ಹೈದರಾಬಾದ್: ಭಾರತೀಯ ಚಿತ್ರರಂಗವನ್ನು ಹೆಮ್ಮೆ ಪಡುವಂತೆ ಮಾಡಿದ್ದ ಬಹುಬಲಿ ಸಿನಿಮಾ ಭಾಗ ಎರಡು ಬಿಡುಗಡೆಯಾಗಿ ಎರಡು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಟ ಪ್ರಭಾಸ್ ಅಭಿಮಾನಿಗಳಿಗೆ ಫೇಸ್‍ಬುಕ್ ನಲ್ಲಿ ಧನ್ಯವಾದ ತಿಳಿಸಿದ್ದಾರೆ.
ಕಳೆದ ವರ್ಷ ಏಪ್ರಿಲ್ 28 ರಂದು ಬಿಡುಗಡೆಯಾಗಿದ್ದ ಬಾಹುಬಲಿ-2 ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ್ಯಾಂತ ಯಶ್ವಸಿ ಪ್ರದರ್ಶನಗೊಂಡು ಬಾಕ್ಸ್ ಆಫೀಸ್ ಗಳಿಕೆಯಲ್ಲಿ ದಾಖಲೆ ನಿರ್ಮಾಣ ಮಾಡಿತ್ತು.
Advertisement
Advertisement
ಈ ಕುರಿತು ನಟ ಪ್ರಭಾಸ್ ಸಂತಸ ವ್ಯಕ್ತಪಡಿಸಿದ್ದು, “ಬಾಹುಬಲಿ ಚಿತ್ರ ಜರ್ನಿ ತನ್ನ ಜೀವನದಲ್ಲಿ ಅತ್ಯಂತ ಭಾವನಾತ್ಮಕವಾದದ್ದು. ಈ ಚಿತ್ರ ನೀಡಿದ ನಿರ್ದೇಶಕ ರಾಜಮೌಳಿ, ಚಿತ್ರ ತಂಡ ಹಾಗೂ ಯಶ್ವಸಿ ಬೆಂಬಲ ನೀಡಿದ ಅಭಿಮಾನಿಗಳಿಗೆ ಧನ್ಯವಾದ” ಎಂದು ತಿಳಿಸಿದ್ದಾರೆ.
Advertisement
ಸದ್ಯಕ್ಕೆ ನಟ ಪ್ರಭಾಸ್ ನಿರ್ದೇಶಕ ಸುಜೇತ್ ಅವರ `ಸಹೋ’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಹೋ ಚಿತ್ರ ತೆಲುಗು, ತಮಿಳು ಸೇರಿದಂತೆ ಹಿಂದಿಯಲ್ಲೂ ಏಕಕಾಲದಲ್ಲಿ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ಬಾಲಿವುಡ್ ನ ಶ್ರದ್ಧಾ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ.
Advertisement
So happy to meet all the fans and film enthusiasts who made it to the #Baahubali2 screaming screening in Tokyo, Japan last night.
The love for movies surpasses boundaries… Happy day.. 🙂 pic.twitter.com/iau7UAPNZG
— rajamouli ss (@ssrajamouli) April 27, 2018