ತುಮಕೂರು: ಪ್ರಧಾನಿ ಮೋದಿ ಕೂಡ ಮುಂದಿನ ಪೀಳಿಗೆ ಬಗ್ಗೆ ಆಲೋಚನೆ ಮಾಡುತ್ತಾರೆ. ಹಾಗಾಗಿ ಯಾವುದೇ ಉಚಿತ ಕೊಡುಗೆ ಕೊಟ್ಟಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (Vijayendra) ಹೇಳಿದ್ದಾರೆ.
ಶಕ್ತಿ ವಂದನಾ ಅಭಿಯಾನದಲ್ಲಿ ಮಾತನಾಡಿದ ಅವರು, ನಿನ್ನೆಯ ಬಜೆಟ್ ಮಹಿಳೆ, ಬಡವರಿಗೋಸ್ಕರ ಇದೆ. ರೈತ, ಬಡವರು, ಮಹಿಳೆಯರು, ಯುವಕರ ಸಹಕಾರದಿಂದ ರಾಷ್ಟ್ರ ಅಭಿವೃದ್ಧಿ ಸಾಧ್ಯ ಅನ್ನೋದು ಪ್ರಧಾನಿ ಮೋದಿ ಅವರ ಅಭಿಮತ. ಬಿಜೆಪಿ ಅಂದರೆ ಅಲ್ಪಸಂಖ್ಯಾತ ವಿರೋಧಿ ಎಂದು ಕಾಂಗ್ರೆಸ್ ಬಿಂಬಿಸ್ತಾ ಇದೆ. ಅದರೂ ತ್ರಿವಳಿ ತಲಾಖ್ ತೊಡೆದುಹಾಕಿ ಆ ಸಮುದಾಯದ ಮಹಿಳೆಗೆ ಗೌರವ ಕೊಟ್ಟಿದ್ದಾರೆ. ಒಬ್ಬ ರಾಜಕಾರಣಿ ಮುಂದಿನ ಚುನಾವಣೆ ಬಗ್ಗೆ ಚಿಂತನೆ ಮಾಡಿದರೆ, ರಾಜಕೀಯ ತಜ್ಞ ಮುಂದಿನ ಪೀಳಿಗೆ ಬಗ್ಗೆ ಚಿಂತನೆ ಮಾಡುತ್ತಾರೆ. ಪ್ರಧಾನಿ ಮೋದಿ ಕೂಡ ಮುಂದಿನ ಪೀಳಿಗೆ ಬಗ್ಗೆ ಆಲೋಚನೆ ಮಾಡುತ್ತಾರೆ. ಹಾಗಾಗಿ ಯಾವುದೇ ಉಚಿತ ಕೊಡುಗೆ ಕೊಟ್ಟಿಲ್ಲ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ರಾಹುಲ್ ಭಾರತ್ ಜೋಡೋ ಅಂತಾರೆ, ಸುರೇಶ್ ತೋಡೋ ಅಂತಾರೆ – ಕಾಂಗ್ರೆಸ್‍ಗೆ ಬುದ್ಧಿ ಭ್ರಮಣೆ ಎಂದ ರವಿಕುಮಾರ್
Advertisement
Advertisement
ಕಳೆದ ವಾರದಿಂದ ರಾಜ್ಯ ಪ್ರವಾಸದಲ್ಲಿ ಇದ್ದೇನೆ. ಇವತ್ತು ತುಮಕೂರು ಪ್ರವಾಸ. ಇವತ್ತು ಶುಭ ಘಳಿಗೆಯಲ್ಲಿ ಇದ್ದೇವೆ. ಸ್ವಾತಂತ್ರ‍್ಯ ಬಂದ ಬಳಿಕ ಮೊದಲ ಬಾರಿಗೆ ಒಂದು ಮಹಿಳೆ 6 ಬಾರಿ ಬಜೆಟ್ ಮಂಡಿಸಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ನಾವೆಲ್ಲ ಅಭಿನಂದನೆ ಸಲ್ಲಿಸಬೇಕು. ಇಂದಿರಾ ಗಾಂಧಿ ದಿಟ್ಟ ಮಹಿಳೆ. 17 ವರ್ಷಗಳ ಕಾಲ ಸುದೀರ್ಘ ಆಡಳಿತ ನಡೆಸಿದರೂ, ಸ್ತ್ರೀ ಶೋಷಣೆ ತಡೆಯಲು ಸಾಧ್ಯ ಆಗಲಿಲ್ಲ. ಇದು ಕಟು ಸತ್ಯ. ಪ್ರಧಾನಿ ಮೋದಿ ಎಲ್ಲಾ ಸ್ತ್ರೀಯರಿಗೂ ಸಮಾನ ಅವಕಾಶ ಸಿಗಬೇಕು ಎಂದು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
Advertisement
