ಜೆ.ಪಿ.ನಡ್ಡಾ ಭೇಟಿಯಾದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

Public TV
2 Min Read
b.y.vijayendra j.p.nadda

ನವದೆಹಲಿ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಜವಾಬ್ದಾರಿ ಸ್ವೀಕರಿಸಿದ ಬಳಿಕ ಬಿ.ವೈ.ವಿಜಯೇಂದ್ರ (B.Y.Vijayendra) ಅವರು ಇಂದು (ಶನಿವಾರ) ದೆಹಲಿಗೆ ತೆರಳಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (J.P.Nadda) ಅವರನ್ನು ಭೇಟಿಯಾಗಿದ್ದಾರೆ.

ಜೆ.ಪಿ.ನಡ್ಡಾ ಅವರ ಜನ್ಮದಿನದಂದೇ ದೆಹಲಿಗೆ ಭೇಟಿ ನೀಡಿರುವ ವಿಜಯೇಂದ್ರ ನಾಯಕರಿಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ತಮಗೆ ಗುರುತರ ಜವಾಬ್ದಾರಿ ನೀಡಿದ್ದಕ್ಕಾಗಿ ಕೃತಜ್ಞತೆ ಕೂಡ ಸಲ್ಲಿಸಿದ್ದಾರೆ. ಇದನ್ನೂ ಓದಿ: ಲೋಕಸಭೆಗೆ ಮುನ್ನ ಮೋದಿಗೆ ಅಗ್ನಿಪರೀಕ್ಷೆ; ತೆಲಂಗಾಣ ಆಪರೇಷನ್ ತಪ್ಪಿಸಲು ಕರ್ನಾಟಕ ಕಾಂಗ್ರೆಸ್ ಕವಚ

ನಡ್ಡಾ ಭೇಟಿ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ವಿಜಯೇಂದ್ರ, ಪಕ್ಷದ ರಾಜ್ಯಾಧ್ಯಕ್ಷನಾಗಿ ಜವಾಬ್ದಾರಿ ಸ್ವೀಕರಿಸಿದ ತರುವಾಯ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರ ಜನ್ಮದಿನವಾದ ಇಂದೇ ಅವರನ್ನು ಭೇಟಿಯಾಗಿ ಕೃತಜ್ಞತೆ ಸಮರ್ಪಿಸಿ ಆಶೀರ್ವಾದ ಪಡೆದು ಶುಭಾಶಯ ಕೋರುವ ಅಪೂರ್ವ ಸಂದರ್ಭ ಒದಗಿ ಬಂದದ್ದು ಧನ್ಯತೆಯ ಭಾವ ಮೂಡಿಸಿತು ಎಂದು ಬರೆದುಕೊಂಡಿದ್ದಾರೆ.

b.y.vijayendra j.p.nadda 1

ಭಾರತೀಯ ಜನತಾ ಪಾರ್ಟಿಗೆ ಹೊಸ ಚೈತನ್ಯ ತುಂಬಲು ಯುವ ಪೀಳಿಗೆಯನ್ನು ಉತ್ತೇಜಿಸುತ್ತಿರುವ ಮಾನ್ಯ ನಡ್ಡಾ ಜೀ ಅವರು ನನ್ನ ಬಗ್ಗೆ ಇರಿಸಿರುವ ಅಚಲ ನಂಬಿಕೆಯ ನುಡಿಗಳು ಇಂದು ನನ್ನಲ್ಲಿ ಅದಮ್ಯ ಆತ್ಮವಿಶ್ವಾಸದ ಉತ್ಸಾಹ ಮೂಡಿಸುವುದರೊಂದಿಗೆ, ಬಹು ದೊಡ್ಡ ಹೊಣೆಗಾರಿಕೆಯನ್ನೂ ನೆನಪಿಸಿತು. ವರಿಷ್ಠರು ಇರಿಸಿರುವ ನಿರೀಕ್ಷೆಯ ಗುರಿ ತಲುಪುವುದೇ ನನ್ನ ಮಹಾ ಸಂಕಲ್ಪವಾಗಿದೆ ಎಂದು ಪೋಸ್ಟ್‌ ಹಾಕಿದ್ದಾರೆ. ಇದನ್ನೂ ಓದಿ: ಅಯೋಧ್ಯ ಏರ್‌ಪೋರ್ಟ್‌ ಡಿ.15ಕ್ಕೆ ಸಿದ್ಧ – ‘ಮರ್ಯಾದಾ ಪುರುಷೋತ್ತಮ ಶ್ರೀರಾಮ್ ಅಂತಾರಾಷ್ಟ್ರೀಯ ಏರ್‌ಪೋರ್ಟ್‌’ ಎಂದು ಹೆಸರು

ಜೆ.ಪಿ.ನಡ್ಡಾ ಭೇಟಿ ಸಂದರ್ಭದಲ್ಲಿ ವಿಜಯೇಂದ್ರ ಜೊತೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್‌ ಜಿ.ವಿ. ಉಪಸ್ಥಿತರಿದ್ದರು.

Share This Article