BellaryDistrictsLatestMain Post

ನೀವು ಕುರ್ಚಿಗಾಗಿ ರಾಜಕಾರಣ ಮಾಡುತ್ತೀರಿ, ನಾವು ಅಭಿವೃದ್ಧಿಗಾಗಿ ರಾಜಕೀಯ ಮಾಡುತ್ತೇವೆ: ಶ್ರೀರಾಮುಲು

Advertisements

ಬಳ್ಳಾರಿ: ಕಾಂಗ್ರೆಸ್ ನಾಯಕರು ನೀರಿಗಾಗಿ ನಡೆಗೆಯನ್ನು ಪ್ರಾರಂಭ ಮಾಡಿದ್ದಾರೆ. 5 ದಿನ ನಡೆಯುತ್ತಿರುವ ಮೇಕೆದಾಟು ಪಾದಯಾತ್ರೆ (mekedatu padayatra) ಕುರಿತಾಗಿ ಸಚಿವ ಶ್ರೀರಾಮುಲು (B Sriramulu) ಮಾತನಾಡಿ ಆಕ್ರೋಶ ಹೊರ ಹಾಕಿದ್ದಾರೆ.

ಬಳ್ಳಾರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ (Congress) ನೀರಿಗಾಗಿ ಪಾದಯಾತ್ರೆ ಮಾಡುತ್ತಿದೆ, ಎನ್ನುವುದು ದೊಡ್ಡ ನಾಟಕವಾಗಿದೆ. ಪಾದಯಾತ್ರೆಯ ಮೂಲಕ ಕಾಂಗ್ರೆಸ್ ಜನರ ಹಾದಿ ತಪ್ಪಿಸುತ್ತಿದೆ. ಕಾಂಗ್ರೆಸ್ ನೀರಿನ ವಿಚಾರದಲ್ಲಿ ರಾಜಕಾರಣ ಮಾಡುತ್ತುದೆ. ಚುನಾವಣೆ ಬರುತ್ತಿದೆ ಎನ್ನುವ ಕಾರಣಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಅನ್ನ, ನೀರು, ಮೊಬೈಲ್ ಚಾರ್ಜಿಂಗ್ ಮಾಡಲಾಗದೆ ವಿದ್ಯಾರ್ಥಿಗಳ ಪರದಾಟ

ಕಾಂಗ್ರೆಸ್‍ನಲ್ಲಿ ಡಜನ್ ಗಟ್ಟಲೆ ನಾಯಕರಿದ್ದಾರೆ. ಯಾರು ಕ್ಯಾಪ್ಟನ್ ಆಗಬೇಕು ಎನ್ನುವ ಗೊಂದಲ ನಿಮಲ್ಲಿ ಇದೆ. ಇಷ್ಟು ದಿನ ನೀವು ಅಧಿಕಾರದಲ್ಲಿ ಇದ್ದೀರಿ, ಆಗ ಯಾಕೆ ಮೇಕೆದಾಟು ಯಾಕೆ ನೆನಪು ಆಗಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: SEBIಗೆ ಅಧ್ಯಕರಾಗಿ ಮೊದಲ ಬಾರಿಗೆ ಮಹಿಳೆ ನೇಮಕ

ನೀವು ಕುರ್ಚಿ ಸಲುವಾಗಿ ರಾಜಕಾರಣ ಮಾಡುತ್ತೀರಿ, ನಾವು ಅಭಿವೃದ್ಧಿಗಾಗಿ ರಾಜಕೀಯ ಮಾಡುತ್ತೇವೆ. ನಮ್ಮದು ಡಬಲ್ ಇಂಜಿನ್ ಸರ್ಕಾರ, ಕೇಂದ್ರದಲ್ಲಿ ಮೋದಿ ಇದ್ದಾರೆ. ರಾಜ್ಯದಲ್ಲಿ ಬೊಮ್ಮಾಯಿ ಅವರ ಸರ್ಕಾರ ಇದೆ. ನಮ್ಮ ಸರ್ಕಾರ ಅಭಿವೃದ್ಧಿ ಪರವಾಗಿ ಕೆಲಸ ಮಾಡುವ ಸರ್ಕಾರ ಎಂದು ಹೇಳುವ ಮೂಲಕವಾಗಿ ವಿರೋದ ಪಕ್ಷವಾದ ಕಾಂಗ್ರೆಸ್‍ಗೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:  ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ಬಯಲು- 1000 ಕೋಟಿಗೂ ಅಧಿಕ ಅಕ್ರಮ ಪತ್ತೆ

Leave a Reply

Your email address will not be published.

Back to top button