ಬೆಂಗಳೂರು: ಬಾಹುಬಲಿ-2 ಚಿತ್ರದ ಬಿಡುಗಡೆಗೆ ಶುಕ್ರವಾರದಂದು ದಿನಾಂಕ ನಿಗದಿಯಾಗಿತ್ತು. ಆದ್ರೆ ಬೆಂಗಳೂರಿನಲ್ಲಿ ಇಂದಿನಿಂದಲೇ ಬಾಹುಬಲಿ-2 ಪ್ರದರ್ಶನ ಕಾಣಲಿದೆ.
ಇಂದು ರಾತ್ರಿ 9.45ರಿಂದಲೇ ಬಾಹುಬಲಿ-2 ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನಲ್ಲಿ ಇಂದು ಕಾಣುವ ಪ್ರದರ್ಶನದ ಟಿಕೆಟ್ ಬೆಲೆ ಕೇಳಿದ್ರೆ ನೀವು ಆಶ್ಚರ್ಯ ಪಡ್ತೀರ. ಇಂದಿನ ಬಾಹುಬಲಿ ಸಿನಿಮಾಗೆ 1200 ರಿಂದ 1600 ತನಕ ಟಿಕೆಟ್ ದರ ನಿಗದಿ ಮಾಡಲಾಗಿದೆ.
Advertisement
ಇದನ್ನೂ ಓದಿ: ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಯಾಕೆ ಅನ್ನೋದು ರಿವೀಲ್ ಆಯ್ತು!
Advertisement
ಇಂದಿನ 10 ಗಂಟೆಯ ವಿಶೇಷ ಪ್ರದರ್ಶನಕ್ಕೆ ಬೆಂಗಳೂರಿನ ಪಿವಿಆರ್ ಫೋರಂ ಗೋಲ್ಡ್ ಹಾಗೂ ಪಿವಿಆರ್ ವಿಆರ್ ಗೋಲ್ಡ್ ಮಲ್ಟಿಪ್ಲೆಕ್ಸ್ ಗಳಲ್ಲಿ ಟಿಕೆಟ್‍ಗಳನ್ನು 1400 ರೂ. ಗೆ ಮಾರಾಟ ಮಾಡಲಾಗ್ತಿದೆ. ಈ ಎರಡೂ ಥಿಯೇಟರ್‍ಗಳಲ್ಲಿ ಪ್ಲಾಟಿನಂ ಸೂಪರ್‍ಗೆ 1400 ರೂ. ಹಾಗೂ ಪ್ಲಾಟಿನಂ ಕ್ಯಾಟಗರಿಗೆ 1200 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ.
Advertisement
ಕರ್ನಾಟಕದಲ್ಲಿ ಸಿನಿಮಾ ಟಿಕೆಟ್ ದರ ಗರಿಷ್ಠ 200 ರೂ. ಮೀರುವಂತಿಲ್ಲ ಸರ್ಕಾರ ಬಜೆಟ್‍ನಲ್ಲಿ ಹೇಳಿದ್ದು, ಸಿಎಂ ಸಹಿ ಹಾಕಿರುವ ಆದೇಶ ಪತ್ರ ಬಂದರೆ ಇಂದಿನಿಂದಲೇ ಈ ದರ ಜಾರಿಯಾಗಲಿದೆ ಎಂದು ಬುಧವಾರ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾರಾ ಗೋವಿಂದು ಹೇಳಿದ್ದರು. ಆದರೆ ಈ ಆದೇಶ ಪತ್ರ ಇನ್ನು ವಾಣಿಜ್ಯ ಮಂಡಳಿಗೆ ಬಾರದೇ ಇದ್ದ ಕಾರಣ ಚಿತ್ರದ ಟೆಕೆಟ್ ಬೆಲೆ ಭಾರೀ ಏರಿಕೆಯಾಗಿದೆ.
Advertisement
ಇದನ್ನೂ ಓದಿ: ಬಾಹುಬಲಿ -2 ಹೇಗಿದೆ? ಯುಎಇ ಸೆನ್ಸಾರ್ ಸದಸ್ಯ ಹೇಳಿದ್ದು ಹೀಗೆ
ಕರ್ನಾಟಕದಲ್ಲಿ ಒಂದೊಂದು ಥಿಯೇಟರ್‍ಗಳಲ್ಲಿ ಬಾಹುಬಲಿ ಚಿತ್ರ ಬೇರೆ ಬೇರೆ ರೀತಿಯ ದರ ವಿಧಿಸಿದ್ದಕ್ಕೆ ಸಿನಿ ಅಭಿಮಾನಿಗಳು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಮತ್ತು ಹೈದ್ರಾಬಾದ್‍ನಲ್ಲಿ ಮಾತ್ರ ಬಾಹುಬಲಿ-2 ಇಂದಿನ ಪ್ರದರ್ಶನ ಕಾಣುತ್ತಿದೆ. ಬೇರೆ ಯಾವುದೇ ರಾಜ್ಯದಲ್ಲಿಯೂ ಬಾಹುಬಲಿ-2 ಪ್ರದರ್ಶನ ಇವತ್ತು ಆಗುತ್ತಿಲ್ಲ. ಬೆಂಗಳೂರು ಹಾಗೂ ಮೈಸೂರಿನ ಸೂಮಾರು 20 ಮಾಲ್ ಮತ್ತು ಮಲ್ಟಿಪ್ಲೆಕ್ಸ್‍ಗಳಲ್ಲಿ ಬಾಹುಬಲಿ-2 ಆರ್ಭಟಿಸಲಿದೆ. ಇನ್ನು ಬೆಂಗಳೂರಿನ ಊರ್ವಶಿ ಥಿಯೇಟರ್‍ನಲ್ಲಿ ನಾಳೆ ಬೆಳಗ್ಗೆ 4 ಗಂಟೆಗೆ ಪ್ರದರ್ಶನ ಶುರುವಾಗಲಿದೆ. ಇನ್ನುಳಿದಂತೆ 7 ಗಂಟೆಗೆ ರಾಜ್ಯದೆಲ್ಲೆಡೆ ಚಿತ್ರ ಪ್ರದರ್ಶನವಾಗಲಿದೆ.
@publictvnews there's no price limits for this Bahubali movie #WeWantKannadaMovies pic.twitter.com/cH6w28cGYj
— Vachan Shetty (@am_vachanshetty) April 27, 2017
ಇದನ್ನೂ ಓದಿ: ಆನ್‍ಲೈನ್ ಬಾಹುಬಲಿ ಟಿಕೆಟ್ ಬುಕ್ಕಿಂಗ್ ಸ್ಕ್ಯಾಮ್: ವೆಬ್‍ಸೈಟ್‍ನಿಂದ ಅಭಿಮಾನಿಗಳ ಹಣ ಲೂಟಿ