ಗದಗ: ಮಾಂಸ ತಿಂದು ಬಸವೇಶ್ವರ ದೇವಸ್ಥಾನಕ್ಕೆ ಹೋಗ್ತೇನೆ ಅನ್ನೋದು ಭಂಡತನ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿ.ವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗದಗ ಜಿಲ್ಲೆ ಲಕ್ಷ್ಮೇಶ್ವರದ ಮುಕ್ತಿಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಂಸ ತಿಂದು ದೇವಸ್ಥಾನಕ್ಕೆ ಹೋದ್ರೆ ತಪ್ಪೆನು ಎಂಬ ಈ ಭಂಡತನ ಯಾರೂ ಸಹ ಒಪ್ಪುವುದಿಲ್ಲ. ನಮ್ಮ ನಾಡಿಗೆ ಒಂದು ಸಂಸ್ಕೃತಿ, ಪರಂಪರೆ, ಧಾರ್ಮಿಕ ಶ್ರದ್ಧೆ ಇದೆ. ಇದೆಲ್ಲವನ್ನು ನಂಬಿ ಜೀವನ ಸಾಗಿಸುವ ಅಪಾರ ಜನರು, ಭಕ್ತರು ಇದ್ದಾರೆ. ಆದರೆ ಈ ರೀತಿ ಬಹಿರಂಗವಾಗಿ ಹೇಳಿಕೆ ನೀಡುವುದರಿಂದ ಇತರರ ಮನಸ್ಸಿಗೆ ಘಾಸಿಯನ್ನುಂಟು ಮಾಡಬಾರದು. ನಮ್ಮ ನಡುವಳಿಕೆ ಇತರರಿಗೆ ಮಾದರಿಯಾಗಬೇಕು ಎಂದಿದ್ದಾರೆ.
ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದೇ ಬಿಟ್ಟಿದೇವೆ ಎನ್ನುವ ಅತಿಯಾದ ಆತ್ಮವಿಶ್ವಾಸದಲ್ಲಿ ಮುನ್ನುಗ್ಗುತ್ತಿದ್ದಾರೆ. ಬಿಎಸ್‌ವೈಗೆ ಉನ್ನತ ಸ್ಥಾನ ಸಿಕ್ಕಿದ್ದು, ಕಾಂಗ್ರೆಸ್‌ಗೆ ಆಘಾತ ಆಗಿದೆ. ವಿಜಯದ ನಾಗಾಲೋಟಕ್ಕೆ ಯಡಿಯೂರಪ್ಪ ಅಡ್ಡಿಯಾಗುತ್ತಾರಲ್ಲ ಅಂತ ಮಾಜಿ ಹಾಗೂ ಭಾವಿ ಮುಖ್ಯಮಂತ್ರಿ ಅಭ್ಯರ್ಥಿಗಳ ಕನಸಿಗೆ ಭಂಗ ಆಗಿದೆ. ಸೋಲಿನ ಭಯಕ್ಕೆ ಸಹಜವಾಗಿ ಮಠ, ದೇವಸ್ಥಾನಕ್ಕೆ ಹೋಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ವ್ಯಕ್ತಿಯ ಗುದದ್ವಾರಕ್ಕೆ ಸ್ಟೀಲ್ ಗ್ಲಾಸ್ ತುರುಕಿದ ಸ್ನೇಹಿತರು – ಮಲ ವಿಸರ್ಜನೆ ಮಾಡಲಾಗದೇ ಪರದಾಡಿದ
ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡಿದರೂ, ಅಧಿಕಾರಕ್ಕೆ ಬರುವುದಿಲ್ಲ ಎಂದು ಗೊತ್ತಾದಿದ್ದರೂ, ಜಾತಿ ವಿಷ ಬೀಜ ಬಿತ್ತುತ್ತಾರೆ. ಹಿಂದೆಯೂ ಕೂಡಾ ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿಗಳು, ಹಿರಿಯ ನಾಯಕರು ಜಾತಿ, ಜಾತಿಗಳ ನಡುವೆ ವಿಷಬೀಜ ಬಿತ್ತಿದ್ದರು. ಅದು ಯಶಸ್ವಿಯಾಗಿರಲಿಲ್ಲ. ಆದರೆ ವೀರಸಾವರ್ಕರ್ ಅವರಂಥವರನ್ನು ರಸ್ತೆ ಮೇಲೆ ತಂದು ಅವಮಾನ ಮಾಡುತ್ತಿದ್ದಾರೆ. ಇದು ಯಾರಿಗೂ ಶೋಭೆ ತರುವಂಥದ್ದಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅವಹೇಳನಕಾರಿ ಹೇಳಿಕೆ ಶೋಭೆ ತರುವುದಿಲ್ಲ. ಇತ್ತೀಚಿಗೆ ಬಿಜೆಪಿಯಲ್ಲಾದ ರಾಜಕೀಯ ಬೆಳವಣಿಯಿಂದ ಕಾಂಗ್ರೆಸ್‌ಗೆ ಹಿನ್ನೆಡೆಯಾಗಿದೆ. ಮೊಟ್ಟೆ ಎಸಿದಿದ್ದು ಯಾರು ಅಂತ ಮೊಟ್ಟೆ ಎಸೆದವನೇ ಹೇಳಬೇಕು ಎಂದು ತಿರುಗೇಟು ನೀಡಿದ್ದಾರೆ.