2047 ನೇ ಇಸವಿಗೆ ಭಾರತ ವಿಕಸಿತ ಭಾರತ ಆಗಬೇಕು ಅನ್ನೋದು ಮೋದಿ ಅವರ ಕನಸು. 2047 ರ ವೇಳೆ ಸಂಪೂರ್ಣ ಭಾರತ ಅಭಿವೃದ್ಧಿ ಆಗಲು ಮಹಿಳೆಯರ ಪಾತ್ರ ಮುಖ್ಯ. ಹಾಗಾಗಿ ಇದನ್ನು ಅರಿತ ಮೋದಿ ಮಹಿಳೆಯರ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ. ರಾಷ್ಟ್ರಪತಿ ಸ್ಥಾನವನ್ನೂ ದಲಿತ ಮಹಿಳೆ ಅಲಂಕರಿಸಿದ್ದಾರೆ. ಕಾಂಗ್ರೆಸ್‌ನವರು ದಲಿತರು ಹಾಗೂ ಮಹಿಳೆ ಬಗ್ಗೆ ಮಾತಾಡುತ್ತಾರೆ. ಆದರೆ ಮೋದಿ ಅವರು ಎಲ್ಲವನ್ನೂ ಮಾಡಿ ತೋರಿಸಿದ್ದಾರೆ. ವಿಶೇಷ ಅಧಿವೇಶನ ಕರೆದು ಮಹಿಳೆಯರಿಗೆ ರಾಜಕೀಯವಾಗಿ 33% ಮೀಸಲಾತಿ ಕೊಟ್ಟಿದ್ದಾರೆ. ಇವೆಲ್ಲವೂ ಭಾರತ ಮುಂದಿನ ದಿನಮಾನದಲ್ಲಿ ಅಗ್ರರಾಷ್ಟ್ರವಾಗಿ ಹೊರಹೊಮ್ಮುವ ಸಂಕೇತವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ರದ್ದು ಹೇಳಿಕೆ; ‘ಕೈ’ ಶಾಸಕನ ವಿರುದ್ಧ ಚುನಾವಣಾ ಆಯೋಗಕ್ಕೆ ಜೆಡಿಎಸ್ ದೂರು
Advertisement
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಗ್ಗೆ ಚರ್ಚೆ ಆಗುತ್ತಿದೆ. 200 ಯೂನಿಟ್ ವಿದ್ಯುತ್ ಅನ್ನೋದು ಸುಳ್ಳು. ರಾಜ್ಯದಲ್ಲಿ ಭೀಕರ ಬರಗಾಲ ಇದೆ. ರಾಜ್ಯದ ರೈತರ ಜಮೀನಿಗೆ ವಿದ್ಯುತ್ ಸಿಗುತ್ತಿಲ್ಲ. ಕಳೆದ 6-7 ತಿಂಗಳಿಂದ ರೈತರ ಜಮೀನಿಗೆ ವಿದ್ಯುತ್ ಸಂಪರ್ಕ ಇಲ್ಲ. ರಾಜ್ಯದಲ್ಲಿ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರಣ ರಾಜ್ಯ ಸರ್ಕಾರದ ತ್ರಿಫೇಸ್ ಕೊಡದೇ ಇದ್ದದ್ದು. ಮಹಿಳೆಯರಿಗೆ ಉಚಿತ ಪ್ರಯಾಣ ಕೊಟ್ಟಿದ್ದಾರೆ. ಇನ್ನೊಂದೆಡೆ ಗ್ರಾಮೀಣ ಭಾಗದಲ್ಲಿ ಶಾಲಾ-ಕಾಲೇಜು ಮಕ್ಕಳು ಓಡಾಡಲು ಬಸ್ ಇಲ್ಲ ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ಯಾರಂಟಿಯಿಂದ ನಮಗೇನು ಭಯ ಇಲ್ಲ. ಪ್ರಧಾನಿ ಅವರ ಕೆಲಸವೇ ಸಾಕು. ಮುಂದಿನ ಚುನಾವಣೆಯಲ್ಲಿ 28 ಸ್ಥಾನವನ್ನು ಗೆಲ್ಲುತ್ತೇವೆ. ಗ್ಯಾರಂಟಿ ಕಾರ್ಡ್ ಅನ್ನೋದು ದೊಡ್ಡ ಸ್ಕ್ಯಾಮ್. ಬಿಜೆಪಿಗೆ 40 % ಸರ್ಕಾರ ಎಂದರು. ಈಗ ಕಾಂಗ್ರೆಸ್‌ನಲ್ಲೇ 40% ಕಮಿಷನ್ ನಡೀತಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಮೋದಿ ಜೊತೆ ಹೋದರೂ ನಾನು ಕೇಸರಿ ಶಾಲು ಹಾಕಲ್ಲ, ಕುಮಾರಸ್ವಾಮಿಯೂ ಹಾಕಬಾರದಿತ್ತು – ಹೆಚ್‌ಡಿಡಿ
ಇಡೀ ದೇಶಕ್ಕಿಂತ ಮದ್ಯದ ರೇಟ್ ರಾಜ್ಯದಲ್ಲಿ ಹೆಚ್ಚಾಗಿದೆ. ಎಲ್ಲಾ ಬಾಟಲ್‌ಗಳ ರೇಟ್ ಜಾಸ್ತಿ ಆಗಿದೆ. ಹೆಂಗಸರಿಗೆ ಕೊಟ್ಟ ಹಣವನ್ನು ಯಜಮಾನನ ಕಿಸೆಯಿಂದ ತಗೋತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.