ಹೈದರಾಬಾದ್: ಮಹಾಶಿವರಾತ್ರಿ ಪ್ರಯುಕ್ತ ಬಾಹುಬಲಿ ಕನ್ ಕ್ಲೂಷನ್ ಟೀಸರ್ ಬಿಡುಗಡೆಯಾಗಿದೆ. ‘ಬಲಿ ಬಲಿ ಬಲಿ ರಾ ಬಲಿ ಸಾಹೋರೆ ಬಾಹುಬಲಿ’ ಅನ್ನೋ ಹಾಡಿನ ತುಣುಕು ಹೊಂದಿರುವ ಟೀಸರ್ ವಿಡಿಯೋವನ್ನು ರಾಜಮೌಳಿ ಟ್ವೀಟ್ ಮಾಡಿದ್ದಾರೆ.
ಈ ಟೀಸರ್ನಲ್ಲಿ ಪ್ರಭಾಸ್ ಆನೆಯ ಮೇಲೆ ನಿಂತುಕೊಂಡಿರುವ ದೃಶ್ಯವಿದೆ. ನಿರ್ದೇಶಕ ಎಸ್ ರಾಜಮೌಳಿ ಅವರು ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಯಲ್ಲಿರುವ ಈ ಪೋಸ್ಟರ್ ಟ್ವೀಟ್ ಮಾಡಿದ್ದಾರೆ.
Advertisement
ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಬರೆದ ಕಥೆಯಾಧರಿತ ಬಾಹುಬಲಿ ಭಾಗ 2 ಚಿತ್ರದಲ್ಲಿ ಪ್ರಭಾಸ್, ರಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ಸತ್ಯರಾಜ್, ತಮನ್ನಾ, ರಮ್ಯಕೃಷ್ಣ ಅಭಿನಯಿಸಿದ್ದು ಏಪ್ರಿಲ್ 28ರಂದು ಬಿಡುಗಡೆಯಾಗಲಿದೆ.
Advertisement
ಬಾಹುಬಲಿ ದಿ ಬಿಗ್ನಿಂಗ್ ಚಿತ್ರ 2015ರ ಜುಲೈ 10ರಂದು ಬಿಡುಗಡೆಯಾಗಿತ್ತು. ಅಂದಾಜು 120 ಕೋಟಿ ಬಜೆಟ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ 650 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು.
Advertisement
ಜನವರಿ 26ರಂದು ರಾಜಮೌಳಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಒಟ್ಟಿಗೆ ನಿಂತುಕೊಂಡು ಬಾಣ ಬಿಡುತ್ತಿರುವ ಪೋಸ್ಟರ್ ಬಿಡುಗಡೆ ಮಾಡಿದ್ದರು. ಇದಕ್ಕೂ ಮೊದಲು ರಾಣಾ ದಗ್ಗುಬಾಟಿ ಮತ್ತು ಪ್ರಭಾಸ್ ಅವರ ಪೋಸ್ಟರ್ ಬಿಡುಗಡೆ ಮಾಡಿದ್ದರು. ಹೀಗಾಗಿ ಇಲ್ಲಿ ಬಾಹುಬಲಿಯ ಹೊಸ ವಿಡಿಯೋ ಟೀಸರ್ ಜೊತೆ ಹಳೆಯ ಪೋಸ್ಟರ್ಗಳ ಫೋಟೋಗಳನ್ನು ನೀಡಲಾಗಿದೆ.
Advertisement
Saahore Baahubali….. Happy Maha Shivaratri. #Baahubali2 #WKKB pic.twitter.com/fjiizlrDNB
— rajamouli ss (@ssrajamouli) February 24, 2017
Motion Poster….. Bhali Bhali Bhali Raa Bhali… Saahore Baahubali… https://t.co/mQP2aMXo78 #Baahubali2 #WKKB
— rajamouli ss (@ssrajamouli) February 24, 2017