ಬೆಂಗಳೂರು: ಬಾಹುಬಲಿ 2 ಕನ್ನಡಕ್ಕೆ ಡಬ್ ಆಗಬೇಕೆಂದು ಆಗ್ರಹಿಸಿ ಟ್ವಿಟ್ಟರ್‍ನಲ್ಲಿ ಕನ್ನಡಿಗರು ಆಗ್ರಹಿಸಿದ್ದಾರೆ.
ಕನ್ನಡ ಗ್ರಾಹಕ ವೇದಿಕೆಯವರು ಆಯೋಜಿಸಿದ ಈ ಅಭಿಯಾನಕ್ಕೆ ಜನ ಬೆಂಬಲ ವ್ಯಕ್ತಪಡಿಸುತ್ತಿದ್ದು, #Bahubali2InKannada ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡುತ್ತಿದ್ದಾರೆ. ಸಂಜೆ 6.30ಕ್ಕೆ ಆರಂಭವಾದ ಈ ಆಂದೋಲನ ಬೆಂಗಳೂರಿನಲ್ಲಿ ಟ್ರೆಂಡಿಂಗ್ ಟಾಪಿಕ್ ಆಗಿದೆ.
Advertisement
ರಾಜಮೌಳಿ ನಿರ್ದೇಶನದ ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಯಲ್ಲಿ ಮೂಡಿ ಬರಲಿರುವ ಬಾಹುಬಲಿ2 ಏಪ್ರಿಲ್ 28ರಂದು ಬಿಡುಗಡೆಯಾಗಲಿದೆ.
Advertisement
ಜನರ ಕೆಲ ಟ್ವೀಟ್ ಗಳನ್ನು ಇಲ್ಲಿ ನೀಡಲಾಗಿದೆ
– ಕನ್ನಡಿಗರು ಕರ್ನಾಟಕದಲ್ಲಿ ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ಬಾಹುಬಲಿ ಚಿತ್ರ ನೋಡುವುದು ಹೇಗೆ? ಕನ್ನಡದಲ್ಲೆ ಬಂದರೆ ನಮಗೆಲ್ಲರಿಗೂ ಸುಲಭವಾಗಿ ಅರ್ಥವಾಗುತ್ತದೆ.
Advertisement
– ಡಬ್ಬಿಂಗ್ ನಿಂದಾಗಿ ಇಂಡಸ್ಟ್ರಿ ಹಾಳಾಗುತ್ತದೆ ಎನ್ನುವುದಾದರೆ ತಮಿಳು, ತೆಲುಗು ಇಂಡಸ್ಟ್ರಿ ಇಷ್ಟರೊಳಗೆ ನೆಲಕಚ್ಚಬೇಕಿತ್ತು. ಹೀಗಾಗಿ ಕನ್ನಡಕ್ಕೆ ಡಬ್ಬಿಂಗ್ ಬೇಕು.
Advertisement
– ಕನ್ನಡ ನಾಡಿನಲ್ಲಿ ಮನರಂಜನೆ ಕನ್ನಡದಲ್ಲೇ ಸಿಗುವ ಹೆಜ್ಜೆಯಾಗಿ ಬಾಹುಬಲಿ ಕನ್ನಡಕ್ಕೆ ಡಬ್ ಆಗಿ ಬರಲಿ.
– ಇಡೀ ಕರ್ನಾಟಕ ಏನ್ ನೋಡಬೇಕು, ಏನ್ ನೋಡಬಾರದು ಎಂದು ನಿರ್ಧಾರ ಮಾಡಲು ಇವರು ಯಾರು?
– ಬಾಹುಬಲಿ ನಿರ್ದೇಶಕ ರಾಜಮೌಳಿ ಕನ್ನಡಿಗರು, ಸುದೀಪ್ ಅಸ್ಲಂ ಖಾನ್ ಪಾತ್ರ ಮಾಡಿದ್ದಾರೆ. ಅನುಷ್ಕಾ ಶೆಟ್ಟಿ ಮಂಗಳೂರಿನವರು. ಸಿನಿಮಾದ ಆಡಿಯೋ ಹಕ್ಕನ್ನು ಲಹರಿ ಸಂಸ್ಥೆ ಖರೀದಿಸಿದೆ. ಕನ್ನಡಿಗರೇ ಚಿತ್ರದಲ್ಲಿ ಕೆಲಸ ಮಾಡಿರುವಾಗ ಕನ್ನಡದಲ್ಲಿ ಬಾಹುಬಲಿ ಬಂದರೆ ಸಮಸ್ಯೆ ಏನು?
#Bahubali2InKannada demand gets bigger day by day. This Thursday let us all join hands and demand for #Kannada dubbed version of this movie. pic.twitter.com/DIip4mj9oD
— KGK (@KannadaGrahaka) February 14, 2017
Many Kannadigas have worked for @BaahubaliMovie. @KannadaGrahaka would love to watch them on screen speaking #Kannada in #Bahubali2InKannada pic.twitter.com/XqbobbDZBx
— Jayanth Sidmallappa (@Bond_Jay_Bond) February 16, 2017
ಡಬ್ಬಿಂಗ್ ಇಂದ ಇಂಡಸ್ಟ್ರಿ ಹಾಳಾಗುತ್ತೆ ಅನ್ನವುದಾದರೆ ತಮಿಳು, ತೆಲುಗು ಇಂಡಸ್ಟ್ರಿ ಇಷ್ಟರೊಳಗೆ ನೆಲಕ್ಕಚ್ಚಬೇಕಿತ್ತು!ಅಲ್ಲವೇ? ಡಬ್ಬಿಂಗ್ ಬೇಕು #Bahubali2InKannada
— Naresh Bhat (@Nareshbhat07) February 16, 2017
#DubbingInKannada is one of the many registers as part of language planning. Let it become mainstream. #Bahubali2InKannada https://t.co/myCltXHfHt
— Babu Ajay (@Babuajay316) February 16, 2017
ಹಣ ಕೊಟ್ಟ ಮೇಲೆ ನಾನೇನು ನೋಡಬೇಕು ನೋಡಬಾರದು ಕೊನೆಗೆ ನನ್ನಂತಹ ಎಲ್ಲಾ ಬಳಕೆದಾರರ ಹಕ್ಕು.ಮಾತುಹಚ್ಚಿಕೆ ನನ್ನ ಹಕ್ಕು,ಎಲ್ಲಾದು ಕನ್ನಡದಲ್ಲಿ ಬರಲಿ #Bahubali2InKannada pic.twitter.com/9CUvkM8p10
— Vivek Shankar (@vivek_shankar15) February 16, 2017