ಕೆಜಿಎಫ್ ಕೂಲಿ ಕಾರ್ಮಿಕ ಬಿ.ಸುರೇಶ್!

Public TV
1 Min Read
KGF B Suresh

ಬೆಂಗಳೂರು: ಈಗಾಗಲೇ ನಿರ್ದೇಶಕರಾಗಿ ಹೆಸರು ಮಾಡಿರುವ ಬಿ. ಸುರೇಶ್ ನಟರಾಗಿಯೂ ಪರಿಚಿತರು. ಸದ್ಯ ದರ್ಶನ್ ಅಭಿನಯದ ಯಜಮಾನ ಚಿತ್ರದ ನಿರ್ಮಾಪಕರೂ ಆಗಿರೋ ಸುರೇಶ್ ಕೆಜಿಎಫ್ ಮೂಲಕ ಸದ್ದು ಮಾಡುತ್ತಿದ್ದಾರೆ. ಯಾಕಂದ್ರೆ ಅವರು ಕೆಜಿಎಫ್ ಚಿತ್ರದಲ್ಲಿ ನಟನಾಗಿ ಯಶ್ ಅವರಿಗೆ ಸಾಥ್ ನೀಡಿದ್ದಾರೆ!

ಸುರೇಶ್ ಅವರು ಕೆಜಿಎಫ್ ನಲ್ಲಿ ನಟಿಸಿರೋ ಫೋಟೋವೊಂದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸುರೇಶ್ ಇಲ್ಲಿ ಗಣಿ ಕಾರ್ಮಿಕನಾಗಿ ನಟಿಸಿದ್ದಾರಂತೆ. ಈ ಪಾತ್ರದ ಮೂಲಕವೇ ಚಿತ್ರದುದ್ದಕ್ಕೂ ಯಶ್ ಜೊತೆಗೂ ಅವರೇ ಹೆಚ್ಚಾಗಿ ಕಾಣಿಸಿಕೊಳ್ಳಲಿದ್ದಾರಂತೆ.

B Suresh

ಈವರೆಗೂ ಸಾಕಷ್ಟು ಸದಭಿರುಚಿಯ ಧಾರಾವಾಹಿ ಹಾಗೂ ಸಿನಿಮಾ ನಿರ್ದೇಶನದ ಮೂಲಕವೇ ಮನೆ ಮಾತಾಗಿರುವವರು ಬಿ ಸುರೇಶ್. ಹಲವಾರು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಆದರೆ ಕೆಜಿಎಫ್ ಚಿತ್ರದ ಈ ಪಾತ್ರ ನಟನಾಗಿ ಅವರಿಗೆ ಬೇರೆಯದ್ದೇ ಆವೇಗ ತಂದುಕೊಡಲಿದೆ ಎಂಬ ಮಾತುಗಳೀಗ ವ್ಯಾಪಕವಾಗಿ ಕೇಳಿ ಬರಲಾರಂಭಿಸಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *