಾಡಲಾಗುತ್ತದೆ.
ರಾಜಮೌಳಿ ಕಲ್ಪನೆಯ ವಿಡಿಯೋ ನೋಡಿ….
https://www.youtube.com/watch?time_continue=6&v=4F3fS075fsk
ಸರ್ಕಾರ ವೆಬ್‍ಸೈಟ್ ನಲ್ಲಿನ ಎರಡು ವಿನ್ಯಾಸದ ಮಾದರಿ :
https://www.youtube.com/watch?v=Ozmk8lCRsk0
https://www.youtube.com/watch?v=CkW9G1LBSlg