ಏಕ್, ದೋ, ತೀನ್..! ವಿವಾದದ ಬಗ್ಗೆ ಕೊನೆಗೂ ಮೌನ ಮುರಿದ ಸರೋಜ್ ಖಾನ್

Public TV
1 Min Read
EK Do Tin

ಮುಂಬೈ: ಹಿರಿಯ ನೃತ್ಯ ನಿರ್ದೇಶಕಿ ಸರೋಜ್ ಖಾನ್‍ರವರು ಏಕ್ ದೋ ತೀನ್ ಗೀತೆಯ ವಿವಾದದ ಬಗ್ಗೆ ಮಾತನಾಡಿದ್ದಾರೆ. ನೃತ್ಯ ನಿರ್ದೇಶಕರಾದ ಅಹ್ಮದ್ ಖಾನ್ ಮತ್ತು ಗಣೇಶ್ ಆಚಾರ್ಯರ ಪರಿಶ್ರಮದ ಬಗ್ಗೆ ಹೆಮ್ಮೆ ಹಾಗೂ ಸಂತಸ ವ್ಯಕ್ತಪಡಿಸಿದ್ದಾರೆ ಮತ್ತು ಅವರಿಗೆ ನನ್ನ ಆಶೀರ್ವಾದ ಎಂದಿಗೂ ಇರುತ್ತದೆ ಎಂದು ಹೇಳಿದ್ದಾರೆ.

ಏಕ್, ದೋ, ತೀನ್,  ಚಾರ್ ಹಾಡಿನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ನನ್ನ ಮತ್ತು ಅಹ್ಮದ್ ಖಾನ್ ನಡುವೆ ಗುರು ಶಿಷ್ಯರ ಸಂಬಂಧವಿದೆ. ಇಲ್ಲಿ ಒಬ್ಬರಿಗಿಂತ ಒಬ್ಬರು ಭಿನ್ನವಾಗಿದ್ದು, ಯಾವುದೇ ರೀತಿಯ ಸ್ಪರ್ಧೆ ಇರುವುದಿಲ್ಲ. ಹಳೆ ಗೀತೆಗಿಂತ ಹೊಸ ಹಾಡು ಉತ್ತಮವೆಂಬ ಅಂಶ ತಪ್ಪು ಏಕೆಂದರೆ ಈ ಗೀತೆಯನ್ನು ಏಕ್ ದೋ ತೀನ್ ತಂಡಕ್ಕೆ ಸಮರ್ಪಿಸಿದ್ದಾರೆ ಮತ್ತು ಬಾಘೀ-2 ಚಿತ್ರ ತಂಡವು ಬಹಳ ಶ್ರಮಪಟ್ಟಿದೆ ಅಂತಾ ಸರೋಜ್ ಖಾನ್ ಅಂದಿದ್ದಾರೆ.

EkDoTeen825

ಈ ಹಿಂದೆ ಸರೋಜ್ ಖಾನ್ ಇದೇ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದರು. ಅಂದು ಇದೇ ಗೀತೆಗೆ ಅಹ್ಮದ್ ಖಾನ್‍ರವರು ಸಹಾಯಕ ನೃತ್ಯ ನಿರ್ದೇಶಕರಾಗಿ ಮತ್ತು ಗಣೇಶ್ ಆಚಾರ್ಯರವರು ಗೀತೆಯ ಹಿನ್ನೆಲೆ ನರ್ತಕರಾಗಿ ಕಾಣಿಸಿಕೊಂಡಿದ್ದರು. ಬಾಘೀ-2 ಚಿತ್ರದಲ್ಲಿ ಸಾಜಿದ್ ನಾಡಿಯದ್ವಾಲ ಮತ್ತು ನಿರ್ದೇಶಕ ಅಹ್ಮದ್ ಖಾನ್ ಈ ಗೀತೆಯನ್ನು ಅಳವಡಿಸಿಕೊಂಡಿದ್ದಾರೆ.

ಏನಿದು ವಿವಾದ: ಮಾಧುರಿ ದೀಕ್ಷಿತ್ ನರ್ತಿಸಿದ ಹಾಡಿನ ನ್ಯೂ ವರ್ಷನ್ ಗೆ ಮರ್ಡರ್-2 ಖ್ಯಾತಿಯ ಸುಂದರಿ ಜಾಕ್ವೇಲಿನ್ ತುಂಬಾ ಸೆಕ್ಸಿಯಾಗಿ ಕಾಣಿಸಿಕೊಂಡಿದಕ್ಕೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನವನ್ನ ಹೊರಹಾಕಿದ್ರು. ಮಾಧುರಿ ದೀಕ್ಷಿತ್ ಸಹ ತಮ್ಮ ಹಾಡಿಗೆ ಜಾಕ್ವೇಲಿನ್ ಮಾಡಿರುವ ಡ್ಯಾನ್ಸ್ ನೋಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಜಾಕ್ವೇಲಿನ ‘ಏಕ್ ದೋ ತೀನ್ ಚಾರ್’ ಹಾಡಿನ ಮೂಲಕ ನಾನು ನಿಮಗೆ ಗೌರವ ಸಲ್ಲಿಸುತ್ತಿದ್ದೇನೆ ಎಂಬ ಸಂದೇಶವನ್ನು ಸಹ ರವಾನೆ ಮಾಡಿದ್ದು, ಮಾಧುರಿ ಮಾತ್ರ ಯಾವುದಕ್ಕೂ ಉತ್ತರ ನೀಡಿಲ್ಲ ಅಂತಾ ಹೇಳಲಾಗುತ್ತಿದೆ.

Madhuri Jack F

Share This Article
Leave a Comment

Leave a Reply

Your email address will not be published. Required fields are marked *