ಶಿವಮೊಗ್ಗ: ಪಾಕ್ ಪರ ಘೋಷಣೆ ಕೂಗಿದವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಮೀನಾ ಮೇಷ ಎಣಿಸುತ್ತಿದೆ. ಯಾವನಾದ್ರೂ ಪಾಕಿಸ್ತಾನದಲ್ಲಿ ಹಿಂದೂಸ್ಥಾನ್ ಜಿಂದಾಬಾದ್ ಎಂದು ಹೇಳಿದ್ದರೆ, ಅವನ ಕೈ ಕಾಲು ಮುರಿದು, ಅಲ್ಲೇ ಶೂಟ್ ಮಾಡಿ ಹಾಕುತ್ತಿದ್ದರು ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶಿಕಾರಿಪುರದಲ್ಲಿ (Shikaripur) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ದೇವಾಲಯದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ರು, ಅವರನ್ನು ಒದ್ದು ಒಳಗೆ ಹಾಕೋಕೆ ಸರ್ಕಾರ ಮೀನಾ ಮೇಷ ಎಣಿಸುತ್ತಿದೆ. ಅವರನ್ನು ಒಳಗೆ ಹಾಕಿದ್ರೆ, ಅಲ್ಪಸಂಖ್ಯಾತರ ಮನಸ್ಸಿಗೆ ನೋವಾಗುತ್ತದೆ ಎಂದು ಸರ್ಕಾರ ಹುಡುಗಾಟಿಕೆ ಮಾಡುತ್ತಿದೆಯೇ? ದೇಶದ್ರೋಹದ ಕೆಲಸ ಮಾಡಿದವರ ಪರ ಮೃದು ಧೋರಣೆ ತೋರಿಸುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಶೀಘ್ರದಲ್ಲೇ ಸರ್ಕಾರದ 6ನೇ ಗ್ಯಾರಂಟಿ ಘೋಷಣೆ: ಲಕ್ಷ್ಮಿ ಹೆಬ್ಬಾಳ್ಕರ್
Advertisement
ಪಾಪ ಅವರು ಏನು ಹೇಳಿಲ್ಲ ಎಂದು ಡಿ.ಕೆ ಶಿವಕುಮಾರ್ (DK Shivakumar) ಹೇಳ್ತಾರೆ, ಅವರ ಪರವಾಗಿ ನಿಂತ ಸರ್ಕಾರದ ನಡವಳಿಕೆಯನ್ನು ಜನ ನೋಡ್ತಾ ಇದ್ದಾರೆ. ಅಲ್ಪಸಂಖ್ಯಾತರ ತುಷ್ಠೀಕರಣ ರಾಜಕಾರಣದ ಪರಿಣಾಮವಾಗಿಯೇ ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ. ಈಗಲೂ ಕಾಲ ಮಿಂಚಿಲ್ಲ, ಎಫ್‍ಎಸ್‍ಎಲ್ ವರದಿಗೆ ಕಾಯದೇ ಕ್ರಮ ತೆಗೆದುಕೊಳ್ಳಿ. ದೇಶದ್ರೋಹಿ ಘೋಷಣೆ ಕೂಗಿದವರನ್ನು ಒದ್ದು ಒಳಗೆ ಹಾಕಿ ಎಂದು ಅವರು ಆಗ್ರಹಿಸಿದ್ದಾರೆ.
