ಮೈಸೂರು: ರೆಬೆಲ್ಸ್‌ಗಳ ಪ್ಲ್ಯಾನ್ ಹೈಜಾಕ್ ಮಾಡಿ ಭಿನ್ನರಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (B.Y Vijayendra) ಶಾಕ್ ಕೊಟ್ಟಿದ್ದಾರೆ. ರೆಬೆಲ್ಸ್ ಬಣದ ಸದಸ್ಯನ ಜೊತೆ ಕಾಫಿ ಕುಡಿದು ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂಬ ಸಂದೇಶವನ್ನು ಅವರು ರವಾನೆ ಮಾಡಿದ್ದಾರೆ.
ಹೌದು! ರಾಜ್ಯ ಬಿಜೆಪಿಯ ಆಂತರಿಕ ಕಲಹ ಮುಗಿಯುದ ಘಟ್ಟಕ್ಕೆ ತಲುಪಿದೆ. ಇದರ ಮಧ್ಯೆ ಸೈಲೆಂಟಾಗಿ ಇದ್ದು ತಮ್ಮ ವಿರುದ್ಧ ನಿಂತಿರುವ ರೆಬೆಲ್ಸ್‌ಗಳಿಗೆ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟಕ್ಕರ್ ಕೊಟ್ಟಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಸಭೆ ಸೇರಿದ್ದ ರೆಬೆಲ್ಸ್ ಟೀಂ, ಮೈಸೂರು ಚಲೋ ಆರಂಭಿಸಬೇಕು ಎಂದು ತಂತ್ರ ರೂಪಿಸಿದ್ದರು. ಅವರ ತಂತ್ರ ಕಾರ್ಯರೂಪಕ್ಕೆ ಬರುವ ಮೊದಲೇ ರಾಜ್ಯಾಧ್ಯಕ್ಷ ವಿಜೇಯಂದ್ರ, ಮೈಸೂರಿನಲ್ಲಿ ಚಲೋ ಸಮರಕ್ಕೆ ಸಾಥ್ ನೀಡಿ ಭಿನ್ನರಿಗೆ ಶಾಕ್ ನೀಡಿದ್ದಾರೆ.
Advertisement
ಮೈಸೂರು ಜಾಥಾಗೆ ಬಿವೈವಿ ಎಂಟ್ರಿ ಭಿನ್ನರು ಎಕ್ಸಿಟ್: ರಾಷ್ಟ್ರ ಸುರಕ್ಷಾ ಜನಾಂದೋಲನ ಸಮಿತಿ ಉದಯಗಿರಿ ಪೊಲೀಸ್ ಠಾಣೆಯ ಮೇಲೆ ನಡೆದ ಮುತ್ತಿಗೆ ವಿರೋಧಿಸಿ ಮೈಸೂರು ಚಲೋ ಜಾಥಾ ಅಯೋಜಿಸಿತ್ತು. ಈ ಜಾಥಾದಲ್ಲಿ ಭಾಗವಹಿಸಲು ಬಿಜೆಪಿಯ ರೆಬೆಲ್ಸ್ ಟೀಮ್ ಸಿದ್ಧತೆ ಮಾಡಿಕೊಂಡಿತ್ತು. ಈ ಬಗ್ಗೆ ಕಳೆದ ಗುರುವಾರ ಸಭೆ ನಡೆಸಿ ಚರ್ಚೆ ಸಹ ನಡೆಸಿದ್ದರು. ಆದರೆ ಅವರ ಕಾರ್ಯತಂತ್ರ ಅಸ್ಥಿತ್ವಕ್ಕೆ ಬರುವ ಮುನ್ನವೇ ಬಿಜೆಪಿ ರಾಜ್ಯಾಧ್ಯಕ್ಷ ಬಿವೈವಿ ಅವರೆಲ್ಲರ ಪ್ಲ್ಯಾನ್ ಉಲ್ಟಾ ಮಾಡಿದ್ದಾರೆ. ತಾವೇ ಮೈಸೂರು ಜಾಥಾಗೆ ಹೋಗುವುದಾಗಿ ಮೊದಲು ಘೋಷಣೆ ಮಾಡಿ ಅವರೆಲ್ಲರ ತಂತ್ರಗಾರಿಕೆಯನ್ನ ಉಲ್ಟಾ ಮಾಡಿದ್ದಾರೆ.
Advertisement
Advertisement
ಯಾವಾಗ ವಿಜಯೇಂದ್ರ ಮೈಸೂರು ಪ್ರತಿಭಟನೆಗೆ ಬರುತ್ತೇವೆ ಎಂದು ಘೋಷಣೆ ಮಾಡಿದ್ರೋ, ಆಗಲೇ ರೆಬೆಲ್ಸ್ ಮೈಸೂರ್ ಚಲೋದಿಂದ ದೂರು ಸರಿದಿದ್ದಾರೆ. ಇತ್ತ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಇಂದು ತನ್ನ ಟೀಮ್ ಜೊತೆ ಮೈಸೂರು ಜಾಥಾ ಆರಂಭಿಸಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಜೊತೆಗೆ ಭಿನ್ನರು ಪ್ರವಾಸ ಮಾಡಬೇಕೆಂದಿದ್ದ ಮೈಸೂರು ಚಲೋಗೂ ಸಹ ರಾಜ್ಯಾದ್ಯಕ್ಷ ಬಿವೈ ವಿಜಯೇಂದ್ರ ಬ್ರೇಕ್ ಹಾಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಈ ಹಿಂದೆ ವಕ್ಫ್ ವಿಚಾರದಲ್ಲಿ ವಿಜೇಯಂದ್ರ ಪ್ಲಾನ್ ಹೈಜಾಕ್ ಮಾಡಿದ್ದ ಭಿನ್ನರಿಗೆ ಮೈಸೂರು ಚಲೋ ಹೈಜಾಕ್ ಮಾಡುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.
Advertisement
ಇದೇ ಸಂದರ್ಭದಲ್ಲಿ ಮೈಸೂರಿನಲ್ಲಿ ಭಿನ್ನಮತ ಮರೆತು ವಿಜೇಯಂದ್ರ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ (Prathap Simha) ಹೋಟೆಲ್ ಒಂದರಲ್ಲಿ ಜೊತೆಯಲ್ಲೇ ಕಾಫಿ ಹೀರಿದ್ದಾರೆ. ಬಳಿಕ ಇಬ್ಬರೂ ಕುಶಲೋಪರಿ ವಿಚಾರಿಸಿದ್ದಾರೆ. ಈ ಮೂಲಕ ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂಬುವುದನ್ನ ಮೆಲ್ನೋಟಕ್ಕೆ ತೋರಿದ್ದಾರೆ.
ಒಟ್ಟಾರೆ ರೆಬೆಲ್ಸ್ ಮಾಡುತ್ತಿದ್ದ ತಂತ್ರವನ್ನು ಇದೀಗ ರಾಜ್ಯಾಧ್ಯಕ್ಷ ವಿಜಯೇಂದ್ರ ಹೈಜಾಕ್ ಮಾಡುವ ಮುಖಾಂತರ ರೆಬೆಲ್ಸ್‌ಗಳಿಗೆ ದೊಡ್ಡ ಹಿನ್ನಡೆ ಉಂಟು ಮಾಡಿದ್ದಾರೆ. ಇದಕ್ಕೆ ರೆಬೆಲ್ಸ್ ಕೌಂಟರ್ ಏನು ಅನ್ನೋದು ಕುತೂಹಲ.