ಹೈದರಾಬಾದ್: ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಈ ಶುಕ್ರವಾರ ವಿಶ್ವದೆಲ್ಲೆಡೆ ಬಿಡುಗಡೆಯಾಗಲಿದೆ. ಸಿನಿಮಾ ಮಾರುಕಟ್ಟೆಯಲ್ಲಿ ಬಾಹುಬಲಿ ಬಹುಕೋಟಿ ರೂ. ಗಳಿಸುವ ಹಿನ್ನೆಲೆಯಲ್ಲಿ ನಕಲಿ ಸಿನಿಮಾ ಟಿಕೆಟ್ ವೆಬ್‍ಸೈಟ್ ಹುಟ್ಟಿಕೊಂಡಿದ್ದು ವಂಚನೆ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬ್ಲ್ಯಾಕ್ ನಲ್ಲಿ ಟಿಕೆಟ್ ಪಡೆಯುವುದನ್ನು ತಪ್ಪಿಸಲು ಮತ್ತು ಕ್ಯೂ ನಿಲ್ಲದೇ ಸುಲಭವಾಗಿ ಪಡೆಯಲು ಕೆಲ ಪೋರ್ಟಲ್ ಗಳು ಟಿಕೆಟ್ ನೀಡುತ್ತಿದೆ. ಆದರೆ ಒಂದು ಪೋರ್ಟಲ್ ಬಾಹುಬಲಿ ಚಿತ್ರದ ಅಭಿಮಾನಿಗಳಿಗೆ ವಂಚನೆ ಎಸಗಿದೆ.
Advertisement
newtickets.in ಹೆಸರಿನ ವೆಬ್‍ಪೋರ್ಟಲ್ ನಲ್ಲಿ ಜನ ಟಿಕೆಟ್ ಬುಕ್ ಮಾಡುತ್ತಿದ್ದರು. ಸೀಟ್ ಅಧಿಕೃತವಾದ ಮೇಲೆ ಮೊಬೈಲ್‍ಗೆ ಮೆಸೇಜ್ ಬರುತಿತ್ತು. ವಿಶೇಷ ಏನೆಂದರೆ ಬೇರೆ ವೆಬ್‍ಸೈಟ್‍ಗಳಲ್ಲಿ ಥಿಯೇಟರ್ ಗಳು ಭರ್ತಿಯಾಗಿದೆ ಎಂದು ತೋರಿಸುತ್ತಿದ್ದರೆ ಈ ವೆಬ್‍ಸೈಟ್‍ನಲ್ಲಿ ಟಿಕೆಟ್ ಬುಕ್ ಮಾಡಬಹುದಾಗಿತ್ತು.
Advertisement
ಈ ವಿಚಾರವನ್ನು ತಿಳಿದ ಜನ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದಾಗ ವಂಚನೆ ಬೆಳಕಿಗೆ ಬಂದಿದೆ. ಯಾರೆಲ್ಲ ಟಿಕೆಟ್ ಬುಕ್ ಮಾಡಿದ್ದಾರೋ ಅವರು ಈಗ ಈ ಹಣವನ್ನು ಪಡೆದುಕೊಳ್ಳುವುದು ಕಷ್ಟವಾಗಿದೆ.
Advertisement
ಈಗ ವೆಬ್‍ಸೈಟ್ ತನ್ನ ಮುಖಪುಟದಲ್ಲಿ, ಪೋರ್ಟಲ್‍ನಲ್ಲಿ ತಾಂತ್ರಿಕ ಸಮಸ್ಯೆಯಿತ್ತು. ನಿಮ್ಮ ಹಣವನ್ನು ನಾವು ಮರಳಿ ಪಾವತಿಸಿದ್ದೇವೆ. ಚೆಕ್ ಮಾಡಿ ಎಂದು ಹೇಳಿದೆ.
Advertisement
ಇದನ್ನೂ ಓದಿ: ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ದಾಖಲೆ ಬರೆಯಲಿದೆ ಬಾಹುಬಲಿ ಎಷ್ಟು ಸ್ಕ್ರೀನ್ ನಲ್ಲಿ ಬಿಡುಗಡೆಯಾಗಲಿದೆ ಗೊತ್ತಾ?
ಇದನ್ನೂ ಓದಿ: ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಯಾಕೆ ಅನ್ನೋದು ರಿವೀಲ್ ಆಯ್ತು!
ಇದನ್ನೂ ಓದಿ: ಬಾಹುಬಲಿ -2 ಹೇಗಿದೆ? ಯುಎಇ ಸೆನ್ಸಾರ್ ಸದಸ್ಯ ಹೇಳಿದ್ದು ಹೀಗೆ