Advertisement
Advertisement
ಈ ರೀತಿಯ ದೇಶದ್ರೋಹದ ಕೆಲಸವನ್ನ ಕಾಂಗ್ರೆಸ್ (Congress) ಪಕ್ಷ ಮೊದಲು ಖಂಡಿಸಬೇಕಿತ್ತು. ರಾಜ್ಯಸಭಾ ಸದಸ್ಯರು ಹಾಗೂ ಅವರ ಹಿಂಬಾಲಕರ ಮಾನಸಿಕ ಸ್ಥಿತಿ ಏನು ಎಂಬುದು ಗೊತ್ತಾಗಿದೆ. ಯಾವ ದಿಕ್ಕಿನಲ್ಲಿ ರಾಜ್ಯವನ್ನು ಇವರು ತೆಗೆದುಕೊಂಡು ಹೋಗುತ್ತಿದ್ದಾರೆ? ಯಾವ ಸಂದೇಶವನ್ನು ದೇಶಕ್ಕೆ, ರಾಜ್ಯಕ್ಕೆ ಕೊಡುತ್ತಿದ್ದಾರೆ? ಇದಕ್ಕೆ ಇವರು ದೇಶದಲ್ಲಿ ದಿವಾಳಿಯಾಗಿದ್ದಾರೆ. ಅಲ್ಪಸಂಖ್ಯಾತರಿಂದಲೇ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂಬ ಭಾವನೆ ಸಿಎಂ ಸಿದ್ದರಾಮಯ್ಯ ಅವರಲ್ಲಿದೆ. ಇನ್ನೂ ಕೂಡ ಕಾಂಗ್ರೆಸ್ ಅವರಿಗೆ ಬುದ್ಧಿ ಬಂದಿಲ್ಲ ಎಂದರೆ ಏನು ಹೇಳೋಣ? ಹಾಗಾಗಿ ದೇಶದಲ್ಲಿ ಇವರು ಮನೆಗೆ ಹೋಗಿರೋದು ಎಂದು ವ್ಯಂಗ್ಯವಾಡಿದ್ದಾರೆ.
Advertisement
ರಾಜ್ಯದಲ್ಲಿ ಬರಗಾಲದ ವಿಚಾರವಾಗಿ, ಬರಗಾಲದ ಸಮಯದಲ್ಲಿ ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ. ದೇಶದಲ್ಲಿ 8-10 ರಾಜ್ಯಗಳಲ್ಲಿ ಬರಗಾಲ ಇದೆ. ಅಲ್ಲಿನ ಮುಖ್ಯಮಂತ್ರಿಗಳು ಕೇಂದ್ರದ ನೆರವಿಗೆ ಕಾಯುತ್ತಿಲ್ಲ. ಭೀಕರ ಬರಗಾಲದಲ್ಲಿ ಸಿಎಂ ಸಿದ್ದರಾಮಯ್ಯ ಕೇಂದ್ರದ ನೆರವಿಗೆ ಕಾಯುತ್ತಿದ್ದಾರೆ. ಮೋದಿಯವರ ಕಡೆಗೆ ಬೆಟ್ಟು ಮಾಡೋದು ಇವರ ಕೆಲಸ, ಯಾವ ಕಾಟಾಚಾರಕ್ಕೆ ಅಧಿವೇಶನ ನಡೆಸುತ್ತಾರೆ. ಸಿದ್ದರಾಮಯ್ಯ ಅವರು ಜವಾಬ್ದಾರಿಯನ್ನು ಮರೆತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಸರ್ಕಾರ ಬಂದಿರೋದಕ್ಕೆ ಜನ ತಲೆ ತಲೆ ಚಚ್ಚಿಕೊಳ್ಳುತ್ತಿದ್ದಾರೆ. ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದೆ. ರಾಜ್ಯಕ್ಕೆ ಅನ್ಯಾಯವಾಗುತ್ತಿರುವುದು ಮೋದಿ ಹಾಗೂ ನಿರ್ಮಲಾ ಸೀತಾರಾಮನ್ ಅವರಿಂದ ಅಲ್ಲ. ಈ ಕೆಟ್ಟ ದರಿದ್ರ ಸರ್ಕಾರ ವೈಫಲ್ಯ ಮುಚ್ಚಿ ಹಾಕಿಕೊಳ್ಳಲು, ಕೇಂದ್ರದ ವಿರುದ್ಧ ಬೆಟ್ಟು ಮಾಡುತ್ತಿದ್ದಾರೆ. ಇವರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಇನ್ನೂ, ಕುಮಾರ್ ಬಂಗಾರಪ್ಪ ಅವರು ಕಾಂಗ್ರೆಸ್ ಸೇರ್ಪಡೆ ಚರ್ಚೆ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು. ಇದನ್ನೂ ಓದಿ: ವಿಧಾನಸೌಧದ ಮೇಲೆ ಗುಂಬಜ್ ಬರುತ್ತೆ, ಲೌಡ್‌ಸ್ಪೀಕರ್‌ನಲ್ಲಿ ಆಜಾನ್ ಕೂಗುತ್ತೆ: ಪ್ರತಾಪ್ ಸಿಂಹ