ಬಳ್ಳಾರಿ: ಸೋನಿಯಾ ಗಾಂಧಿ ಒಂದು ರಥಕ್ಕೆ ಎರಡು ಕುರುಡು ಕುದುರೆ ಕಟ್ಟಿದ್ದಾರೆ ಎಂದು ಸಾರಿಗೆ ಸಚಿವ ಬಿ. ಶ್ರಿರಾಮುಲು ಅವರು ಕಾಂಗ್ರೆಸ್ ಪಕ್ಷದ ಕುರಿತಾಗಿ ವ್ಯಂಗ್ಯವಾಡಿದ್ದಾರೆ.
ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಳ್ಳಾರಿ ಜಿಲ್ಲಾ ವಿಧಾನ ಪರಿಷತ್ ಚುನಾವಣಾ ಬಿಜೆಪಿ ಅಭ್ಯರ್ಥಿ ವೈ.ಎಂ ಸತೀಶ್ ಅವರ ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಅವರು, ಸೋನಿಯಾ ಗಾಂಧಿಯವರು ಒಂದು ರಥಕ್ಕೆ ಎರಡು ಕುರುಡು ಕುದುರೆ ಕಟ್ಟಿದ್ದಾರೆ. ಆ ಎರಡು ಕುರುಡು ಕುದುರೆಗಳು ಒಂದರ ಮುಖ ಒಂದು ನೋಡಲ್ಲಾ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಸಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯಾ ಅವರ ಕುರಿತು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ಕುರುಡು ಕುದುರೆಗಳಂತೆ ಕಣ್ಣಿಗೆ ಪಟ್ಟಿ ಕಟ್ಕೊಂಡು ರಾಜಕಾರಣ ಮಾಡ್ತಿವೆ: ಶ್ರೀರಾಮುಲು
ಸಿಎಂ ಆಗೋ ಬಗ್ಗೆ ಎರಡು ಕುರುಡು ಕುದುರೆ ಕನಸು ಕಾಣುತ್ತಿವೆ. 2023ರ ಚುನಾವಣೆ ಬೇಡ ಈ ಚುನಾವಣೆಯಲ್ಲಿ ಮೊದಲು ಗೆಲ್ಲಲಿ. ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲದೇ ಅಭ್ಯರ್ಥಿಯನ್ನು ಅಯ್ಕೆ ಮಾಡಿದ್ದೇವೆ. ಹೀಗಾಗಿ ರಾಜ್ಯ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಲ್ಲಿ ಯಾವುದೇ ಗೊಂದಲ ಇಲ್ಲಾ. ಯಡಿಯೂರಪ್ಪ ನೇತೃತ್ವದಲ್ಲಿ ಜನಸ್ವರಾಜ್ ಯಾತ್ರೆ ಯಶಸ್ವಿಯಾಗಿದೆ. ಬಿಜೆಪಿ ಗೆಲ್ಲಿಸಬೇಕೆಂದು ಸ್ಥಳೀಯ ಸಂಸ್ಥೆ ಸದಸ್ಯರು ನಿರ್ಧಾರ ಮಾಡಿದ್ದಾರೆ ಹೀಗಾಗಿ ರಾಜ್ಯದಲ್ಲಿ 20 ಅಭ್ಯರ್ಥಿಗಳಲ್ಲಿ 16ರಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಬರ್ಬಾದ್ ಆಗಿ ಹೋಗಿದೆ: ಅಶ್ವತ್ಥ್ ನಾರಾಯಣ್